ಗ್ರಾಮಸ್ಥರಿಂದ ರಂಗಮಂದಿರ ನಿರ್ಮಾಣ: ಶ್ಲಾಘನೆ
ನರಸಿಂಹರಾಜಪುರ: ಕಡಹಿನಬೈಲು ಗ್ರಾಮಪಂಚಾಯ್ತಿಯ ಭದ್ರಾ ಕಾಲೋನಿಯವರು ತಮ್ಮ ಸ್ವಂತ ಶ್ರಮದಿಂದ ಶೃಂಗೇರಿ ಕ್ಷೇತ್ರಕ್ಕೇ ಮಾದರಿಯಾಗುವಂತೆ 12 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ರಂಗಮಂದಿರ, ಸಮುದಾಯ ಭವನ ನಿರ್ಮಿಸಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎಂ.ಶ್ರೀನಿವಾಸ್ ಮೆಚ್ಚುಗೆ ವ್ಯಕ್ತಪಡಿಸಿದರು.
ಭಾನುವಾರ ಶೆಟ್ಟಿಕೊಪ್ಪ ಸಮೀಪದ ಮುಹಿದ್ದೀನ್ ಜುಮ್ಮಾ ಮಸೀದಿ ಆವರಣದಲ್ಲಿ 12 ಲಕ್ಷ ವೆಚ್ಚದ ನೂತನ ರಂಗಮಂದಿರ ಮತ್ತು ಸಮುದಾಯ ಭವನ ಉದ್ಘಾಟಿಸಿ ಮಾತನಾಡಿ, ಭದ್ರಾ ಕಾಲೋನಿಯಲ್ಲಿ ಈಗಾಗಲೇ ಜನಪ್ರತಿನಿಧಿಗಳು ರಸ್ತೆ, ಕುಡಿಯುವ ನೀರಿನ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದ್ದಾರೆ.
ಭದ್ರಾ ಕಾಲೋನಿಯಲ್ಲಿ ಮದರಸ ನಿರ್ಮಾಣಕ್ಕೆ ಅನುದಾನ ನೀಡುತ್ತೇನೆಂದು ಭರವಸೆ ನೀಡಿದ ಅವರು, ಮಸೀದಿ ಕಟ್ಟಲು ಬೇಕಾದ ಅನುದಾನವನ್ನು ಕೊಡಿಸಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸುತ್ತೇನೆ ಎಂದು ಅವರು ತಿಳಿಸಿದರು.
ಮುಖ್ಯ ಅತಿಥಿಯಾಗಿದ್ದ ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಎಚ್.ಟಿ. ರಾಜೇಂದ್ರ ಮಾತನಾಡಿ, ಭದ್ರಾ ಕಾಲೋನಿಯ ಜನರು ಒಗ್ಗಟ್ಟಿನಿಂದ ಕೆಲಸ ಮಾಡಿದ್ದರಿಂದ ಸರ್ಕಾರದ ಮೇಲೆ ಹೆಚ್ಚು ಅವಲಂಬನೆ ಮಾಡದೆ ಕಟ್ಟಡಗಳ ಕಾಮಗಾರಿ ಮುಗಿಸಿದ್ದು, ಮಾದರಿಯಾಗಿದ್ದಾರೆ ಎಂದರು.
ಅತಿಥಿಯಾಗಿದ್ದ ತಾಪಂ ಸದಸ್ಯ ಎಸ್.ಎಸ್. ಶಾಂತಕುಮಾರ್ ಮಾತನಾಡಿದರು. ಸಭೆಯ ಸಾನ್ನಿಧ್ಯವನ್ನು ಶೆಟ್ಟಿಕೊಪ್ಪ ಮುಹಿದ್ದೀನ್ ಜುಮ್ಮಾ ಮಸೀದಿ ಗುರುಗಳಾದ ಹನೀಫ್ ಮದನಿ ವಹಿಸಿದ್ದರು. ಅಧ್ಯಕ್ಷತೆಯನ್ನು ಎನ್.ಎಸ್. ಸುಲೈಮಾನ್ ವಹಿಸಿದ್ದರು. ಕಡಹಿನಬೈಲು ಗ್ರಾಪಂ ಅಧ್ಯಕ್ಷ ಚಂದ್ರಶೇಖರ್, ಕರ್ನಾಟಕ ಬ್ಯಾರಿ ಅಕಾಡೆಮಿಯ ಮಾಜಿ ಸದಸ್ಯ ಎನ್.ಎ. ಶೇಖಬ್ಬ ಮತ್ತಿತರರು ಭಾಗವಹಿಸಿದ್ದರು.
ಇದೇ ಸಂದರ್ರ್ಭದಲ್ಲಿ ಭದ್ರಾ ಕಾಲೋನಿಯ ಗ್ರಾಮಸ್ಥರು ವಿಧಾನಪರಿಷತ್ ಸದಸ್ಯ ಎಂ. ಶ್ರೀನಿವಾಸ್ ಅವರನ್ನು ಅಭಿನಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

