ಚಿಕ್ಕಮಗಳೂರು

ಚಿಕ್ಕಮಗಳೂರು ಜಿಲ್ಲೆಯಲ್ಲಿ ಉತ್ತಮ ಮಳೆ

Published On :

ಚಿಕ್ಕಮಗಳೂರು: ನಗರದಲ್ಲಿ ಮಂಗಳವಾರ ಆರಂಭಗೊಂಡ ಮಳೆ ಜನರಲ್ಲಿ ಹರ್ಷ ಮೂಡಿಸಿದ್ದು, ಜಿಲ್ಲಾದ್ಯಂತ ಉತ್ತಮ ಮಳೆಯಾದೆ.
ಕಡೂರು, ಚಿಕ್ಕಮಗಳೂರು ಸೇರಿದಂತೆ ಸುತ್ತಲಿನ ರಾಮನಹಳ್ಳಿ, ಮರ್ಲೆ, ಮೂರ್ನಳ್ಳಿ, ಅಲ್ಲಂಪುರ, ಬೀಕನಹಳ್ಳಿ  ಮೂಡಿಗೆರೆ, ಕಡೂರು, ಬೀರೂರು, ತರೀಕೆರೆ ಮತ್ತು ಶೃಂಗೇರಿ ಮತ್ತಿತರ ಕಡೆ ಉತ್ತಮವಾಗಿ ಮಳೆ ಆಗಿದೆ.
ಮಳೆಯಿಂದಾಗಿ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯುಂಟಾಯಿತು. ಬಹು ದಿನಗಳ ನಂತರ ಜಿಲ್ಲಾದ್ಯಂತ ಉತ್ತಮ ಮಳೆಯಾಗಿ ಮಲೆನಾಡು ಮತ್ತು ಬಯಲು ಪ್ರದೇಶದ ಜನರ ಮನ ತಣಿಸಲು ಕಾರಣವಾಗಿದೆ.
ಭಾರೀ ಮಳೆ: ರಸ್ತೆಗೆ ಹರಿದ ನೀರು
ಕೊಪ್ಪ: ಸತತವಾಗಿ ಮೂರುಗಂಟೆಗೂ ಹೆಚ್ಚು ಕಾಲ ಮಳೆ ಸುರಿದ ಪರಿಣಾಮ ಪಟ್ಟಣದ ಒಳ ಚರಂಡಿಗಳು ತುಂಬಿ ರಸ್ತೆ ಮೇಲೆ ಹರಿಯುತ್ತಿದ್ದರಿಂದ ವಾಹನ ಚಾಲಕರಿಗೆ ಮತ್ತು ಪಾದಚಾರಿಗಳಿಗೆ ತೊಂದರೆಯಾದ ಘಟನೆ ಮಂಗಳವಾರ ಸಂಭವಿಸಿದೆ.
ಮಳೆಗಾಲ ಆರಂಭವಾಗಿದ್ದರು ಒಳಚರಂಡಿಗಳ ದುರಸ್ತಿ ಮಾಡದಿದ್ದು ಪಪಂ ಬೇಜಾವಬ್ದಾರಿತನಕ್ಕೆ ಇದು ಕನ್ನಡಿ ಹಿಡಿದಂತೆ ಇತ್ತು. ಟಿ.ಎಂ. ರಸ್ತೆಯ ಮೇಲೆ ಅರ್ಧ ಅಡಿಗೂ ಹೆಚ್ಚು ನೀರು ನಿಂತದ್ದರಿಂದ ವಾಹನಗಳು ಚಲಿಸುವ ಸಮಯದಲ್ಲಿ ರಸ್ತೆಯ ಇಕ್ಕೆಲದಲ್ಲಿರುವ ವಾಣಿಜ್ಯ ಮಳಿಗೆಗಳಿಗೆ ನೀರು ಹರಿಯುತ್ತಿದ್ದರಿಂದ ವ್ಯಾಪರಸ್ಥಾರಿಗೆ ತೀವ್ರ ತೊಂದರೆ ಉಂಟಾಗಿತ್ತು.
ಪಪಂನಿಂದ ಎಲ್‌ಐಸಿ ಕಚೇರಿ ಮುಂಭಾಗದಲ್ಲಿ ನೂತನವಾಗಿ ಆಟದ ಮೈದಾನ ನಿರ್ಮಾಣ ಮಾಡಿ ಇದರ ಸುತ್ತಾ ಒಳ ಚರಂಡಿ ವ್ಯವಸ್ಥೆ ಮಾಡದೇ ಇರುವುದರಿಂದ ಮೈದಾನದಲ್ಲಿರುವ ಮಣ್ಣು ಕೊಚ್ಚಿಕೊಂಡು ಕೆಳ ಭಾಗದಲ್ಲಿರುವ ಮನೆಯ ಬಾವಿಯಲ್ಲಿ ತುಂಬಿದೆ ಎಂದು ಮನೆಯವರು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದರು.
ಈ ಭಾಗದಲ್ಲಿ ಕೆಲ ದಿನಗಳಿಂದ ಮಳೆ ಇಲ್ಲದೇ ತೋಟಗಳು ಮತ್ತು ಗೋಮಾಳಗಳು ಒಣಗಿದ್ದರಿಂದ ರೈತರು ವ್ಯತೆ ಪಡುತ್ತಿದ್ದರು, ಇಂದು ಸತತವಾಗಿ 3ಗಂಟೆಗೂ ಹೆಚ್ಚು ಸಮಯ ಗಾಳಿ ರಹಿತ ಮಳೆ ಬಂದಿರುವುದು ಸಂತಸ ತಂದಿದೆ ಎಂದು ರೈತರು ಹರ್ಷವ್ಯಕ್ತಪಡಿಸುತ್ತಿದ್ದರು.
ಗುಡುಗು ಸಹಿತ ಧಾರಾಕಾರ ಮಳೆ
ಶೃಂಗೇರಿ: ತಾಲೂಕಿನ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದ ಕೆಲವೆಡೆ ಮಂಗಳವಾರ ಗುಡುಗು ಸಹಿತ ಧಾರಾಕಾರ ಮಳೆ ಸುರಿದಿದೆ. ಕಳೆದೆರೆಡು ದಿನದಿಂದ ಮೋಡ ಕವಿದ ವಾತಾವರಣ ಉಂಟಾಗಿತ್ತು.
ಮಂಗಳವಾರ ಮಧ್ಯಾಹ್ನದಿಂದಲೇ ಗುಡುಗು ಸಹಿತ ಧಾರಾಕಾರ ಮಳೆ ಸುರಿಯಿತು. ಸಂಜೆಯವರೆಗೂ ಮಳೆ ಆರ್ಭಟ ಮುಂದುವರೆದಿತ್ತು. ಗ್ರಾಮಿಣ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.