ಅಭಿವೃದ್ಧಿಗೆ ಜನರ ಮತ
ಕ.ಪ್ರ.ವಾರ್ತೆ ಶೃಂಗೇರಿ ಮೇ 24
ಬಿಜೆಪಿಯ 5 ವರ್ಷದ ಆಡಳಿತಾವಧಿಯಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿದ್ದು, ಜನ ಅಭಿವೃದ್ಧಿ ಬೆಂಬಲಿಸಿ ಮತ ನೀಡಿದ್ದಾರೆ ಎಂದು ಶಾಸಕ ಡಿ.ಎನ್. ಜೀವರಾಜ್ ತಿಳಿಸಿದರು.
ಪಟ್ಟಣದ ಆದಿಚುಂಚನಗಿರಿ ಸಮುದಾಯಭವನದಲ್ಲಿ ತಾಲೂಕು ಬಿಜೆಪಿ ಘಟಕದಿಂದ ಆಯೋಜಿಸಲಾಗಿದ್ದ ಕಾರ್ಯಕರ್ತರ ಬೃಹತ್ ಸಭೆ ಹಾಗೂ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಕಾರ್ಯಕ್ರರ್ತರ ಗೆಲವು: ಈ ಬಾರಿಯ ಚುನಾವಣೆ ಅಪಪ್ರಚಾರ ಹಾಗೂ ಅಭಿವೃದ್ಧಿ ನಡುವಿನ ಹೋರಟವಾಗಿತ್ತು. ಆದರೆ ಅಂತಿಮವಾಗಿ ಜನರು ಅಪಪ್ರಚಾರದ ತಂತ್ರ ತಿರಸ್ಕರಿಸಿ ಅಭಿವೃದ್ಧಿ ಬೆಂಬಲಿಸಿದರು. ಈ ಬಾರಿಯ ಗೆಲವು ಕಾರ್ಯಕರ್ತರ ಗೆಲುವು. ಈ ಗೆಲವನ್ನು ಕಾರ್ಯಕರ್ತರಿಗೆ ಅರ್ಪಿಸಿದ್ದೇನೆ. ಕ್ಷೇತ್ರದಲ್ಲಿ ಕಾರ್ಯಕರ್ತರು ಸಂಘಟಿತರಾಗಿ ಹೋರಾಟ ನಡೆಸಿದ್ದಾರೆ. ಹಣ, ಹೆಂಡದ ಆಮಿಷಕ್ಕೆ ತಕ್ಕ ಪಾಠ ಕಲಿಸಿದ್ದಾರೆ ಎಂದರು.
ಅಭಿವೃದ್ಧಿಗೆ ಅಧಿಕಾರವೊಂದೇ ಮುಖ್ಯವಲ್ಲ. ಒಳ್ಳೆಯ ಮನಸ್ಸು ಬೇಕು. ಪಕ್ಷ ಸಂಘಟಿಸುವಲ್ಲಿ ಕಾರ್ಯಕರ್ತರ ಪಾತ್ರ ಮಹತ್ತರವಾಗಿದೆ. ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು. ಪಕ್ಷದಲ್ಲಿ ಹುದ್ದೆಗಿಂತ ಪ್ರತಿಯೊಬ್ಬರೂ ಕಾರ್ಯಕರ್ತರಾಗಿ ಕೆಲಸ ಮಾಡಬೇಕು. ಸಂಘಟನಾತ್ಮಕ ಭಾವನೆಗಳಿರಬೇಕು. ಕ್ಷೇತ್ರದಲ್ಲಿ ಈಗಾಗಲೇ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿದ್ದು, ಜನಪ್ರತಿನಿಧಿಯಾಗಿ ಇನ್ನಷ್ಟು ಅಭಿವೃದ್ಧಿ ಕಾರ್ಯ ನಡೆಸುವುದಾಗಿ ತಿಳಿಸಿದರು.
ಉತ್ತಮ ಆಡಳಿತ: ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲೂಕು ಬಿಜೆಪಿ ಅಧ್ಯಕ್ಷ ಎ.ಎಸ್.ನಯನ, ಕಳೆದ 5 ವರ್ಷದಲ್ಲಿ 3 ವರ್ಷಗಳ ಕಾಲ ಉತ್ತಮ ಆಡಳಿತ ನೀಡಿದ್ದೇವೆ. ಆ ನಂತರದಲ್ಲಿ ಆಂತರಿಕ ಕಿತ್ತಾಟದಿಂದ ಆಡಳಿತ ಕ್ಷೀಣಗೊಂಡಿತು. ಇಂತಹ ಆಂತರಿಕ ಕಚ್ಚಾಟಗಳ ಮುಂದೆ ಎಂತಹ ಅಭಿವೃದ್ಧಿ, ಉತ್ತಮ ಆಡಳಿತ ನೀಡಿದರೂ ಅದು ಚುನಾವಣೆಗಳಲ್ಲಿ ಫಲ ನೀಡುವುದಿಲ್ಲ. ನಾವು ಉತ್ತಮವಾಗಿ ಆಡಳಿತ ನೀಡಿದ್ದರೆ ಜನರು ಇನ್ನೊಮ್ಮೆ ಅವಕಾಶ ನೀಡುತ್ತಿದ್ದರು ಎಂದರು.
ಜಿಪಂ ಮಾಜಿ ಉಪಾಧ್ಯಕ್ಷ ಮಾವಿನಕಾಡು ರಂಗನಾಥ್, ಬಿ. ಶಿವಶಂಕರ್, ನೀಲೇಶ್, ಮಂಜುನಾಥ್ ಪಂಡಿತ್, ಪರಾಶರ, ಕೆ.ಎಂ. ಶ್ರೀನಿವಾಸ್ ಮೊದಲಾದವರು ಉಪಸ್ಥಿತರಿದ್ದರು. ಚೇತನ್ ಹೆಗ್ಡೆ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

