ಚಿಕ್ಕಮಗಳೂರು

ವನ್ಯಜೀವಿ ಬೇಟೆಯಾಡುತ್ತಿದ್ದ ಇಬ್ಬರು ನ್ಯಾಯಾಂಗ ವಶಕ್ಕೆ

Published On :

ಶೃಂಗೇರಿ: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ವನ್ಯಜೀವಿಗಳನ್ನು ಬೇಟೆಯಾಡಿದ್ದ ಆರೋಪದಡಿ ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಲಾಗಿದ್ದು, ಮತ್ತೊಬ್ಬ ಪರಾರಿಯಾಗಿದ್ದಾನೆ.
ಕೆರೆ ಪಂಚಾಯಿತಿ ವ್ಯಾಪ್ತಿಯ ಹಾದಿಕಿರೂರು ಗ್ರಾಮದಲ್ಲಿ ಆರೋಪಿಗಳಾದ ಚಂದ್ರಶೇಖರ್, ಉಮೇಶ್ ಮತ್ತು ಅಣ್ಣಪ್ಪಗೌಡ ಎರಡು ಕಾಡುಕುರಿಗಳನ್ನು ಬುಧವಾರ ರಾತ್ರಿ ವೇಳೆ ಬೇಟೆಯಾಡಿ ಅದರ ಮಾಂಸ ತಯಾರಿಸುತ್ತಿದ್ದಾಗ ಖಚಿತ ಸುಳಿವು ಪಡೆದು ಕೆರೆಕಟ್ಟೆ ವನ್ಯಜೀವಿ ವಿಭಾಗದ ವಲಯಾರಣ್ಯಾಧಿಕಾರಿ ಶ್ರೀನಾಥ್ ಕಡೋಲ್ಕರ್ ದಾಳಿ ನಡೆಸಿ ಇಬ್ಬರನ್ನು ಬಂಧಿಸಿ ಮಾಂಸವನ್ನು ವಶಪಡಿಸಿಕೊಂಡರು.
ಇನ್ನೊಬ್ಬ ಆರೋಪಿ ಅಣ್ಣಪ್ಪ ಗೌಡ ಪರಾರಿಯಾಗಿದ್ದಾನೆ. ಆರೋಪಿಗಳನ್ನು ನ.18ರ ವರೆಗೆ ನ್ಯಾಯಾಂಗ ವಶಕ್ಕೆ ನೀಡಲಾಗಿದೆ. ಉಪವಲಯಾರಣ್ಯಾಧಿಕಾರಿ ಕಾಂತರಾಜ್, ಅರಣ್ಯ ರಕ್ಷಕರಾದ  ಖಾಜಿಸಾಬ್, ಮಹೇಶ್, ರಾಜು, ಸಿಬ್ಬಂದಿಗಳಾದ ದಾಮೋದರ,ನಾಗೇಶ್, ವೀರೇಶ್ ತಂಡದಲ್ಲಿದ್ದರು.
ಗೃಹೋಪಯೋಗಿ ವಸ್ತುಗಳು ಭಸ್ಮ
ಕಡೂರು: ವಿದ್ಯುತ್ ಅವಘಡದಿಂದ ಮನೆಯಲ್ಲಿದ್ದ ವಸ್ತುಗಳು ಸುಟ್ಟು ಭಸ್ಮವಾಗಿರುವ ಘಟನೆ ಕಳೆದ ಶುಕ್ರವಾರ ರಾತ್ರಿ ಕಡೂರು ತಾಲೂಕು ಬೀರನಹಳ್ಳಿ ತಾಂಡ್ಯದಲ್ಲಿ ಸಂಭವಿಸಿದೆ.ಬೀರನಹಳ್ಳಿ ತಾಂಡ್ಯ ಗ್ರಾಮದ ತಿಮ್ಮಾನಾಯ್ಕ ಮತ್ತು ಕುಟುಂಬದವರು ಮನೆಗೆ ಬೀಗ ಹಾಕಿಕೊಂಡು ಪರಸ್ಥಳಕ್ಕೆ ಹೋಗಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಶುಕ್ರವಾರ ರಾತ್ರಿ ವೇಳೆ ವಿದ್ಯುತ್  ಅವಘಡದಿಂದಾಗಿ ಸುಮಾರು 1 ಲಕ್ಷ ನಷ್ಟ ಸಂಭವಿಸಿದೆ ಎಂದು ಮನೆಯ ಯಜಮಾನ ತಿಮ್ಮಾನಾಯ್ಕ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.