ದರ್ಶಿನಿಗೆ ಶೇ. 100
ಶೃಂಗೇರಿ: ಸೋಮವಾರ ಪ್ರಕಟವಾದ ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ಪಟ್ಟಣದ ದರ್ಶಿನಿ ಶಾಲೆ ಶೇ. 100 ಫಲಿತಾಂಶ ಪಡೆದು ಸಾಧನೆ ಮಾಡಿದೆ. ಈ ಶಾಲೆಯ ವಿದ್ಯಾರ್ಥಿನಿ ಎಂ.ಎಂ. ಕುಫೈಲ 577 (ಶೇ 92.56) ಅಂಕಗಳಿಸಿ ಸಾಧನೆ ಮಾಡಿದ್ದಾರೆ. ಶಾಲೆಗೆ ಉತ್ತಮ ಫಲಿತಾಂಶ ತಂದು ಕೊಟ್ಟ ವಿದ್ಯಾರ್ಥಿಗಳನ್ನು ಶಾಲಾ ಮುಖ್ಯೋಪಾಧ್ಯಾಯರು, ಬೋಧಕೇತರ ವರ್ಗ ಅಭಿನಂದಿಸಿದೆ.
10ರಂದು ಔಷಧ ವ್ಯಾಪಾರ ಬಂದ್
ಶಿವಮೊಗ್ಗ: ಕೇಂದ್ರ ಸರ್ಕಾರದ ಔಷಧಿ ವ್ಯಾಪಾರಿ ವಿರೋಧಿ ನೀತಿಯನ್ನು ವಿರೋಧಿಸಿ ಮೇ10ರಂದು ರಾಷ್ಟ್ರಾದ್ಯಂತ ಔಷಧ ವ್ಯಾಪಾರ ವಹಿವಾಟು ಬಂದ್ ಮಾಡಲಿದ್ದು, ಜಿಲ್ಲೆಯಲ್ಲಿಯೂ ಕೂಡ ಎಲ್ಲಾ ಔಷಧಿ ವ್ಯಾಪಾರಿಗಳು ತಮ್ಮ ವ್ಯಾಪಾರ ವಹಿವಾಟು ಸ್ಥಗಿತಗೊಳಿಸುವಂತೆ ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘ ತಿಳಿಸಿದೆ.
ಔಷಧಿ ವ್ಯಾಪಾರಿಗಳನ್ನು ಬಲಿಪಶು ಮಾಡುತ್ತಿರುವ ಡ್ರಗ್ಸ್ ಅಂಡ್ ಕಾಸ್ಮೆಟಿಕ್ಸ್ ಆಕ್ಟ್ನ ಪರಿಚ್ಛೇದ 19ರ ತಿದ್ದುಪಡಿಮಾಡಬೇಕು, ವಿದೇಶಿ ನೇರ ಬಂಡವಾಳವನ್ನು ಹಿಂಪಡೆಯಬೇಕು, ಫಾರ್ಮಸಿಸ್ಟ್ಗಳ ಕೊರತೆಯನ್ನು ನೀಗಿಸಲು ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಆಕ್ಟ್ನ ಪರಿಚ್:ೇದ 65(15)(ಸಿ)ಗೆ ತಿದ್ದುಪಡಿ ಮಾಡಬೇಕು, ಚಿಲ್ಲರೆ ಔಷಧಿ ವ್ಯಾಪಾರೋದ್ಯಮವನ್ನು ಗಂಡಾಂತರಕ್ಕೆ ಈಡು ಮಾಡಿರುವ ಮತ್ತು ರೋಗಿಗಳಿಗೆ ಅನಾವಶ್ಯಕ ಹೊರೆಯಾಗುತ್ತಿರುವ ವೈದ್ಯರ ಔಷಧಿ ವ್ಯಾಪಾರದ ಕಾನೂನಿಗೆ ಸೂಕ್ತ ತಿದ್ದುಪಡಿ ಮಾಡಬೇಕು, ಔಷಧಿ ಮೇಲಿನ ಲಾಭಾಂಶವನ್ನು ಕಡಿಮೆ ಮಾಡುವ ನೀತಿಯನ್ನು ಕೈಬಿಡಬೇಕು ಎಂದು ಸಂಘದ ಕಾರ್ಯದರ್ಶಿ ಜಿ. ಹಾಲಪ್ಪ ಒತ್ತಾಯಿಸಿದ್ದಾರೆ.
ಅರ್ಜಿ ಆಹ್ವಾನ
ಶಿವಮೊಗ್ಗ: ಬಿ.ಎಚ್. ರಸ್ತೆಯ ಬ್ರಾಹ್ಮಣ ವಿದ್ಯಾರ್ಥಿ ನಿಲಯಲ್ಲಿ ಸಮುದಾಯದ ಪಿಯುಸಿ ಮತ್ತು ಪದವಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ಪ್ರವೇಶಕ್ಕಾಗಿ ತ್ರಿಮತಸ್ಥ ಬ್ರಾಹ್ಮಣ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಜಿಯನ್ನು ವಿದ್ಯಾರ್ಥಿ ನಿಲಯದ ಕಚೇರಿಯಲ್ಲಿ ಪಡೆದುಕೊಳ್ಳಬಹುದು ಎಂದು ನಿಲಯದ ಮೇಲ್ವಿಚಾರಕರು ತಿಳಿಸಿದ್ದಾರೆ.
15ರಂದು ಕ್ರಿಕೆಟ್ ಆಕಾಡೆಮಿ ಉದ್ಘಾಟನೆ
ಶಿವಮೊಗ್ಗ: ಜಿಲ್ಲೆಯ ಪ್ರಸಿದ್ಧ ಕ್ರಿಕೆಟ್ ಪಟು ದಿ. ಎಂ.ವಿ. ಶೇಷಾಚಲ ಶೆಟ್ಟಿ ಅವರ ಹೆಸರಿನಲ್ಲಿ ಕ್ರಿಕೆಟ್ ಆಕಾಡೆಮಿ ಸ್ಥಾಪಿಸುತ್ತಿದ್ದು, ಮೇ 15ರಂದು ಉದ್ಘಾಟನೆಗೊಳ್ಳಲಿದೆ ಎಂದು ಆಕಾಡೆಮಿಯ ಅಧ್ಯಕ್ಷ ಡಿ.ಎಸ್. ಅರುಣ್ ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರದ ಎನ್ಇಎಸ್ ಮೈದಾನದಲ್ಲಿ 15ರಂದು ನಡೆಯುವ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಎಸ್.ವಿ. ತಿಮ್ಮಯ್ಯ, ವಿಧಾನಪರಿಷತ್ ಸದಸ್ಯ ಡಿ.ಎಚ್. ಶಂಕರಮೂರ್ತಿ ಹಾಗೂ ದಿ. ಎಂ.ವಿ.ಎಸ್. ಶೆಟ್ಟಿ ಅವರ ಕುಟುಂಬ ಸದಸ್ಯರು ಉಪಸ್ಥಿತರಿರುವರು ಎಂದು ತಿಳಿಸಿದರು.
ತರಬೇತಿ: ಶೇಷಾಚಲ ಅವರು ಮೂರು ವರ್ಷಗಳ ಹಿಂದೆ ನಿಧನರಾಗಿದ್ದು, ಇದೀಗ ಅವರ ಹೆಸರಿನಲ್ಲಿ ಅಕಾಡೆಮಿ ಸ್ಥಾಪಿಸಿವುದರ ಮೂಲಕ 16 ವರ್ಷದೊಳಗಿನ ಮಕ್ಕಳಿಗೆ ಬೇಸಿಗೆ ಶಿಬಿರ ಹಾಗೂ ವರ್ಷವಿಡಿ ಕ್ರಿಕೆಟ್ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದರು.
ಪ್ರಥಮ ಶಿಬಿರದಲ್ಲಿ ಉಚಿತ ಪ್ರವೇಶವಿದ್ದು, ಮಕ್ಕಳಿಗೆ ತಾಂತ್ರಿಕ, ದೈಹಿಕ, ಮಾನಸಿಕ ಹಾಗೂ ವೈಜ್ಞಾನಿಕವಾಗಿ ತರಬೇತಿ ನೀಡಲಾಗವುದು. ನುರಿತ, ಅನುಭವಿ ತರಬೇತುದಾರ ಎ.ವಿ. ಸ್ವಾಮಿಕುಮಾರ, ಎನ್.ಡಿ. ಸುಧೀಂದ್ರ, ರವೀಂದ್ರನಾಥ್, ಶರತ್ ಚಂದ್ರಪ್ರಭು ಇತರರು ತರಬೇತಿ ನೀಡುವರು ಎಂದು ಮಾಹಿತಿ ನೀಡಿದರು.
ಮಕ್ಕಳ ಅನುಕೂಲದ ದೃಷ್ಟಿಯಿಂದ ಮೂರು ವಿವಿಧ ಹಂತದಲ್ಲಿ ತರಬೇತಿ ಏರ್ಪಡಿಸಲಾಗಿದ್ದು, ಆಸಕ್ತರು ಅರ್ಜಿಯನ್ನು ದೀಪಕ್ ಪೆಟ್ರೋಲ್ ಬಂಕ್ನಲ್ಲಿ ಪಡೆಯಬಹುದು. ವಿವರಗಳಿಗಾಗಿ-9886942617, 9844087990 ಸಂಪರ್ಕಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

