ಮೂಡಿಗೆರೆ; ಶೇ. 81.72 ಫಲಿತಾಂಶ
ಮೂಡಿಗೆರೆ: 1,653 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದು, 1,341 ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ಶೇ.81.72 ಫಲಿತಾಂಶ ಬಂದಿದೆ. ಸರ್ಕಾರಿ ಶಾಲೆಗಳಲ್ಲಿ ಸಂಸೆ ಶೇ.93.94 ಹೆಚ್ಚು ಫಲಿತಾಂಶ ಪಡೆದರೆ ಚಿನ್ನಿಗ ಶಾಲೆ ಶೇ. 61.86 ಕಡಿಮೆ ಫಲಿತಾಂಶ ಪಡೆದಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕುಮಾರಯ್ಯ ತಿಳಿಸಿದ್ದಾರೆ.
ತಾಲೂಕಿನ ಪ್ರಭೋಧಿನಿ, ಕಳಸದ ಜೆಇಎಂ, ಬಣಕಲ್‌ನ ವಿಧ್ಯಾಭಾರತಿ ಶೇ.100 ರಷ್ಟು ಫಲಿತಾಂಶ ಪಡೆದಿವೆ. ನಳಂದ ಶಾಲೆಯ ವಿದ್ಯಾರ್ಥಿನಿ ಶ್ರಾವ್ಯ ಎಸ್. ಕುಮಾರ್ - 602 ಅಂಕಪಡೆದು ಶೇ.96.32, ವಕ್ಕಲಿಗರ ಶಾಲೆಯ ಪ್ರಿಯಾದತ್ 598 ಅಂಕ ಪಡೆದು ಶೇ.95.68, ನಳಂದ ಶಾಲೆಯ ಇಂಚರ ಕೆ.ಎಚ್ 597ಅಂಕ ಪಡೆದು ಶೇ. 95.52 ಫಲಿತಾಂಶ ಪಡೆದಿದ್ದಾರೆ ಎಂದರು.
ಪಟ್ಟಣದ ನಳಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ 13 ವಿಧ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆ ಹೊಂದಿದ್ದಾರೆಂದು ಮುಖ್ಯ ಶಿಕ್ಷಕ ಲಕ್ಷ್ಮೀನಾರಾಯಣ ತಿಳಿಸಿದ್ದಾರೆ.
ರಸ್ತೆ ಅಪಘಾತ: ಪೇದೆ ಸಾವು
ಚಿಕ್ಕಮಗಳೂರು: ನಗರದ ಬೈಪಾಸ್ ರಸ್ತೆಯಲ್ಲಿ ಮಂಗಳವಾರ ಸಂಜೆ ನಡೆದ ರಸ್ತೆ ಅಪಘಾತದಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯ ಪೇದೆ ಮೃತಪಟ್ಟಿದ್ದಾರೆ.
ವಿಜಯಕುಮಾರ್ (42) ಮೃತಪಟ್ಟ ದುರ್ದೈವಿ.
ಬೈಪಾಸ್ ರಸ್ತೆಯಲ್ಲಿ ವಿಜಯಕುಮಾರ್ ಚಾಲನೆ ಮಾಡುತ್ತಿದ್ದ ಬೈಕ್ ಹಾಗೂ ಬೋಲೋರಾ ಕಾರ್ ನಡುವೆ ಅಪಘಾತ ಸಂಭವಿಸಿದ್ದು, ವಿಜಯಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಟಾಪ್ ಟೆನ್ ವಿದ್ಯಾರ್ಥಿಗಳು
ಚಿತ್ರದುರ್ಗ: ನಗರದ ಸಂತ ಜೋಸೆಫರ ಕಾನ್ವೆಂಟ್ ಶಾಲೆಯ ಟಿ.ಎಸ್. ಸಿಂಧುಶ್ರೀ ಮತ್ತು ಹಿರಿಯೂರಿನ ರಾಷ್ಟ್ರೀಯ ಅಕಾಡೆಮಿ ಶಾಲೆಯ ಜೀವನ್ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 610 ಅಂಕ ಗಳಿಸುವ ಮೂಲಕ ಜಿಲ್ಲೆಯಲ್ಲೇ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿಗಳೆನಿಸಿದ್ದಾರೆ.
ಹೊಸದುರ್ಗ ಸಂತ ಅಂಥೋಣಿ ಪ್ರೌಢಶಾಲೆಯ ಎಸ್.ಎಂ. ಶ್ರವಣ್ (606), ಚಿತ್ರದುರ್ಗ ವಿದ್ಯಾವಿಕಾಸ ಪ್ರೌಢಶಾಲೆಯ ಸಿ. ಜಿತೇಂದ್ರ (604), ಚಳ್ಳಕೆರೆ ವಾರಿಯರ್ಸ್ ಪ್ರೌಢಶಾಲೆಯ ಎಂ.ಎನ್. ನೀತು (604), ಅದೇ ಶಾಲೆಯ ಯು.ಎಂ. ಕೀರ್ತಿ (603), ಅದೇ ಶಾಲೆಯ ಶ್ರೀದತ್ತ (602), ಚಳ್ಳಕೆರೆ ವಾಸವಿ ಶಾಲೆಯ ಕೆ.ವಿ. ಶೃತಿ (602), ಹೊಸದುರ್ಗ ಸರ್ಕಾರಿ ಪಪೂ ಕಾಲೇಜಿನ ಎ. ಪ್ರಿಯ (602) ಮತ್ತು ಚಳ್ಳಕೆರೆ ರೋಟರಿ ಶಾಲೆಯ ಎನ್. ಸೌಂದರ್ಯ (601) ಪಡೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

