ಮಕ್ಕಳನ್ನು ಸರ್ಕಾರಿ ಶಾಲೆಗಳತ್ತ ಆಕರ್ಷಿಸಿ
ಕ.ಪ್ರ.ವಾರ್ತೆ, ತರೀಕೆರೆ, ನ.12 ಸರ್ಕಾರಿ ಶಾಲೆಗಳೂ ಉತ್ತಮವಾಗಿ ಶಿಕ್ಷಣ ನೀಡುತ್ತಿದ್ದು, ಮಕ್ಕಳನ್ನು ಸರ್ಕಾರಿ ಶಾಲೆಗಳ ಕಡೆಗೆ ಆಕರ್ಷಿಸಬೇಕು ಎಂದು ಶಾಸಕ ಜಿ.ಎಚ್. ಶ್ರೀನಿವಾಸ್ ಹೇಳಿದರು.
ಅವರು, ಮಂಗಳವಾರ ತಾಪಂ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ತಾಪಂ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ನಡೆದ ಶಿಕ್ಷಣ ಇಲಾಖೆ ಚರ್ಚೆಯಲ್ಲಿ ಮಾತನಾಡಿದರು.
ವೈಯಕ್ತಿಕ ಗಮನ ಹರಿಸಿ: ಸರ್ಕಾರ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗಾಗಿ ಬಿಸಿಯೂಟ, ಸಮವಸ್ತ್ರ ವಿತರಣೆ, ಸೈಕಲ್ ವಿತರಣೆ, ಕ್ಷೀರಭಾಗ್ಯ ಇತ್ಯಾದಿ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಹಾಗಿದ್ದರೂ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇದೆ. ಅಧಿಕಾರಿಗಳು ಶಾಲೆಗಳ ಪ್ರಗತಿ ಮತ್ತು ಪಾಠ ಪ್ರವಚನಗಳು ಹೇಗೆ ಸಾಗುತ್ತಿದೆ ಇತ್ಯಾದಿ ಬಗ್ಗೆ ಶಾಲೆಗೆ ಆಗಾಗ್ಗೆ ಭೇಟಿ ನೀಡಿ ತನಿಖೆ ಮಾಡಬೇಕು. ಶಿಕ್ಷಕರು ಪಾಠದ ವಿಚಾರದಲ್ಲಿ ವೈಯಕ್ತಿಕ ಗಮನ ಹರಿಸಿ ಮಕ್ಕಳನ್ನು ಶಾಲೆಗೆ ಹೆಚ್ಚು ಅಕರ್ಷಿಸಬೇಕು ಎಂದು ತಿಳಿಸಿದರು.
ಹೆಚ್ಚಿನ ಸಂಖ್ಯೆಯಲ್ಲಿ ಸಮವಸ್ತ್ರ ಹೊಲಿಸಿದರೆ ಕಡಮೆ ಖರ್ಚು ಬರುತ್ತದೆ, ಒಳ್ಳೆಯ ಗುಣಮಟ್ಟದ ಸಮವಸ್ತ್ರ ಗಳನ್ನು ಕೊಡಿ ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.
ಅನ್ಯಾಯ ಸರಿಪಡಿಸಿ: ಸದಸ್ಯ ವಿಜಯನಾಯ್ಕ ಮಾತನಾಡಿ, ಹೆಚ್ಚಿನ ಶಿಕ್ಷಕರು ಪಟ್ಟಣ ವ್ಯಾಪ್ತಿಯಲ್ಲೇ ಇರಲು ಬಯಸುತ್ತಾರೆ, ಇದರಿಂದ ಗ್ರಾಮೀಣ ಶಾಲೆಯ ಮಕ್ಕಳು ಶಿಕ್ಷಣದಿಂದ ವಂಚಿತಾರಾಗುತ್ತಿದ್ದಾರೆ. ಈ ಅನ್ಯಾಯವನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.
ಸದಸ್ಯೆ ದೀಪಾ ಉಮೇಶ್ ಮಾತನಾಡಿ, ಗ್ರಾಮೀಣ ಪ್ರದೇಶದ ಹಾಸ್ಟೆಲ್ ಮಕ್ಕಳಿಗೆ ಸಂಜೆ ಪಾಠವನ್ನು ಹೇಳಿಕೊಡುವ ವ್ಯವಸ್ಥೆ ಆಗಬೇಕು ಎಂದರು. ಸದಸ್ಯೆ ಲತಾ ತಮ್ಮಯ್ಯ ಮಾತನಾಡಿ, ಉಡೇವ ಶಾಲೆಯಲ್ಲಿ ಎರಡು ವರ್ಷದಿಂದ ಕಂಪ್ಯೂಟರ್ ಹಾಳಾಗಿದೆ, ಅದನ್ನು ಕೂಡಲೇ ಸರಿಪಡಿಸಿ ಎಂದು ತಿಳಿಸಿದರು.
ಸರಿಪಡಿಸಲಾಗುವುದು: ಕ್ಷೇತ್ರ ಶಿಕ್ಷಣಾಧಿಕಾರಿ ಹರಿಪ್ರಸಾದ್ ಮಾತನಾಡಿ, ಕಂಪ್ಯೂಟರ್ ಬ್ಯಾಟರಿ ಕೂಡ ಹಾಳಾಗಿದೆ, ಕೆಟ್ಟು ಹೋಗಿರುವ ಕಂಪ್ಯೂಟರ್ ಮತ್ತು ಬ್ಯಾಟರಿಗಳನ್ನು ಸರಿಪಡಿಸಲಾಗುವುದು ಎಂದು ತಿಳಿಸಿದರು.
ತಾಪಂ ಅಧ್ಯಕ್ಷೆ ಶಾಂತಾ ಗುರುಮೂರ್ತಿ ಅಧ್ಯಕ್ಷತೆ ವಹಿಸಿದ್ದರು.
ಜಿಪಂ ಸದಸ್ಯ ಕೆ.ಪಿ. ಕುಮಾರ್, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಜಗದೀಶ್, ಸದಸ್ಯ ಸೀತಾರಾಂ, ರಾಜ್ಕುಮಾರ್, ವಿರುಪಾಕ್ಷಪ್ಪ ವಿವಿಧ ಚರ್ಚೆಯಲ್ಲಿ ಭಾಗವಹಿಸಿದ್ದರು. ತಾಪಂ ಸದಸ್ಯರು ಇ.ಒ.ದೇವರಾಜಪ್ಪ, ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು. ವಿವಿಧ ಇಲಾಖೆಯ ಮೇಲೆ ಚರ್ಚೆ ನೆಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

