ಚಿಕ್ಕಮಗಳೂರು

'ಭಯೋತ್ಪಾದನಾ ಮುಕ್ತ ದೇಶಕ್ಕಾಗಿ ಶ್ರಮಿಸಿ'

Published On :

ಕ.ಪ್ರ.ವಾರ್ತೆ ಟಿ ಮೂಡಿಗೆರೆ ಟಿ  ಮೇ 22
ಭಾರತವನ್ನು ಭಯೋತ್ಪಾದನಾ ಮುಕ್ತ ದೇಶವನ್ನಾಗಿ ನಿರ್ಮಿಸುವ ಹೊಣೆ ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ ಎಂದು ತಹಸೀಲ್ದಾರ್ ಎ.ವಿ. ರುದ್ರಪ್ಪಾಜಿರಾವ್ ತಿಳಿಸಿದರು.
ತಾಲೂಕು ಕಚೇರಿಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಭಯೋತ್ಪಾದನಾ ನಿರ್ಮೂಲನದ ಸಪ್ತಾಹದ ಅಂಗವಾಗಿ ಕಚೇರಿಯ ಸಿಬ್ಬಂದಿಗಳಿಗೆ ಪ್ರಮಾಣವಚನವನ್ನು ಬೋಧಿಸಿ ಮಾತನಾಡಿದರು.
ಭಯೋತ್ಪಾದನಾ ನಿರ್ಮೂಲನೆ ಬರೇ ಸಪ್ತಾಹವನ್ನಾಗಿ ಆಚರಿಸದೆ ಅದನ್ನು ಕಾರ್ಯ ರೂಪಕ್ಕೆ ತರರಲು ಪ್ರತಿಯೊಬ್ಬರು ಕೈಜೋಡಿಸಬೇಕು. ದೇಶದ ಎಲ್ಲಾ ವರ್ಗದ ಜನರು ಶಾಂತಿಯುತ ಜೀವನ ನಡೆಸಬೇಕು ಎಂಬುವುದೇ ಸಂವಿಧಾನದ ಆಶಯ. ಭಯೋತ್ಪಾದನೆ ರಾಷ್ಟ್ರದ ಶಾಂತಿಗೆ ಭಂಗ ತರುವ ಭೂತವಾಗಿದ್ದು. ದೇಶದಾದ್ಯಂತ ಬುಡ ಮಟ್ಟದಿಂದಲೇ ಭಯೋತ್ಪಾದನೆಯನ್ನು ಕಿತ್ತೆಸೆಯುವ ಕೆಲಸ ನಮ್ಮೆಲ್ಲರ ಹೊಣೆಯಾಗಿದೆ ಎಂದರು.
ಶಿಕ್ಷಿತ ವಲಯ ಜಾಗೃತರಾದರೆ ಭಯೋತ್ಪಾದನಾ ನಿರ್ಮೂಲನೆ ಸುಲಭವಾಗುತ್ತದೆ. ಜವಾಬ್ಧಾರಿ ಪ್ರಜೆಗಳಾದ ನಾವೆಲ್ಲರೂ ಭಾರತಕ್ಕೆ ಭಯೋತ್ಪಾದನೇ ಕರಿನೆರಳು ತಾಕದಂತೆ ರಕ್ಷಿಸಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಚೇರಿಯ ಸಿಬ್ಬಂಧಿಗಳಿಗೆ ಭಯೋತ್ಪಾದನಾ ನಿರ್ಮೂಲನೆ ಪ್ರಮಾಣವನ್ನು ಬೋಧಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.