ನಿವೃತ್ತ ಶಿಕ್ಷಕ ಗವಿಯಪ್ಪಗೆ ಸನ್ಮಾನ
ಬೀರೂರು: ತಾಲೂಕಿನ ನಿವೃತ್ತ ಶಿಕ್ಷಕ ಹಾಗೂ ರಾಷ್ಟ್ರಪ್ರಶಸ್ತಿ ಪುರಸ್ಕೃತ 80 ವರ್ಷದ ಎಂ.ಎಸ್. ಗವಿಯಪ್ಪ ಅವರನ್ನು ಅವರ ಮನೆಯ ಅಂಗಳದಲ್ಲಿ ಭಾನುವಾರ ಆತ್ಮೀಯವಾಗಿ ಸನ್ಮಾನಿಸಲಾಯಿತು. ಈ ಬಾರಿಯ ರಾಜ್ಯೋತ್ಸವದ ಪ್ರಯುಕ್ತ ತಾಲೂಕಿನಲ್ಲಿ ಕನ್ನಡಕ್ಕಾಗಿ ದುಡಿಯುತ್ತಿರುವ ಹಿರಿಯ ಚೇತನಗಳನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವ ಕಸಾಪ ವತಿಯಿಂದ ಸನ್ಮಾನ ಸಮಾರಂಭ ಜರುಗಿತು. ಮಾಜಿ ಸಂಸದ ದಿ. ಡಿ.ಸಿ. ಶ್ರೀಕಂಠಪ್ಪನವರ ಪತ್ನಿ ಲಲಿತಮ್ಮ ಗವಿಯಪ್ಪ ಅವರನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕನ್ನಡ ಸಂಸ್ಕೃತಿ ಹಾಗೂ ಸಂಸ್ಕಾರಗಳನ್ನು ಮಕ್ಕಳಿಗೆ ಕಲಿಸದಿದ್ದರೆ ನಮ್ಮ ಅಧಃಪತನ ನಮ್ಮಿಂದಲೇ ಆಗುತ್ತದೆ ಎಂದು ಎಚ್ಚರಿಸಿದರು. ತಮ್ಮ ಪತಿ ಶ್ರೀಕಂಠಪ್ಪನವರು ಸಂಸದರಾದ ಅವಧಿಯಲ್ಲಿ ಮಾಡಿದ ಜನಪರ ಕೆಲಸಗಳು ಹಾಗೂ ಚಿಕ್ಕಮಗಳೂರಿಗೆ ರೈಲು ವ್ಯವಸ್ಥೆ ಬರುವಲ್ಲಿ ಅವರ ಕೊಡುಗೆಯನ್ನು ನೆನೆಪಿಸಿದರು.
ನಂತರ ಮಾತನಾಡಿದ ತಾಲೂಕು ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್, ತಾಲೂಕು ಕೇಂದ್ರವಾದ ಕಡೂರಿನಲ್ಲಿ ನಿರ್ಮಿಸುತ್ತಿರುವ ಕನ್ನಡ ಭವನದ ಮೇಲಂತಸ್ತಿನಲ್ಲಿ ಭವನ ನಿರ್ಮಾಣಗೊಳ್ಳುತ್ತಿದೆ ಎಂದರು.
ಸನ್ಮಾನಿತರಾದ ಎಂ.ಎಸ್. ಗವಿಯಪ್ಪ ಮಾತನಾಡಿ, ತಮ್ಮ ಶಿಕ್ಷಕ ಸೇವೆ ವೃತ್ತಿಯಲ್ಲಿನ ಅನುಭವ, ನಾಡಿನ ರಕ್ಷಣೆಗಾಗಿ ನೀಡಿದ ಕೆರೆಗಳಿಗೆ ಸ್ಪಂದಿಸಿದ ತಮ್ಮ ಅನುಭವಗಳನ್ನು ಮೆಲುಕು ಹಾಕಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕ ಸಿದ್ರಾಮಪ್ಪ, ಹೋಬಳಿ ಕಸಾಪ ಅಧ್ಯಕ್ಷ ಬಿ. ಕುಮಾರಸ್ವಾಮಿ, ತಾಲೂಕು ಕಸಾಪ ಪ್ರಧಾನ ಕಾರ್ಯದರ್ಶಿ ಆನಂದಮೂರ್ತಿ, ತಾಲೂಕು ಕಸಾಪ ಆಟೋ ಸಂಘದ ಅಧ್ಯಕ್ಷ ರಮೇಶ್, ಶಿವಲಿಂಗಸ್ವಾಮಿ, ಶಿವಕುಮಾರ್, ಜಾನ್, ಸೋಮಶೇಖರ್ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

