ಚಿಕ್ಕಮಗಳೂರು

ಇಂದು ಚಟ್ನಹಳ್ಳಿ ದೇವಸ್ಥಾನ ಉದ್ಘಾಟನೆ

Published On :

ಕ.ಪ್ರ.ವಾರ್ತೆ ಟಿ ದಾವಣಗೆರೆ ಟಿ  ಮೇ 19
ಹೊನ್ನಾಳಿ ತಾಲೂಕಿನ ಚಟ್ನಹಳ್ಳಿ ಗ್ರಾಮದಲ್ಲಿ ನೂತನವಾಗಿ ಜೀರ್ಣೋದ್ಧಾರಗೊಂಡ ಜಡೇಶಂಕರ ಲಿಂಗೇಶ್ವರಸ್ವಾಮಿ ದೇವಸ್ಥಾನದ ಉದ್ಘಾಟನೆ, ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಸಮಾರಂಭ ಮೇ.20ರಿಂದ 24ರವರೆಗೆ ನಡೆಯಲಿದೆ ಎಂದು ಸಮಿತಿಯ ರೇವಣಸಿದ್ದಯ್ಯ ತಿಳಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಟ್ನಹಳ್ಳಿ ಗ್ರಾಮದ ದೇವಸ್ಥಾನ ಆವರಣದಲ್ಲಿ ಮೇ 20ರ ಬೆಳಗ್ಗೆ 6.05ಕ್ಕೆ ದೇವಸ್ಥಾನ ಉದ್ಘಾಟನೆ, ಕಳಸಾರೋಹಣ ಕಾರ್ಯ ನೆರವೇರಲಿದೆ ಎಂದರು.
ಪ್ರಸಾದ ವಿನಿಯೋಗ: ಹೊಟ್ಯಾಪುರ ಹಿರೇಮಠದ ಗಿರಿಸಿದ್ದೇಶ್ವರ ಶಿವಾಚಾರ್ಯ ಶ್ರೀ ಸಾನ್ನಿಧ್ಯ ವಹಿಸಲಿದ್ದು, ಮಧ್ಯಾಹ್ನ 2.30ಕ್ಕೆ ಪ್ರಸಾದ ವಿನಿಯೋಗವಿದೆ. ರಾತ್ರಿ 8.15ಕ್ಕೆ ಜಡೇಶಂಕರ ಲಿಂಗೇಶ್ವರ ಸ್ವಾಮಿ ಪ್ರತಿಷ್ಠಾಪನೆ ನೆರವೇರಲಿದೆ. ಮೇ 21ರಂದು ಬೆಳಗ್ಗೆ 8.30ಕ್ಕೆ ಹಿರೇಕಲ್ಮಠದ ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಶ್ರೀ, ರಾಂಪುರದ ವಿಶ್ವೇಶ್ವರ ಶಿವಾಚಾರ್ಯ ಶ್ರೀ ಸಾನ್ನಿಧ್ಯದಲ್ಲಿ ಧರ್ಮಸಭೆ ನಡೆಯಲಿದೆ ಎಂದು ಅವರು ಹೇಳಿದರು.
ಅದೇ ದಿನ ಬೆಳಗ್ಗೆ 8.30ರಿಂದ 9.30ರವರೆಗೆ ರುದ್ರಾಭಿಷೇಕ, ಮಹಾಮಂಗಳಾರತಿ ನಡೆಯಲಿದ್ದು, ಎಚ್.ಎಂ. ರುದ್ರಾರಾಧ್ಯ ಶಾಸ್ತ್ರಿ ಪೌರೋಹಿತ್ಯದ ನೇತೃತ್ವ ವಹಿಸುವರು. ಹೊನ್ನಾಳಿ ಚನ್ನೇಶ ಸಂಗೀತ ಕಲಾ ಸಂಘದಿಂದ ಗಾಯನ ಕಾರ್ಯಕ್ರಮವಿದೆ. ನಂತರ ಭಕ್ತರಿಗೆ ಪ್ರಸಾದ ವಿನಿಯೋಗವಿದೆ ಎಂದು ಅವರು ಮಾಹಿತಿ ನೀಡಿದರು.
ವಚನ ಸಂಗೀತ: ಮೇ 24ರಂದು ಮಧ್ಯಾಹ್ನ 12.30ಕ್ಕೆ ಸಿರಿಗೆರೆ ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಶ್ರೀ ದಿವ್ಯ ಸಾನ್ನಿಧ್ಯದಲ್ಲಿ ಗೋಪುರ ಕಳಸಾರೋಹಣ ಮತ್ತು ಸರ್ವ ಶರಣರ ಸಮ್ಮೇಳನ ನಡೆಯಲಿದೆ. ನ್ಯಾಮತಿ ಗ್ರಾಮದ ಬಾಲಕಿಯರ ಸರ್ಕಾರಿ ಪಿಯು ಕಾಲೇಜು ಬೋಧಕ ಎಸ್.ಆರ್. ಬಸವರಾಜಪ್ಪ ಉಪನ್ಯಾಸ ನೀಡುವರು. ಹಿಂದೂಸ್ತಾನಿ ಗಾಯಕ ಶಿವಮೊಗ್ಗ ಉಸ್ತಾದ ಹುಮಾಯೂನ ಹರ್ಲಾಪುರ, ಗಿರಿಜಮ್ಮ, ಮಲ್ಲಪ್ಪ ಬಳಗದಿಂದ ವಚನ ಮತ್ತು ಸಂಗೀತ ಕಾರ್ಯಕ್ರಮವಿದೆ ಎಂದು ಅವರು ತಿಳಿಸಿದರು.
ಬೆಂಗಳೂರಿನ ಕೆಬಿಸಿ ಪ್ರಧಾನ ವ್ಯವಸ್ಥಾಪಕ ಚಟ್ನಹಳ್ಳಿ ಸಿ.ಪಿ. ಚಂದ್ರಶೇಖರಪ್ಪ, ಬೆಂಗಳೂರಿನ ಪಿಡಬ್ಲ್ಯುಡಿ ಇಇ ಎಚ್.ಎ. ಕಾಂತರಾಜಪ್ಪ ಅವರನ್ನು ಸನ್ಮಾನಿಸಲಾಗುವುದು. ನಂತರ ಭಕ್ತರಿಗೆ ಪ್ರಸಾದ ವಿನಿಯೋಗವಿದೆ ಎಂದು ಅವರು ಹೇಳಿದರು.
ದೇವಸ್ಥಾನ ಸಮಿತಿಯ ಹನುಮಂತಪ್ಪ, ನಾಗರಾಜ ಸುರಹೊನ್ನೆ ಮೊದಲಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.