ಚಿಕ್ಕಮಗಳೂರು

'ಪ್ರೀತಿ ರಾಜಕಾರಣ ಬೆಳೆಸಿದ ದತ್ತ'

Published On :

ಕ.ಪ್ರ.ವಾರ್ತೆ  ಕಡೂರು   ಮೇ 6
ಮೇ 5 ರಂದು ನಡೆದ ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ವೈ.ಎಸ್.ವಿ. ದತ್ತರವರ ಜಾತಿ ರಾಜಕಾರಣ ಅಳಿಸಿ ಪ್ರೀತಿ ರಾಜಕಾರಣ ಬೆಳೆಸಿ ಎಂಬ ಮಾತಿಗೆ ಕ್ಷೇತ್ರದ ಮತದಾರರು ಮೌಲ್ಯ ನೀಡುವ ಮೂಲಕ ಬೆಂಬಲಿಸಿ ಮತ ನೀಡಿದ್ದು  ಜೆಡಿಎಸ್ ಪಕ್ಷವು ಗೆಲುವು ಸಾಧಿಸಲಿದೆ ಎಂದು ಯುವ ಜೆಡಿಎಸ್ ಜಿಲ್ಲಾ ಕಾರ್ಯದರ್ಶಿ ಮಂಜುನಾಥ ಪ್ರಸನ್ನ ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ತಮ್ಮದೇ ಆದ ಸರಳತೆ ಹಾಗೂ ಜನರ ಪ್ರೀತಿಯಿಂದ ಜನರಿಗೆ ಹತ್ತಿರವಾಗುವ ನಿಟ್ಟಿನಲ್ಲಿ ಕಳೆದ 2007 ರಿಂದಲೂ ಕ್ಷೇತ್ರದ ಜನರ ಧ್ವನಿಯಾಗಿ ಎಲ್ಲ ವರ್ಗದ ಜನರ ಪ್ರೀತಿ ಸಂಪಾದಿಸಿರುವ ದತ್ತರವರಿಗೆ ಕ್ಷೇತ್ರದ ಎಲ್ಲ ಸಮುದಾಯಗಳು ಚುನಾವಣೆಯಲ್ಲಿ ಬೆಂಬಲಿಸಿ ಮತ ನೀಡಿದ್ದು, ಜನರ ಪ್ರೀತಿ ಮತ್ತು ಒಲವು ಗಳಿಸಿರುವ ದತ್ತರವರ ಗೆಲುವು ಖಚಿತವಾಗಿದೆ ಎಂದು ಹೇಳಿದ್ದಾರೆ.
ಕ್ಷೇತ್ರದಲ್ಲಿ ಮೊಟ್ಟ ಮೊದಲ ಭಾರಿಗೆ ಜಾತಿ ರಾಜಕಾರಣ ಅಳಿಸಿ ಪ್ರೀತಿ ರಾಜಕಾರಣ ಬೆಳೆಸಿ ಎಂದು ಕ್ಷೇತ್ರದ ಮತದಾರರಿಗೆ ಕರೆಕೊಡುವ ಮೂಲಕ ಜನರು ಜೆಡಿಎಸ್ ಪಕ್ಷದತ್ತ ಒಲವು ತೋರಿಸುವಂತೆ ಮಾಡಿದ ದತ್ತಾರವರು, ತಮ್ಮ ವಿಧಾನ ಪರಿಷತ್ ಸದಸ್ಯರ ಅವಧಿಯಲ್ಲಿಯೂ ಕೋಟ್ಯಂತರ ರೂ. ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಜನರ ಮತ್ತು ಕ್ಷೇತ್ರದ ಅಭಿವೃದ್ಧಿಗಾಗಿ ದುಡಿದಿದ್ದಾರೆ.
ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಲೋಕಸಭಾ ಸದಸ್ಯರ ನಿಧಿಯಿಂದಲೂ ಅನುದಾನ ತರುವ ಮೂಲಕ ಕಡೂರು ಕ್ಷೇತ್ರದಲ್ಲಿ ಸಮುದಾಯಭವನಗಳು, ಶಾಲಾ ಕಟ್ಟಡಗಳು, ರಸ್ತೆಗಳ ನಿರ್ಮಾಣಕ್ಕೆ ಆದ್ಯತೆ ನೀಡಿ ಎಲ್ಲ ವರ್ಗದ ಜನರು ಜೆಡಿಎಸ್ಪ್‌ಕ್ಷವನ್ನು ಬೆಂಬಲಿಸುವಂತೆ ಮಾಡಿದ ಕಾರ್ಯಗಳಿಂದಾಗಿ ಜಾತ್ಯಾತೀತವಾಗಿ ಎಲ್ಲ ವರ್ಗಗಳೂ ಕೂಡ ವೈ.ಎಸ್.ವಿ. ದತ್ತರವರನ್ನು ಬೆಂಬಲಿಸಿ ಆಶೀರ್ವದಿಸಿರುವ ಹಿನ್ನೆಲೆಯಲ್ಲಿ ಕಡೂರು ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವು ಗೆಲುವು ಸಾಧಿಸಲಿದೆ ಎಂದು ಪ್ರಸನ್ನ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.