'ಮಹಿಳೆಯರ ಹಕ್ಕು ಕಸಿಯುತ್ತಿರುವ ಸಮಾಜ'
ಕ.ಪ್ರ.ವಾರ್ತೆ ಚಿಕ್ಕಮಗಳೂರು ನ.17
ಮಹಿಳೆಯರ ಹಕ್ಕುಗಳನ್ನು ಇಂದಿನ ಸಮಾಜ ಕಸಿದುಕೊಳ್ಳುತ್ತಿದೆ ಎಂದು ಮೈಲಿಮನೆ ಪ್ರೌಢ ಶಾಲಾ ಶಿಕ್ಷಕಿ ಮಮತಾ ಶಿವಮೂರ್ತಿ ವಿಷಾದಿಸಿದರು.
ಅಕ್ಕಮಹಾದೇವಿ ಮಹಿಳಾ ಸಂಘದ ಆಲ್ದೂರು ವಿಭಾಗದ ಶರಣೆ ನೀಲಾಂಬಿಕೆ ತಂಡ ನಗರದ ಜಗದ್ಗುರು ರೇಣುಕಾಚಾರ್ಯ ಸಮುದಾಯ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ತಿಕ ಹುಣ್ಣಿಮೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವೇದಾಂತವು ಎಲ್ಲ ಜೀವಿಗಳಲ್ಲೂ ಒಂದೇ ಆತ್ಮವಿದೆ ಎಂದು ಸಾರಿದ್ದರೂ ಸಮಾಜ ಸ್ತ್ರೀ-ಪುರುಷರಲ್ಲಿ ಭೇದ- ಭಾವ ತಂದಿಟ್ಟಿದೆ. ಇದಕ್ಕೆ ಪ್ರಕೃತಿಯ ಪಾಲು ಸ್ವಲ್ಪ ಕಾರಣವಾದರೆ, ಮನುಸ್ಪೃತಿಯ ಕಠೋರ ಮನಸ್ಸುಗಳು ಬಹಳಷ್ಟು ಕಾರಣವಾಗಿದೆ ಎಂದರು.
ವೇದ ಕಾಲದಲ್ಲಿ ಗಾರ್ಗಿ, ಮೈತ್ರೇಯಿಯಂತಹ ನಾರೀರತ್ನರು ಋಷಿ ಸ್ಥಾನದಲ್ಲಿದ್ದು, ಚಿಂತನಾಶೀಲತೆಗೆ ಹೆಸರಾಗಿದ್ದರು. ಮಹಿಳೆ ತನ್ನಲ್ಲಿರುವ ಸದ್ಗುಣಗಳಿಂದ ಸಮಾಜದಲ್ಲಿ ಶಕ್ತಿ ಸ್ವರೂಪಿಣಿ, ತಾಯಿಯಾಗಿ ಸಮಾಜ ವ್ಯವಸ್ಥೆಯ ಕೇಂದ್ರ ಬಿಂದು. ಅಸ್ತಿತ್ವದ ಮೂಲ. ಕರುಣಾಮಯಿ, ತ್ಯಾಗಮಯಿ, ಕ್ಷಮಯಾಧರಿತ್ರಿ, ಭೂದೇವಿ ಎಂಬ ಹೊಗಳಿಕೆಗೆ ಪಾತ್ರಳಾದವಳು ಮಹಿಳೆ. ಸುಸಂಸ್ಕೃತ ಮಹಿಳೆಯಿಂದಲೇ ಸ್ವಾಸ್ಥ್ಯ ಕುಟುಂಬ ಮತ್ತು ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.
ತೊಟ್ಟಿಲು ತೂಗುವ ಕೈ ಜಗತ್ತನ್ನೆ ತೂಗುತ್ತಿದೆ. ಯಶಸ್ವಿ ಪುರುಷನ ಹಿಂದೆ ಮಹಿಳೆ ಇರುತ್ತಾಳೆ. ಹೆಣ್ಣಿನಿಂದಲೇ ಇಹವು, ಹೆಣ್ಣಿನಿಂದಲೇ ಪರವು, ಹೆಣ್ಣಿನಿಂದಲೇ ಸುಖ ಸಾಮ್ರಾಜ್ಯ, ಹೆಣ್ಣೊಂದು ಇಲ್ಲದಿರೆ ಮಣ್ಣು ಮುಕ್ಕಿದಂತೆಯೇ ಎಂಬ ಮಾತುಗಳನ್ನು ಉಲ್ಲೇಖಿಸಿದ ಮಮತಾ, ಮಕ್ಕಳಲ್ಲಿ ಯೋಚನಾಶಕ್ತಿ, ಸ್ಪಷ್ಟತೆ, ವಿಚಾರವಂತಿಕೆ, ಪ್ರಶ್ನಿಸುವ ಮನೋಭಾವ ಪ್ರೇರೇಪಿಸುವುದರಿಂದ ಒಳ್ಳೆಯ ಸಮಾಜ ಕಟ್ಟಬಹುದೆಂದರು.
ಅಕ್ಕಮಹಾದೇವಿ ಮಹಿಳಾ ಸಂಘದ ಅಧ್ಯಕ್ಷೆ ಗೌರಮ್ಮ ಬಸವೇಗೌಡ ಅಧ್ಯಕ್ಷತೆ ವಹಿಸಿದ್ದರು. ತಂಡದ ಉಪಾಧ್ಯಕ್ಷೆ ವನಮಾಲಾ ಮೃತ್ಯಂಜಯ ಪ್ರಾಸ್ತಾವಿಕವಾಗಿ ಮಾತನಾಡಿದರು.
ನವೀನಾ ಮಹೇಶ್ ನಿರೂಪಿಸಿದರು. ದಾಕ್ಷಾಯಣಿ ಬಸವರಾಜ್ ಸ್ವಾಗತಿಸಿದರು. ಅನಿತಾ ಪ್ರಶಾಂತ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

