ಒಕ್ಕಲೆಬ್ಬಿಸಬೇಡಿ, ಪುನರ್ವಸತಿ ಕಲ್ಪಿಸಿ
ಕ.ಪ್ರ.ವಾರ್ತೆ ಟಿ ಶೃಂಗೇರಿ ಟಿ ನ.13
ತಲತಲಾಂತದಿಂದ ಇಲ್ಲಿನ ನೆಲ, ಜಲ ಪರಿಸರಕ್ಕೆ ಹೊಂದಿಕೊಂಡು ಯಾರಿಗೂ ತೊಂದರೆ ನೀಡದಂತೆ ನಮ್ಮಷ್ಟಕ್ಕೆ ನಾವು ಬದುಕು ಸಾಗಿಸಿಕೊಂಡು ಬಂದಿದ್ದು, ನಮಗೆ ಓಡಾಡಲು ಸಮರ್ಪಕ ರಸ್ತೆ, ವಿದ್ಯುತ್ ಸೌಲಭ್ಯ, ಕುಡಿಯುವ ನೀರು ಇಲ್ಲ. ಆದರೂ ಇಲ್ಲಿನ ಅಲ್ಪಸ್ವಲ್ಪ ಜಮೀನು, ಕಾಡು ಉತ್ಪನ್ನಗಳನ್ನು ನಂಬಿ ಜೀವನ ನಿರ್ವಹಣೆ ಮಾಡುತ್ತಿದ್ದೇವೆ ಆದ್ದರಿಂದ ನಮ್ಮನ್ನು ಇಲ್ಲಿಂದ ಒಕ್ಕಲೆಬ್ಬಿಸಬೇಡಿ. ಬದಲಿಗೆ ಮೂಲ ಸೌಕರ್ಯ ಒದಗಿಸಿಕೊಡಿ...
ಇದು ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕೆರೆ ಪಂಚಾಯಿತಿ ವ್ಯಾಪ್ತಿ ಕೆರೆಕಟ್ಟೆ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಆಯೋಜಿಸಲಾಗಿದ್ದ ದೂರದ ಮತ್ತು ಒಳನಾಡು ಪ್ರದೇಶಾಭಿವೃದ್ಧಿ ವ್ಯಾಪ್ತಿಯ ಗ್ರಾಮಗಳ ವಿಶೇಷ ಜನಸಂಪರ್ಕ ಸಭೆಯಲ್ಲಿ ಕೆರೆ ಪಂಚಾಯಿತಿ ವ್ಯಾಪ್ತಿಯ ಶೀರ್ಲು, ಗುರಿಗೆ, ಮುಡುಬ, ತಲ್ತಾರ್, ಭಲೆಕಡಿಕೊಡಿಗೆ, ಬಾಳಗೆರೆ, ಮಾತೋಳ್ಳಿ, ಹುರಣೆ, ಬೇಗಾರು ಪಂಚಾಯಿತಿ ನೀಲಂದೂರು, ನೆಮ್ಮಾರು ಪಂಚಾಯಿತಿ ವ್ಯಾಪ್ತಿಯ ಸುತ್ತಮುತ್ತಲ ಕೆಲ ಕುಗ್ರಾಮಗಳ ಮೂಲನಿವಾಸಿಗಳು ತೋಡಿಕೊಂಡ ಅಳಲು.
ಅಭಿವೃದ್ಧಿ ಇಲ್ಲ: ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಪ್ರದೇಶಗಳ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚರ್ಚೆ ನಡೆಯುತ್ತದೆ ಆದರೆ ಅಭಿವೃದ್ಧಿ ಕಾಮಗಾರಿಗಳೇ ನಡೆಯುವುದಿಲ್ಲ. ಅಭಿವೃದ್ಧಿ ಕಾಮಗಾರಿಗಳಿಗೆ ಅರಣ್ಯ ಇಲಾಖೆ ಅಡ್ಡಿಪಡಿಸುತ್ತಿದೆ. ಜನಾಭಿಪ್ರಾಯಗಳಿಗೆ ಮನ್ನಣೆಯಿಲ್ಲ ಎಂದು ದೂರಿದರು.
ಅಧಿಕಾರಿಗಳಿಂದ ನಿರಂತರ ಕಿರುಕುಳ, ದಬ್ಬಾಳಿಕೆ ನಡೆಯುತ್ತಿದೆ. ಕಾಡುಪ್ರಾಣಿಗಳ ರಕ್ಷಣೆಯ ಹೆಸರಿನಲ್ಲಿ ಮನುಷ್ಯ ಜೀವಿಯನ್ನು ಹಿಂಸಿಸಲಾಗುತ್ತಿದೆ. ಎಲ್ಲವನ್ನೂ ಕಾನೂನು ಪರಿಮಿತಿಯೊಳಗೆ ತಂದು ನಮ್ಮ ಬದುಕುವ ಹಕ್ಕನ್ನೇ ಕಸಿಯುವ ಕೆಲಸಗಳು ನಡೆಯುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದರು.
ವಿದ್ಯುತ್ ಸೌಲಭ್ಯ: ಸುಂಕದಮಕ್ಕಿ ಗ್ರಾಮದ ಇಂದ್ರ ಮಾತನಾಡಿ, ನಮ್ಮ ಗ್ರಾಮಕ್ಕೆ ವಿದ್ಯುತ್ ಸೌಲಭ್ಯ ಕಲ್ಪಿಸಿಲ್ಲ. ಸಮರ್ಪಕವಾದ ರಸ್ತೆ ಸೌಕರ್ಯವಿಲ್ಲ. ಅನಾರೋಗ್ಯಕ್ಕೆ ತುತ್ತಾದ ರೋಗಿಯೊಬ್ಬರ ತುರ್ತು ಚಿಕಿತ್ಸೆಗೆ ಕಂಬಳಿಯಲ್ಲಿ ಸುತ್ತಿ ಆಸ್ಪತ್ರೆಗೆ ಹೊತ್ತೊಯ್ಯವ ಪರಿಸ್ಥಿತಿ ನಮ್ಮ ಗ್ರಾಮದ್ದಾಗಿದೆ ಎಂದು ಹತಾಶೆ ವ್ಯಕ್ತಪಡಿಸಿದರು.
ಇನ್ನು ಕೆಲವರು ನಮಗೆ ಇಲ್ಲಿ ನಮಗೆ ಬದುಕಲು ಅಗತ್ಯವಾದ ಸೌಕರ್ಯ ಒದಗಿಸಿಕೊಡಿ ಇಲ್ಲವೇ ಸರಿಯಾದ ಪುನರ್ವಸತಿ ಸೌಕರ್ಯ ಕಲ್ಪಿಸಿಕೊಡಿ ಎಂದು ಮನವಿ ಮಾಡಿದರು. ಡಿಸಿ ಶೇಖರಪ್ಪ ಗ್ರಾಮಸ್ಥರನ್ನು ಸಮಾಧಾನಪಡಿಸಿದರು. ಗ್ರಾಮಸ್ಥರು ಆಕ್ರೋಶ ಭರಿತರಾಗಿ ಮಾತನಾಡತೊಡಗಿದಾಗ ಜಿಲ್ಲಾ ಉಸ್ತುವಾರಿ ಸಚಿವ ಜೈನ್ ಗರಂ ಆಗಿ ನೀವೇ ಬಗೆಹರಿಸಿಕೊಳ್ಳಿ ಎಂದರು.
ಸಂಸದ ಹೆಗ್ಡೆ, ಮಾವಿನಕಾಡು ರಂಗನಾಥ್, ಶಿವಶಂಕರ್, ಅರುಣುಮಾರ್ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

