ಚಿಕ್ಕಮಗಳೂರು

ಬ್ಯಾಂಕ್ನಿಂದ ವ್ಯಾವಹಾರಿಕೆ ಜ್ಞಾನ ವೃದ್ಧಿ: ಚಿನಿವಾರ

Published On :

ಚಿಕ್ಕಮಗಳೂರು: ಬ್ಯಾಂಕ್ ಆರ್ಥಿಕವಾಗಿ ಮಾತ್ರವಲ್ಲ, ನಮ್ಮಲ್ಲಿ ವ್ಯಾವಹಾರಿಕ ಜ್ಞಾನವನ್ನು ಹೆಚ್ಚಿಸುತ್ತದೆ ಎಂದು ಕೆನರಾ ಬ್ಯಾಂಕಿನ ಉಪ ಮಹಾ ಪ್ರಬಂಧಕರಾದ ಎಂ.ಎಂ. ಚಿನಿವಾರ್ ಹೇಳಿದ್ದಾರೆ.
ನಗರದ  ಮಲ್ಲಂದೂರು ರಸ್ತೆಯಲ್ಲಿ ಕೆನರಾ ಬ್ಯಾಂಕಿನ ನೂತನ ಶಾಖೆಯನ್ನು ಬುಧವಾರ ಉದ್ಘಾಟಿಸಿ ಮಾತನಾಡಿದ ಅವರು, ಬ್ಯಾಂಕಿನಿಂದ ಗೃಹ, ವ್ಯಾಪಾರ, ಶಿಕ್ಷಣ ಸಾಲಕ್ಕೆ ಹೆಚ್ಚಿನ ಆಧ್ಯತೆ ನೀಡಲಾಗುತ್ತಿದೆ ಇದರ ಸದುಪಯೋಗವನ್ನು ಜನರು ಪಡೆದುಕೊಳ್ಳಬೇಕು ಎಂದರು.
ರಾಜ್ಯಾದ್ಯಂತ ಕೆನರಾ ಬ್ಯಾಂಕಿಗೆ ಉತ್ತಮ ಗ್ರಾಹಕರು ಇದ್ದಾರೆ. ಅದುದರಿಂದ ಬ್ಯಾಂಕ್ ಅಭಿವೃದ್ಧಿ ಹೊಂದಿದೆ ಎಂದು ಹೇಳಿದರು.
ಶಿವಮೊಗ್ಗ ವಿಭಾಗದ ವ್ಯವಸ್ಥಾಪಕ ಹರಿರಾಮ್ ಶಣೈ ಮಾತನಾಡಿ, ರಾಜ್ಯಾದ್ಯಂತ ಕೆನರಾ ಬ್ಯಾಂಕ್ ಅತ್ಯುತ್ತಮ ಕೆಲಸ ನಿರ್ವಹಿಸಿ ಉತ್ತಮ ಗ್ರಾಹಕ ಸೇವೆ ಪ್ರಶಸ್ತಿಯನ್ನು ಪಡೆದಿದೆ ಎಂದರು.
ಕಾಫಿ ಬೆಳೆಗಾರರಾದ ರಮೇಶ್ಗೌಡ ಮಾತನಾಡಿ, ಬ್ಯಾಂಕ್ಗಳು ಕಾಮಧೇನು ಇದ್ದ ಹಾಗೆ. ಅದರ ಬಳಕೆಯನ್ನು ಪ್ರತಿಯೊಬ್ಬರು ಮಾಡಿಕೊಳ್ಳಬೇಕು ಎಂದು ಹೇಳಿದರು.
ಕಾಫಿ ಬೆಳೆಗಾರರಾದ ನರೇಂದ್ರ ಪೈ, ಹೇಮಂತ್ ಕುಮಾರ್, ಮಾಡೆಲ್ ಇಂಗ್ಲೀಷ್ ಶಾಲೆಯ ಪ್ರಾಂಶುಪಾಲ ಷಡಕ್ಷರಿ, ನಿವೃತ್ತ ಸಿನಿಯರ್ ಮ್ಯಾನೇಜರ್ ಮಾಲತೇಶ್ ರಾವ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.