ನರ್ಸಿಂಗ್ ಲೈನ್ ಸಂಸ್ಥೆ ಉದ್ಘಾಟನೆ
ನರಸಿಂಹರಾಜಪುರ: ನರ್ಸುಗಳು ನಗು ನಗುತ್ತಾ ರೋಗಿಗಳನ್ನು ಆರೈಕೆ ಮಾಡಿದರೆ ರೋಗಿಗಳ ಬೇಗನೆ ಚೇತರಿಸಿಕೊಳ್ಳುತ್ತಾರೆ ಎಂದು ನರ್ಸಿಂಗ್ ಲೈನ್ ಸಂಸ್ಥೆ ಅಧ್ಯಕ್ಷ ಮುಲಪಲ್ಲಿ ತಿಳಿಸಿದರು.
ಭಾನುವಾರ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ನರ್ಸಿಂಗ್ ್ಗೆಅಡಿಪಾಯವಾದ ಫ್ಲೋರೆನ್ಸ್ ನೈಟಿಂಗೇಲ್ ಅವರ 193 ನೇ ಜನ್ಮ ದಿನಾಚರಣೆ ಅಂಗವಾಗಿ ನೂತನವಾಗಿ ಪ್ರಾರಂಭಿಸಿರುವ ನರ್ಸಿಂಗ್ ಲೈನ್ ಸಂಸ್ಥೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮನೆಯಲ್ಲೇ ಚಿಕಿತ್ಸೆ: ಮುಖ್ಯ ಅತಿಥಿಯಾಗಿದ್ದ ಸಿಸ್ಟರ್ ಶಿಜಾ ಮಾತನಾಡಿ, ನರ್ಸ್ ಲೈನ್ ಸಂಸ್ಥೆಯು ಆಸ್ಪತ್ರೆಗೆ ಬರಲು ಸಾದ್ಯವಾಗದ ರೋಗಿಗಳನ್ನು ಗುರುತಿಸಿ ಅವರ ಮನೆಗೆ ತೆರಳಿ ಚಿಕಿತ್ಸೆ ನೀಡುತ್ತದೆ. ನಮ್ಮ ನರ್ಸಿಂಗ್ ಸಂಸ್ಥೆಯ ಸಂಸ್ಥಾಪಕಿಯಾದ ನೈಟಿಂಗ್ ಹಾಕಿ ಕೊಟ್ಟ ಮಾರ್ಗದರ್ಶನದಲ್ಲೇ ನರ್ಸಿಂಗ್ ಸಂಸ್ಥೆ ಮುನ್ನೆಡೆಯುತ್ತದೆ ಎಂದರು.
ನರಸಿಂಹರಾಜಪುರ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಬಾಲಕೃಷ್ಣ ಸಮಾರಂಭವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಸಿಸ್ಟರ್ ಜಯ, ರಾಜೇಶ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುವ ಎಲ್ಲಾ ನರ್ಸುಗಳು ಸ್ವ ಇಚ್ಛೆಯಿಂದ ತಮ್ಮ ಅಂಗಾಂಗಗಳನ್ನು ದಾನ ಮಾಡಲು ಒಪ್ಪಿಗೆ ಸೂಚಿಸಿ ಸಹಿ ಮಾಡಿದರು.
ಸ್ವ ಹಿತಾಸಕ್ತಿಗಾಗಿ ಕೆಲವರ ಆರೋಪ: ಅನಂತ್
ಕ.ಪ್ರ.ವಾರ್ತೆ ಮೂಡಿಗೆರೆ ಮೇ 12
ಕ್ಷೇತ್ರದಲ್ಲಿ ಕೆಲವರು ಸ್ವ ಹಿತಾಸಕ್ತಿಗಾಗಿ ವಿಪ ಸದಸ್ಯೆ ಮೋಟಮ್ಮ ಮತ್ತು ನನ್ನ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆ ನಡೆಸಿರುವ ಕುರಿತು ಆರೋಪಿಸುತ್ತಿರುವುದನ್ನು ಖಂಡಿಸುವುದಾಗಿ ಜಿಪಂ ಸದಸ್ಯ ಎಂ.ಎಸ್. ಅನಂತ್ ಹೇಳಿದರು.
ಮೂಡಿಗೆರೆ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಕಾಂಗ್ರೆಸ್ನ ಯಾವುದೇ ನಾಯಕರ ವಿರುದ್ಧ ಮಾತನಾಡುತ್ತಿಲ್ಲ. ಬದಲು ಸ್ಥಳೀಯವಾಗಿ ಮತ್ತು ಮಾಧ್ಯಮಗಳಲ್ಲಿ ವ್ಯಕ್ತವಾಗುತ್ತಿರುವ ಆರೋಪಗಳಿಗೆ ಸ್ಪಷ್ಟನೆ ನೀಡುತ್ತಿದ್ದೇವೆ ಎಂದರು.
ಜಿಲ್ಲೆಯಲ್ಲಿಯೇ ಸೋಲು: ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಸೋತಿದ್ದಲ್ಲ. ಇಡೀ ಜಿಲ್ಲೆಯಲ್ಲಿಯೇ ಕಾಂಗ್ರೆಸ್ ಸಂಪೂರ್ಣವಾಗಿ ನೆಲಕ್ಕಚ್ಚಿದೆ. ಇದರ ನೈತಿಕ ಹೊರಬೇಕಾದವರು ಬೇರೆಯವರಿದ್ದು, ಮೋಟಮ್ಮ ಮತ್ತು ನನ್ನ ಮೇಲೆ ಆರೋಪ ಮಾಡುವವವರು ಸಮರ್ಥ ದಾಖಲೆ ಒದಗಿಸಿದರೆ ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಿರುವುದಾಗಿ ತಿಳಿಸಿದರು.
ಚಂದ್ರಪ್ಪರನ್ನು 2008ರಲ್ಲಿ ಕ್ಷೇತ್ರದ ಜನರಿಗೆ ಮೋಟಮ್ಮ ಪರಿಚಯಿಸಿ ಕಣಕ್ಕಿಳಿಸಿದ್ದರು. ಈ ಬಾರಿ ಸ್ಥಳೀಯ ಆಕಾಂಕ್ಷೀಗಳಲ್ಲಿ ಒಬ್ಬರಿಗೆ ಟಿಕೆಟ್ ನೀಡುವಂತೆ ಮೋಟಮ್ಮ ಹೈಕಮಾಂಡ್ ಗಮನ ಸೆಳೆದಿದ್ದರು. ಆದರೆ ಪಾಲಿಸಿ ಮ್ಯಾಟರ್ನಂತೆ ಚಂದ್ರಪ್ಪರಿಗೆ ಟಿಕೆಟ್ ಸಿಕ್ಕಿದ್ದು, ಅವರ ಸೋಲಿನಲ್ಲಿ ಬಿ.ಬಿ. ನಿಂಗಯ್ಯರ ಗುಂಪಿನವರನ್ನು ಹೊರತುಪಡಿಸಿ ನಮ್ಮ ಪಾತ್ರವಿಲ್ಲ ಎಂದರು.
ಒತ್ತಡದ ನಡುವೆಯೂ ಪ್ರಚಾರ: ಕೆಪಿಸಿಸಿ ಸ್ಟಾರ್ ಕ್ಯಾಂಪೇನರ್ ಆಗಿದ್ದ ಮೋಟಮ್ಮ, ಸ್ಥಳೀಯ ಮುಖಂಡರ ಒತ್ತಡದ ಹಿನ್ನೆಲೆಯಲ್ಲಿ ಕ್ಷೇತ್ರದ ಸಮನ್ವಯ ಸಮಿತಿ ಅಧ್ಯಕ್ಷರಾಗಿ ಒತ್ತಡದ ನಡುವೆಯೂ ಪ್ರಚಾರ ನಡೆಸಿದ್ದಾರೆ ಎಂದು ಹೇಳಿದರು.
ಈ ಸಮಯದಲ್ಲಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿ.ಎಸ್. ಜಯರಾಮ್, ಕೆಪಿಸಿಸಿ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಟಿ. ಕಮಲಾಕ್ಷಮ್ಮ, ತಾಪಂ ಸದಸ್ಯರಾದ ಸಬ್ಲಿ ದೇವರಾಜ್, ಸುಧಾ, ಹೂವಮ್ಮ, ಮುಖಂಡ ಅಯ್ಯೂಬ್, ಮರಗುಂಡ ಪ್ರಸನ್ನ, ಹೆಡದಾಳು ಧರ್ಮೇಶ್, ಗೌತುವಳ್ಳಿ ಬೈರಯ್ಯ, ಹುಸೈನ್ ಮೊದಲಾದವರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

