ಚಿಕ್ಕಮಗಳೂರು

ಕಡೂರು ತಾ. ಶೇ.75 ಮತದಾನ

Published On :

ಕ.ಪ್ರ.ವಾರ್ತೆ, ಕಡೂರು,  ಮೇ 5
ಕಡೂರು ವಿಧಾನಸಭಾ ಚುನಾವಣೆಯು ಶಾಂತಿಯುತವಾಗಿ ನಡೆದು ಮತದಾನ ಮಾಡಿದ ವ್ಯಕ್ತಿ ಹೃದಯಾಘಾತದಿಂದ ಅಸುನೀಗಿದರೆ, ಕೆಲವೆಡೆ ಸಣ್ಣಪುಟ್ಟ ಮಾತಿನ ಚಕಮಕಿ ನಡೆದು, ಕೆಲವೆಡೆ ಮತ ಯಂತ್ರಗಳು ಕೈಕೊಟ್ಟು ನಂತರ ಸರಿಪಡಿಸಿ ಮತದಾನಕ್ಕೆ ಅವಕಾಶ ನೀಡುವ ಮೂಲಕ ಶೇ.75ರಷ್ಟು ಮತದಾನ ನಡೆದು ಶಾಂತಿಯುತವಾಗಿ ನಡೆದ ಚುನಾವಣೆಗೆ ತೆರೆಬಿದ್ದಿತು.
ಈ ಬಾರಿ ಮತದಾನದ ಸಮಯ ವಿಸ್ತರಣೆಯಾಗಿರುವ ಹಿನ್ನೆಲೆಯಲ್ಲಿ ಬೆಳಗಿನಿಂದಲೇ ಬಿರುಸಿನ ಮತದಾನವು ಕ್ಷೇತ್ರದ ಎಲ್ಲೆಡೆ ಆರಂಭಗೊಂಡಿತ್ತು. ಬಿಸಿಲಿನಿಂದಾಗಿ ಬೆಳಿಗ್ಗೆಯಿಂದಲೇ ಮತದಾನ ಆರಂಭವಾಗಿದ್ದು ಕಡೂರು ವಿಧಾನಸಭಾ ಕ್ಷೇತ್ರದ 5 ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳಲ್ಲಿಯೂ ಯಾವುದೇ ಗಲಾಟೆ ಆಗದೆ ಶಾಂತಿಯುತ ಮತದಾನ ನಡೆಯಿತು.
ಮಾತನ ಚಕಮಕಿ: ಗ್ರಾಮಾಂತರ ಪ್ರದೇಶದಲ್ಲಿ ಅಲ್ಲಲ್ಲಿ ಸಣ್ಣಪುಟ್ಟ ಮಾತಿನ ಚಕಮಕಿ ನಡೆದರೆ ಹೇಳಿಕೊಳ್ಳುವಂತಹ ಗಲಾಟೆ ಅಥವಾ ದೊಂಬಿಯಾಗಲಿ ನಡೆಯದೆ ಪ್ರಥಮ ಭಾರಿಗೆ ಚುನಾವಣಾ ಆಯೋಗವು ಶಾಂತಿ ಮತ್ತು ಸುವ್ಯವಸ್ಥಿತವಾಗಿ ಚುನಾವಣೆಯು ಪಾರದರ್ಶವಾಗಿ ನಡೆಯಬೇಕೆಂಬ ದೃಷ್ಟಿಯಿಂದ ಕೈಗೊಂಡಿದ್ದ ಕಟ್ಟುನಿಟ್ಟಿನ ಕ್ರಮದಿಂದಾಗಿ ಯಾವ ಅಹಿತಕರ ಘಟನೆಗಳೂ ಜರುಗದೇ ಇರುವುದೇ ಈ ಭಾರಿಯ ಚುನಾವಣೆಯ ವಿಶೇಷವಾಯಿತು.                                                              
ಕೈಕೊಟ್ಟ ಯಂತ್ರ: ಕಡೂರು ಪಟ್ಟಣದ ಸುಭಾಷ್ ನಗರದ 18ನೇ ವಾರ್ಡಿನ ಮತಗಟ್ಟೆ ಸಂಖ್ಯೆ 112 ರಲ್ಲಿ ಮತ ಯಂತ್ರದಲ್ಲಿ ದೋಷ ಕಾಣಿಸಿಕೊಂಡು ಮತದಾನಕ್ಕೆ ವಿಳಂಬವಾಯಿತು. ನಂತರ ಅಧಿಕಾರಿಗಳು ಸಹಾಯಕ ಚುನಾವಣಾಧಿಕಾರಿಗಳಿಗೆ ವಿಷಯ ತಿಳಿಸುತ್ತಿದ್ದಂತೆಯೇ ಸ್ಥಳಕ್ಕೆ ಚುನಾವಣಾಧಿಕಾರಿಗಳು ಆಗಮಿಸಿ ಕ್ರಮ ಕೈಗೊಂಡರು.
ಶತಾಯುಷಿ ಮತದಾನ: ತಂಗಲಿ ತಾಂಡ್ಯದ 104 ವರ್ಷದ ಶತಾಯುಷಿ ಬಾಲಾಜಿನಾಯ್ಕ ಮತ್ತು 95 ವರ್ಷದ ಪತ್ನಿ ಗಂಗೀಬಾಯಿಯವರು ದಂಪತಿ ಸಮೇತ 14ನೇ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆಯಲ್ಲಿ ಭಾಗಹಿಸುವ ಮೂಲಕ ತಮ್ಮ ಸಂತಸ ಹಂಚಿಕೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.