ಸಾಮರಸ್ಯ ಬದುಕಿಗೆ ಮಹಾತ್ಮರ ಸಂದೇಶ ಪಾಲಿಸಿ
ಕಪ್ರವಾರ್ತೆ,ಚಿಕ್ಕಮಗಳೂರು,ಮೇ16
ಅದ್ವೈತ ಪ್ರತಿಪಾದಕ ಜಗದ್ಗುರು ಶ್ರೀ ಶಂಕರಚಾರ್ಯರ ಜಯಂತಿಯನ್ನು ನಗರದಲ್ಲಿ ಬುಧವಾರ ಶ್ರದ್ದಾಭಕ್ತಿಗಳಿಂದ ಆಚರಿಸಲಾಯಿತು.
ಜಯಂತಿ ಪ್ರಯುಕ್ತ ಶಂಕರಮಠದಲ್ಲಿ ಬೆಳಿಗ್ಗೆ ಶ್ರೀ ಶಂಕರಚಾರ್ಯರ ವಿಗ್ರಹಕ್ಕೆ ರುದ್ರಾಭಿಷೇಕ, ವಿಶೇಷ ಪೂಜೆ ನಡೆಯಿತು. ನಂತರ ರಂಗಣ್ಣನವರ ಕಲ್ಯಾಣ ಮಂಪಟದಲ್ಲಿ ತಾಲೂಕು ಬ್ರಾಹ್ಮಣ ಮಹಾಸಭಾ ವತಿಯಿಂದ ಏಳು ಜನ ವಟುಗಳಿಗೆ ಉಪನಯನ, ಬ್ಮಹ್ಮೋಪದೇಶ ಮಾಡಲಾಯಿತು.
ಸಂಜೆ ಶಂಕರಮಠದ ಆವರಣದಿಂದ ಶ್ರೀ ಶಂಕರಚಾರ್ಯರ ಭಾವಚಿತ್ರದ ಮೆರವಣಿಗೆಯನ್ನು ನಗರದ ಪ್ರಮುಖ ಬೀದಿಗಳಲ್ಲಿ ನಡೆಸಲಾಯಿತು.
ನಂತರ ಕುವೆಂಪು ಕಲಾಮಂದಿರದಲ್ಲಿ ಜಯಂತಿ ಅಂಗವಾಗಿ ಬ್ರಾಹ್ಮಣ ಮಹಾಸಭಾ ಏರ್ಪಡಿಸಿದ್ದ ತತ್ವಜ್ಞಾನಿಗಳ ದಿನಾಚರಣೆ ಕಾರ್ಯಕ್ರಮವನ್ನು ಜಿಲ್ಲಾ ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಎಂ.ಆರ್. ಸಣ್ಣ ಸಿದ್ದೇಗೌಡ ಉದ್ಘಾಟಿಸಿದರು.
ಸಾಮರಸ್ಯತೆ ಅಗತ್ಯ: ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಂತರು, ದಾರ್ಶನಿಕರು ಮತ್ತು ಮಹಾತ್ಮರ ತತ್ವ ಹಾಗೂ ಸಂದೇಶಗಳನ್ನು ನಮ್ಮ ಯುವ ಜನತೆ ಅರಿತು ಅವರ ಹಾದಿಯಲ್ಲಿ ನಡೆಯುವುದನ್ನು ಕಲಿಯಬೇಕು ಸೌಹಾರ್ದತೆ ಮತ್ತು ಸಾಮರಸ್ಯತೆಯಿಂದ ಬಾಳಬೇಕು ಎಂದು ಕಿವಿಮಾತು ಹೇಳಿದರು.
ವಿಶೇಷ ಉಪನ್ಯಾಸ ನೀಡಿದ ವಿದ್ವತ್ ಶ್ರೀಕಂಠ ಭಟ್, ಶ್ರೀ ಶಂಕರಚಾರ್ಯರ ಬದುಕಿನ ಹಲವಾರು ಘಟನೆಗಳನ್ನು ತೆರೆದಿಡುವುದರ ಜೊತೆಗೆ ಅವರ ತತ್ವ, ಸಿದ್ದಾಂತ ಮತ್ತು ಸಂದೇಶಗಳನ್ನು ವಿವರಿಸಿದರು.
ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಎಸ್. ಶ್ರೀಧರ್ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಡಿ. ಹೆಚ್. ನಟರಾಜ್, ಆರ್ಯವೈಶ್ಯ ಮಂಡಳಿ ಸದಸ್ಯ ಎಂ.ಆರ್. ನಾಗರಾಜ್, ಶಂಕರಮಠದ ಗೌರವ ಪ್ರತಿನಿಧಿ ಹೆಚ್.ಎಂ. ಅನಂತರಾಮಯ್ಯ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎನ್.ಎಸ್. ಶಿವಸ್ವಾಮಿ ಉಪಸ್ಥಿತರಿದ್ದರು.
ಶಂಕರನಾರಾಯಣ ಭಟ್ ಕಾರ್ಯಕ್ರಮವನ್ನು ನಿರೂಪಿಸಿದರು. ಮಂಜುನಾಥ ಜೋಷಿ ವಂದಿಸಿದರು. ಸಮಾರಂಭದ ನಂತರ ರಾತ್ರಿ ಶಂಕರಮಠದಲ್ಲಿ ಶ್ರೀ ಶಂಕರಚಾರ್ಯರ ಉತ್ಸವಮೂರ್ತಿಯ ಪ್ರಾಕಾರೋತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

