15 ಎಕರೆ ಒತ್ತುವರಿ ಭೂಮಿ ತೆರವು
ಕ.ಪ್ರ.ವಾರ್ತೆ ಟಿ ಮೂಡಿಗೆರೆ ಟಿ ಮೇ 23
ನ್ಯಾಯಾಲಯದ ಆದೇಶದಂತೆ ಜಿಲ್ಲಾ ಅರಣ್ಯಾಧಿಕಾರಿ ರವಿರಾಜ್ ನಾರಾಯಣ್ ಮತ್ತು ಸಹಾಯಕ ಅರಣ್ಯ ರಕ್ಷಾಣಾಧಿಕಾರಿ ರಮೇಶ್ ಬಾಬು ನೇತೃತ್ವದ ತಂಡ ಮೂಡಿಗೆರೆ ತಾಲೂಕಿನ ಬಣಕಲವ್ ಹೋಬಳಿಯ ಬಸನಿ ಗ್ರಾಮದಲ್ಲಿ 15 ಎಕರೆ ಕೃಷಿ ಭೂಮಿಯನ್ನು ತೆರವುಗೊಳಿಸಿ ಅರಣ್ಯ ಇಲಾಖೆ ತನ್ನ ವಶಕ್ಕೆ ತೆಗೆದುಕೊಂಡಿತು.
ಸ.ನಂ. 169/1ರಲ್ಲಿ 500 ಎಕರೆ ಅರಣ್ಯ ಭೂಮಿಯಿದ್ದು. ಅದರಲ್ಲಿ ನಾರಾಯಣಗೌಡರ 15 ಎಕರೆ ಒತ್ತುವರಿ ಭೂಮಿಯನ್ನು ಜೆಸಿಬಿ ಸಹಾಯದಿಂದ ಒತ್ತುವರಿ ಭೂಮಿಯಲ್ಲಿದ್ದ ಕಾಫಿ ಗಿಡಗಳು ಹಾಗೂ ಸಿಲ್ವರ್ ಮರ, ಮೆಣಸಿನ ಬಳ್ಳಿಗಳನ್ನು ಕಡಿಯುವುದರ ಮೂಲಕ ಬೆಳಿಗ್ಗೆ 6 ಗಂಟೆಗೆ ತೆರವು ಕಾರ್ಯ ಪ್ರಾರಂಭವಾಗಿದ್ದು ಸಂಜೆ 5 ಗಂಟೆಗೆ ಕಾರ್ಯವನ್ನು ಪೂರ್ಣಗೊಳಿಸಿತು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಎ.ವಿ. ರುದ್ರಪ್ಪಾಜಿರಾವ್, ವೃತ್ತ ನಿರೀಕ್ಷಕ ರಮೇಶ್, ಬಣಕಲ್ ಠಾಣಾಧಿಕಾರಿ ಹೋಸ್ಕೇರಪ್ಪ, ರಾಜಸ್ವ ನಿರೀಕ್ಷಕ ಎಂ. ಗಂಗಾಧರ್, ಆಲ್ದೂರ್ ವಲಯರಣ್ಯಧಿಕಾರಿ ಅಬ್ದುಲ್ ಅಜೀಜ್, ಚಿಕ್ಕಮಗಳೂರು ವಲಯರಣ್ಯಾಧಿಕಾರಿ ಶಶಿಧರ್, ಕಂದಾಯ ಇಲಾಖೆ, ಸರ್ವೆ ಇಲಾಖೆ, ಅರಣ್ಯ ಇಲಾಖೆ ಅಧಿಕಾರಿಗಳು ನೇತೃತ್ವ ವಹಿಸಿದ್ದರು.
ಗೊಂದಲಗಳ ನಡುವೇ ತೆರವು: ಜಮೀನಿನ ತಮಗೆ ಅನ್ಯಾಯವಾಗಿದೆ ಎಂದು ಜಮಿನಿನ ಮಾಲೀಕ ನಾರಾಯಣಗೌಡ ತಹಸೀಲ್ದಾರ್ ಎ.ವಿ. ರುದ್ರಪ್ಪಾಜಿರಾವ್ಗೆ ತಿಳಿಸಿದರು.
ಅಧಿಕಾರಿಗಳಿಂದಲೇ ಪರಿಸರ ನಾಶ
ಒತ್ತುವರಿ ತೆರವು ನೆಪದಲ್ಲಿ ಅಧಿಕಾರಿಗಳು 15 ಎಕರೆ ಭೂಮಿಯಲ್ಲಿದ್ದ 25-30 ವರ್ಷಗಳ ಕಾಫಿಗಿಡಗಳನ್ನು, ಸಿಲ್ವರ್ ಮರ, ಮೆಣಸಿನ ಬಳ್ಳಿಗಳನ್ನು ನಾಶ ಪಡೆಸುವುದರೊಂದಿಗೆ ಪರಿಸರವನ್ನು ನಾಶ ಪಡಿಸಿದ್ದಾರೆ ಎಂದುಬೆಳೆಗಾರರ ಸಂಘದ ಕಾರ್ಯದರ್ಶಿ ಬಾಲಕೃಷ್ಣ ಆರೋಪಿಸಿದ್ದಾರೆ.
ಪತ್ರಿಕೆಯೊಂದಿಗೆ ಮಾತನಾಡಿದ ಅವರು. ಜಾಗ ಅತಿಕ್ರಮಿಸಿದ್ದರೆ ಸುತ್ತಲು ಬೇಲಿ ಹಾಕಿ ತಮ್ಮ ವಶಕ್ಕೆ ತೆಗೆದುಕೊಂಡು ಗಿಡಗಳನ್ನು ರಕ್ಷಿಸುವುದನ್ನು ಬಿಟ್ಟು ಜೆಸಿಬಿಯಂತ್ರ, ಮರ ಕುಯ್ಯುವ ಯಂತ್ರ, ಕತ್ತಿ ಗಳನ್ನು ಹಿಡಿದು. ಗಿಡಗಳನ್ನು ಕಡಿದು ಹಾಕುವುದರ ಮೂಲಕ ಪರಿಸರ ನಾಶ ಮಾಡಿದ್ದಾರೆ. ಬೆಳೆಗಾರ ಕಾಫಿಯನ್ನು ಬೆಳೆಯಲು 25-30 ವರ್ಷಗಳ ಕಾಲ ತನ್ನ ಶ್ರಮವನ್ನು ಹಾಕಿ ಮಗುವಿನಂತೆ ಆರೈಕೆ ಮಾಡುತ್ತಾರೆ.
ಹೀಗಿರುವಾಗ ಏಕಾಏಕಿ ಗಿಡಗಳನ್ನು ಕೊಚ್ಚಿಹಾಕಿರುವ ಕ್ರಮ ಸರಿಯಲ್ಲಾ. ಪರಿಸರ ನಾಶ ಪಡಿಸಿದ ಅಧಿಕಾರಿಗಳ ವಿರುದ್ದ ಉಗ್ರ ಹೋರಾಟಕ್ಕೆ ಚಿಂತನೆ ನಡೆಸಿರುವುದಾಗಿ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

