ಚಿಕ್ಕಮಗಳೂರು

ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡಲಿ: ನಿಂಗಯ್ಯ

Published On :

ಕನ್ನಡಪ್ರಭ ವಾರ್ತೆ, ಮೂಡಿಗೆರೆ,  ಮೇ 29
ಕೃಷಿ ಪ್ರಧಾನವಾಗಿರುವ ದೇಶದಲ್ಲಿ ಕೃಷಿ ಅಭಿವೃದ್ಧಿಗಾಗಿ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿ ಮಾಡಿದ್ದು, ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡುವಂತಾಗಬೇಕು ಎಂದು ಶಾಸಕ ಬಿ.ಬಿ. ನಿಂಗಯ್ಯ ಹೇಳಿದರು.
ಪಶು ಇಲಾಖೆಯ ಕಚೇರಿಯ ಆವರಣದಲ್ಲಿ ನಡೆದ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಿಂದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಲ್ಲಿ ಫಲಾನುಭವಿಗಳಿಗೆ ಮೇವು ಕತ್ತರಿಸುವ ಯಂತ್ರವನ್ನು ವಿತರಣೆ ಮಾಡಿ ಮಾತನಾಡಿ, ಸರ್ಕಾರ  ರೈತರು ಬೆಳೆಯುವ ಬೆಳೆಗಳಿಗೆ 10 ಸಾವಿರ ಖರ್ಚು ಬಂದರೆ 5 ಸಾವಿರ ಸಬ್ಸಿಡಿ ನೀಡಬೇಕು. ವಿವಿಧ ಯೋಜನೆಗಳಲ್ಲಿ ಬರುವ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ತಲುಪಬೇಕು. ವಿವಿಧ ತಳಿಯ ರಾಸುಗಳಿಗೆ ಆಹಾರವಾಗಬಹುದಾದ ಹುಲ್ಲು ಯಾವುವೆಂದು ತಿಳಿದು ಅವುಗಳನ್ನು ತಮ್ಮ ಜಮೀನಿನಲ್ಲೇ ಬೆಳೆಯಬೇಕು. ರೈತರು ಶ್ರದ್ದೆಯಿಂದ ವಿವಿಧ ಜಾತಿಯ ಹುಲ್ಲು ಗದ್ದೆಯಲ್ಲೇ ಬೆಳೆದರೆ ರಾಸುಗಳಿಗೆ ಉತ್ತಮ ಆಹಾರವಾಗುವುತ್ತದೆ. ಅಲ್ಲದೆ ಅವು ಕೊಡುವ ಹಾಲಿನಿಂದ ಹೆಚ್ಚಾಗಿ ಆರ್ಥಿಕ ಲಾಭ ಹೊಂದಬಹುದು ಎಂದರು.
ಜಾನುವಾರು ಹೊಂದಿದವರು, ಹುಲ್ಲು ಬೆಳೆದವರು, ತಕ್ಕ ಜಮೀನು ಹೊಂದಿದವರು ಮೇವು ಕತ್ತರಿಸುವ ಯಂತ್ರ ಪಡೆದರೆ ಉಪಯೋಗವಾಗಲಿದೆ ಎಂದು ಸಲಹೆ ನೀಡಿದರು.
ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ವೇಣುಗೋಪಾಲ್ ಮಾತನಾಡಿ, ಮೇವು ಕತ್ತರಿಸುವ ಯಂತ್ರ ಹುಲ್ಲನ್ನು ಹಾಳಾಗದಂತೆ ಹಸುಗಳಿಗೆ ತಿನ್ನಲು ಅನುಕೂಲಕರ ರೀತಿಯಲ್ಲಿ ಕತ್ತರಿಸುತ್ತದೆ ಎಂದರು. ಜಿಪಂ ಸದಸ್ಯ ಅನಂತ್, ರಂಜನ್ ಅಜಿತ್ ಕುಮಾರ್, ನೇಪಾ ಆದಿತ್ಯ, ಅಣಜೂರು ಸುಬ್ರಾಯಗೌಡ, ಪಶುವೈದ್ಯ ರಮೇಶ್, ಸುದೇಶ್, ನವೀನ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.