ವೈಭವದ ವಿದ್ಯಾಶಂಕರ ಸ್ವಾಮಿ ಮಹಾರಥೋತ್ಸವ
ಶೃಂಗೇರಿ: ಇಲ್ಲಿನ ಶ್ರೀ ಶಾರದಾ ಪೀಠದ ಆವರಣದಲ್ಲಿರುವ ಪ್ರಮುಖ ದೇವಾಲಯಗಳಲ್ಲಿ ಒಂದಾಗಿರುವ ಶ್ರೀ ವಿದ್ಯಾಶಂಕರ ಸ್ವಾಮಿ ಮಹಾರಥೋತ್ಸವ ಭಾನುವಾರ ಜಗದ್ಗುರುಶ್ರೀ ಭಾರತೀ ತೀರ್ಥರ ದಿವ್ಯ ಸಾನ್ನಿಧ್ಯದಲ್ಲಿ ವೈಭವಯುತವಾಗಿ ಜರುಗಿತು.
ರಥೋತ್ಸವಾಂಗ ದೇವಾಲಯದಲ್ಲಿ ಶ್ರೀಗಳವರ ಸಮ್ಮುಖದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳು ವಿದ್ಯಾಶಂಕರ ಸ್ವಾಮಿಗೆ ವಿಶೇಷ ಪೂಜೆ, ಧಾರ್ಮಿಕ ಕ್ರಿಯಾವಿಧಿ ವಿಧಾನಗಳು ನಡೆದವು.
ಬೆಳಿಗ್ಗೆ ಪಟ್ಟಣದ ರಾಜಬೀದಿಯಲ್ಲಿ ಭಕ್ತರ ಜಯಕಾರ, ನೂರಾರು ವಿಪ್ರೋತ್ತಮರ ಮಂತ್ರಘೋಷಗಳೊಂದಿಗೆ ಸಾಗಿದ ರಥೋತ್ಸವದಲ್ಲಿ ವಾದ್ಯ, ತಟ್ಟಿರಾಯ,ಶ್ರೀ ಮಠದ ಗೋವು, ಆನೆಗಳಾದ ಲಕ್ಷ್ಮಿ, ಜಯಲಕ್ಷ್ಮಿಯರು ಪಾಲ್ಗೊಂಡು ವಿಶೇಷ ಮೆರಗು ನೀಡಿದವು.
ರಥಸಾಗುವ ಮುನ್ನ ರಸ್ತೆಯನ್ನು ಶುಭ್ರಗೊಳಿಸಿ ರಥಸಾಗುವ ಮಾರ್ಗದುದ್ದಕ್ಕೂ ರಂಗೋಲಿ ಚಿತ್ತಾರಗಳಿಂದ ಸಿಂಗರಿಸಲಾಗಿತ್ತು. ಕಳೆದ ನಾಲ್ಕೈದು ತಿಂಗಳಿಂದ ಆಗಾಗ ಬರುತ್ತಿದ್ದ ವರುಣರಾಯ ವಿದ್ಯಾಶಂಕರ ಸ್ವಾಮಿಯ ಧಾರ್ಮಿಕ ಕಾರ್ಯಗಳಿಂದ ದೂರ ಉಳಿದಿದ್ದ ಭಕ್ತರು ರಥ ಸಾಗುವ ಮಾರ್ಗದುದ್ದಕ್ಕೂ ಸುಡು ಬಿಸಿಲನ್ನು ಲೆಕ್ಕಿಸದೇ ರಸ್ತೆಯ ಇಕ್ಕೆಲಗಳಲ್ಲಿ ನಿಂತು ಭಕ್ತ ಸಮೂಹ ಭಕ್ತಿ ಭಾವದಿಂದ ಶ್ರೀ ವಿದ್ಯಾಶಂಕರ ಸ್ವಾಮಿಯ ದರ್ಶನ ಪಡೆದರು. ಶ್ರೀಗಳವರು ರಥಕ್ಕೆ ಅಭಿಮುಖವಾಗಿ ನಡೆದರು. ಕಟ್ಟೆಬಾಗಿಲು ಶ್ರೀ ಶಕ್ತಿಗಣಪತಿ ದೇವಾಲಯದಲ್ಲಿನ ಶಕ್ತಿಗಣಪತಿ ದೇವತೆಯ ದರ್ಶನ ಪಡೆದರು. ಸೋಮವಾರ ಸ್ವಾಮಿಗೆ ಅವಭೃತ ನಂತರ ತುಂಗಾನದಿಯಲ್ಲಿ ತೆಪ್ಪೋತ್ಸವ ನಡೆಯಲಿದೆ. ತೆಪ್ಪೋತ್ಸವದೊಂದಿಗೆ ರಥೋತ್ಸವಾಂಗ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

