ಅಡಕೆ ಪರಿಹಾರಕ್ಕೆ ಬ್ಯಾಂಕ್ಗಳಿಂದ ಕತ್ತರಿ: ಮೀಗ
ನರಸಿಂಹರಾಜಪುರ: ಸರ್ಕಾರವು ಈ ವರ್ಷ ಅಡಕೆ ಕೊಳೆ ರೋಗಕ್ಕೆ ಪರಿಹಾರವಾಗಿ ಒಂದು ಹೆಕ್ಟೇರ್ ಅಡಕೆ ತೋಟಕ್ಕೆ 12 ಸಾವಿರ ಪರಿಹಾರ ನೀಡಿದೆ. ಆದರೆ, ಮುತ್ತಿನಕೊಪ್ಪದ ಒಂದು ರಾಷ್ಟ್ರೀಕೃತ ಬ್ಯಾಂಕ್ ಈ ಪರಿಹಾರದ ಹಣವನ್ನು ರೈತರ ಸಾಲಕ್ಕೆ ಕಟ್ಟಿಸಿಕೊಳ್ಳುತ್ತಿದೆ ಎಂದು ಕೆಪಿಸಿಸಿ ಕಿಸಾನ್ ಘಟಕದ ಉಪಾಧ್ಯಕ್ಷ ಸಚಿನ್ ಮೀಗ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುತ್ತಿನಕೊಪ್ಪ ಭಾಗದ ಕೆಲವು ಅಡಕೆ ಬೆಳೆಗಾರರು ತಮಗೆ ಸರ್ಕಾರ ನೀಡಿದ ಕೊಳೆ ರೋಗದ ಪರಿಹಾರದ ಚೆಕ್ನ್ನು ಬ್ಯಾಂಕಿನ ತಮ್ಮ ಖಾತೆಗೆ ಕಲೆಕ್ಷನ್ಗೆ ಹಾಕಿದ್ದಾರೆ. ಈಗ ಹಣ ಖಾತೆಗೆ ಬಂದರೂ ಬ್ಯಾಂಕಿನವರು ಸಾಲಕ್ಕೆ ಕಟ್ಟಿಸಿಕೊಳ್ಳುತ್ತಿದ್ದಾರೆ. ಇದು ನಬಾರ್ಡ್ ನಿಯಮದ ಉಲ್ಲಂಘನೆಯಾಗಿದೆ. ಈ ಬಗ್ಗೆ ಸರ್ಕಾರವು ಸಮಗ್ರವಾಗಿ ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು.
ಮುತ್ತಿನಕೊಪ್ಪ ಗ್ರಾಮದ ಮತ್ತೊಂದು ಪ್ರಕರಣದಲ್ಲಿ ರೈತರೊಬ್ಬರು ಇದೇ ರಾಷ್ಟ್ರೀಕೃತ ಬ್ಯಾಂಕಿನಲ್ಲಿ 2007ರಲ್ಲಿ 10.50 ಲಕ್ಷ ಸಾಲ ಪಡೆದಿದ್ದರು. ಆಗ ದೇಶದಲ್ಲಿ ಬರಗಾಲ ಬಂದಿದ್ದರಿಂದ ಕೇಂದ್ರ ಸರ್ಕಾರವು ರೈತರ ಸಾಲವನ್ನು ಮರು ಹೊಂದಾಣಿಕೆಗೆ ಆದೇಶ ನೀಡಿತ್ತು. 2011ರಲ್ಲಿ ನಬಾರ್ಡ್ ಆದೇಶದಂತೆ ರೈತರ ಸಾಲವನ್ನು 11 ವರ್ಷಗಳ ಕಾಲ ಕಂತುಗಳಾಗಿ ಸಾಲವನ್ನು ವಿಂಗಡಿಸಬೇಕಾಗಿತ್ತು. ಈಗ ರೈತರು ತೀರಿಹೋಗಿದ್ದು, ಬ್ಯಾಂಕಿನವರು ರೈತರ ಕುಟುಂಬಕ್ಕೆ ಅಸಲು, ಬಡ್ಡಿ, ಸುಸ್ತಿ ಬಡ್ಡಿ ಸೇರಿ 24 ಲಕ್ಷ 60 ಸಾವಿರ ಕಟ್ಟುವಂತೆ ನೋಟಿಸ್ ನೀಡಿದ್ದಾರೆ.
ರೈತ ವಿರೋಧಿ ಬ್ಯಾಂಕ್: ಆ ಕುಟುಂಬದವರು ಬ್ಯಾಂಕಿನಲ್ಲಿ ವಿಚಾರಿಸಿದರೆ ಸರಿಯಾದ ಮಾಹಿತಿ ನೀಡುತ್ತಿಲ್ಲ. 2011ರಲ್ಲಿ ರಾಜ್ಯಕ್ಕೆ ಸಾಲ ಮರು ಹೋಂದಾಣಿಕೆಗೆ 3 ಕೋಟಿ ಬಿಡುಗಡೆ ಮಾಡಿತ್ತು. ರೈತರ ಪರವಾಗಿ ಇರಬೇಕಾದ ಬ್ಯಾಂಕುಗಳು ರೈತ ವಿರೋಧಿಯಾಗಿ ಕೆಲಸ ಮಾಡುತ್ತಿದೆ ಎಂದು ಅವರು ಆರೋಪಿಸಿದರು.
ಶೀಘ್ರದಲ್ಲೇ ರಾಜ್ಯದ ಅಡಕೆ ಹಳದಿ ಎಲೆ ರೋಗ ಪೀಡಿತ ತೋಟದ ಮಾಲೀಕರಿಗೆ ಕೇಂದ್ರ ಸರ್ಕಾರವು 180 ಕೋಟಿ ಬಿಡುಗಡೆ ಮಾಡಲಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಒಟ್ಟು ಅಡಕೆ ಬೆಳೆಗಾರರ ಸಾಲ 600 ಕೋಟಿ ಇದ್ದು ಕೇಂದ್ರ ಸರ್ಕಾರವು ಎಲ್ಲ ಸಾಲವನ್ನು ಮನ್ನಾ ಮಾಡುವಂತೆ ಹೋರಾಟ ಮಾಡಲಾಗಿತ್ತು. ಈ ಹೋರಾಟಕ್ಕೆ ಸದ್ಯದಲ್ಲೇ ಜಯ ಸಿಗಲಿದೆ ಎಂದರು.
ಈ ಸಂದರ್ಭದಲ್ಲಿ ತಾಲೂಕು ಕಾಂಗ್ರೆಸ್ ವಕ್ತಾರ ಉಪೇಂದ್ರ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

