ಶಾಂತಿಯುತ ಚುನಾವಣೆಗೆ ಸನ್ನದ್ಧ
ಕ.ಪ್ರ.ವಾರ್ತೆ , ಕಡೂರು , ಮೇ 4
ವಿಧಾನಸಭಾ ಚುನಾವಣೆ ಮತದಾನದ ಸಮಯ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ನಿಗದಿಪಡಿಸಿ ಆಯೋಗ ಆದೇಶ ಹೊರಡಿಸಿದ್ದು, ಶಾಂತಿಯುತ ಮತ್ತು ವ್ಯವಸ್ಥಿತ ಚುನಾವಣೆ ನಡೆಸಲು ಚುನಾವಣಾ ಸಮಿತಿಯಿಂದ ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ವೆಬ್ ಕಾಸ್ಟ್ ಕೇಂದ್ರ ತೆರೆದು ಅತಿ ಸೂಕ್ಷ್ಮ ಪ್ರದೇಶಗಳಿರುವ ಮೂರು ಮತಗಟ್ಟೆಗಳಲ್ಲಿ ವೆಬ್ ಕ್ಯಾಮೆರಾ ಅಳವಡಿಸುವ ಮೂಲಕ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.
ಚುನಾವಣೆಯಲ್ಲಿ 2013 ಜನವರಿ 1ರ ಜನಗಣತಿಯಂತೆ ಕಡೂರು ಕ್ಷೇತ್ರದಲ್ಲಿ 89,900 ಪುರುಷ ಮತದಾರರು, 89,631 ಮಹಿಳೆಯರು ಮತ್ತು ಹೊಸ ಮತದಾರರ ಪಟ್ಟಿ ಸೇರ್ಪಡೆಯಿಂದಾಗಿ ಒಟ್ಟು 1.82 ಲಕ್ಷ ಮತದಾರರು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ.
ವಿಶೇಷ ಮತಗಟ್ಟೆ: ವಿಶೇಷ ಮತಗಟ್ಟೆಗಳಾದ ಹಿರೇನಲ್ಲೂರು ಸ.ಹಿ.ಪ್ರಾ. ಶಾಲೆ, ಯಗಟಿ ಸ.ಹಿ.ಪ್ರಾ. ಶಾಲೆ ಮತ್ತು ಕಡೂರು ಪಟ್ಟಣದ ಫಾರೆಸ್ಟ್ ಆಫೀಸ್ನ ಮತಗಟ್ಟೆ ಕೇಂದ್ರಗಳಲ್ಲಿ ಇದೇ ಪ್ರಥಮ ಭಾರಿಗೆ ವೆಬ್ ಕ್ಯಾಮೆರಾ ಅಳವಡಿಕೆ ಸೇರಿದಂತೆ 122 ಸೂಕ್ಷ್ಮ ,75 ಅತಿಸೂಕ್ಷ್ಮ ಮತ್ತು 30 ಸಾಮಾನ್ಯ ಮತಗಟ್ಟೆ ಸೇರಿ 236 ಮತಗಟ್ಟೆಗಳಿದ್ದು, 136 ಮತಗಟ್ಟೆ ಅಧಿಕಾರಿಗಳು ಕರ್ತವ್ಯ ನಿರ್ವಹಿಸಲಿದ್ದಾರೆ.
ಈಗಾಗಲೇ ಅಕ್ರಮಗಳ ಕಡಿವಾಣಕ್ಕೆ ಕಡೂರು ಕ್ಷೇತ್ರದ ಕುಂಕಾನಾಡು, ಪಂಚನಹಳ್ಳಿ, ಮತಿಘಟ್ಟ ಮತ್ತು ಚೌಳಹಿರಿಯೂರಿನಲ್ಲಿ ಪೊಲೀಸ್ ಇಲಾಖೆಯಿಂದ ಚೆಕ್ ಪೋಸ್ಟ್ ತೆರೆಯಲಾಗಿದೆ.
7ತಂಡಗಳು: ಚುನಾವಣೆಯಲ್ಲಿ ಮತದಾನಕ್ಕೆ ಎಲ್ಲಿಯೂ ಲೋಪವಾಗದಂತೆ 7ಎಂಸಿಸಿ ತಂಡಗಳು ಕಾರ್ಯನಿರ್ವಹಿಸುತ್ತಿದ್ದು, ಮತಗಟ್ಟೆಗಳಿಗೆ ಬಿಒಸಿಗಳಿಂದ ಮಾಹಿತಿ ಪಡೆದು ಅಗತ್ಯವಿರುವ ಸವಲತ್ತು ಒದಗಿಸಲಾಗಿದೆ. ಎಲ್ಲರೂ ಮತದಾನದಲ್ಲಿ ಕಡ್ಡಾಯವಾಗಿ ಪಾಲ್ಗೊಂಡು ಶೇಕಡವಾರು ಮತದಾನ ಹೆಚ್ಚಾಗಲು ಈಗಾಗಾಲೇ ಚುನಾವಣಾ ಆಯೋಗದಿಂದ ಜಾಗೃತಿ ಕಾರ್ಯಕ್ರಮ ನಡೆಸಲಾಗಿದೆ.
ಹೊಸಬರ ಸೇರ್ಪಡೆಯಿಂದಾಗಿ ಈ ಬಾರಿ ಒಟ್ಟು 1.82 ಲಕ್ಷ ಮತದಾರರು ಮತದಾನ ಮಾಡಲಿದ್ದಾರೆ. ಸಾರ್ವಜನಿಕರು ಚುನಾವಣೆಗೆ ಸಂಬಂಧಿಸಿದಂತೆ ತಮ್ಮ ಮನವಿ ಹಾಗೂ ದೂರುಗಳನ್ನು 18004252014 ನ ಫ್ರೀ ಟೋಲ್ಗೆ ಸಂಪರ್ಕಿಸಿ ಮಾಹಿತಿ ನೀಡಬಹುದು.
5 ಹಂತದ ವೀಕ್ಷಕರು: ಸಾಮಾನ್ಯ ವೀಕ್ಷಕರು, ವೆಚ್ಚದ ವೀಕ್ಷಕರು, ಜಾಗೃತಿ ವೀಕ್ಷಕರು, ಪೋಲಿಸ್ ವೀಕ್ಷಕರು, ಸೂಕ್ಷ್ಮ ವೀಕ್ಷಕರು ಸೇರಿ 5 ಹಂತದ ವೀಕ್ಷಕರು ನೇಮಕವಾಗಿದ್ದು, ವಿವಿಧ ಇಲಾಖೆಗಳಿಂದ 1,603 ಮಂದಿ ಸಿಬ್ಬಂದಿಯನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. 38 ಚುನಾವಣಾ ಮಾರ್ಗ ರಚಿಸಿದ್ದು, 32 ಜೀಪುಗಳನ್ನು ಒದಗಿಸಲಾಗಿದೆ.
ಚುನಾವಣೆಗೆ ಹೆಚ್ಚುವರಿ ಸೇರಿದಂತೆ 272 ಮತ ಯಂತ್ರಗಳನ್ನು ಆಯೋಗ ನೀಡಿದೆ. ಈ ಬಗ್ಗೆ ವಿವರ ನೀಡಿರುವ ಚುನಾವಣಾ ಅಧಿಕಾರಿ ಲಕ್ಷ್ಮೀನರಸಯ್ಯ ಮತ್ತು ಸಹಾಯಕ ಚುನಾವಣಾಧಿಕಾರಿ ಎನ್.ಕೆ. ಶಾರದಾಂಬರವರು ಮಾಹಿತಿ ನೀಡಿ, ಈ ಹಿಂದೆ ಮತದಾನಕ್ಕೆ ಇದ್ದ ಸಮಯವನ್ನು ಚುನಾವಣಾ ಆಯೋಗ ಬದಲಿಸಿ ಇದೀಗ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ನಿಗದಿಪಡಿಸಿದ್ದು ಶೇಕಡವಾರು ಮತದಾನ ಹೆಚ್ಚಳವಾಗುವಂತೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ ಎಂದರು.
ಅಗತ್ಯ ಕ್ರಮ: ಚುನಾವಣೆಯನ್ನು ಪಾರದರ್ಶಕ ಮತ್ತು ಶಾಂತಿಯುತಾಗಿ ನಡೆಸಲು ಮಿಲಿಟರಿ ಸೇನಾಪಡೆ,ಪೋಲೀಸ್ ಸಿಬ್ಬಂದಿ, ಗೃಹರಕ್ಷಕ ದಳ ಮತ್ತು ಅಬಕಾರಿ ಇಲಾಖೆಯೊಂದಿಗೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಶಾಂತಿಯುತವಾಗಿ ಚುನಾವಣೆ ನಡೆಸಲು ಅಗತ್ಯ ಕ್ರಮ ಕೈಗೊಂಡಿದ್ದು, ಮತದಾರರು ಮತದಾನ ಪ್ರಕ್ರಿಯೆಯಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಚುನಾವಣೆ: ಬಿಗಿ ಬಂದೋಬಸ್ಶೃಂಗೇರಿ: ಭಾನುವಾರ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಬಿಗಿ ಬಂದೋ ಬಸ್ತ್ ಆಯೋಜಿಸಲಾಗಿದೆ. ಒಟ್ಟು 49 ಮತಗಟ್ಟೆಗಳಿದ್ದು, ಅವುಗಳಲ್ಲಿ 21 ಅತಿಸೂಕ್ಷ್ಮ, 7 ಸೂಕ್ಷ್ಮ, 21 ಸಾಮಾನ್ಯ ಮತಗಟ್ಟೆಗಳೆಂದು ವಿಂಗಡಿಸಲಾಗಿದೆ.
ಅತಿ ಸೂಕ್ಷ್ಮ ಮತಗಟ್ಟೆಗಳಿಗೆ ಸೂಕ್ಷ್ಮ ವೀಕ್ಷಕರನ್ನು, ಸೂಕ್ಷ ಮತಗಟ್ಟೆಗಳಿಗೆ ವೀಡಿಯೋ ಕ್ಯಾಮರ ಅಳವಡಿಸಲಾಗಿದೆ. ಒಟ್ಟು 249 ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ. ನಕ್ಸಲ್ ಪ್ರಭಾವಿತ ಪ್ರದೇಶಗಳನ್ನು ಅತಿ ಸೂಕ್ಷ್ಮ ಮತಗಟ್ಟೆಗಳೆಂದು ಘೋಷಿಸಲಾಗಿದ್ದು, ಕೆಎಸ್ಆರ್ಪಿ, ಸಿಪಿಎಂಎಫ್ ಸಿಬ್ಬಂದಿಗಳನ್ನು ಆಯೋಜಿಸಲಾಗಿದೆ.
ಉಳಿದಂತೆ ಎಲ್ಲಾ ಮತಗಟ್ಟೆಗಳಿಗೂ ಪೊಲೀಸ್ ಕಾವಲು ಹಾಕಲಾಗಿದೆ.
ಮದ್ಯ ಮಾರಾಟ ನಿಷೇಧಿಸಲಾಗಿದ್ದು, ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗಿದೆ. ತೀವ್ರ ನಿಗಾ ಕಟ್ಟೆಚ್ಚರ ವಹಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

