ಚಿಕ್ಕಮಗಳೂರು

ಕಾರಂತರ ಗಾಢ ಸಂವೇದನೆ ಕುರಿತು ದತ್ತಿ ಉಪನ್ಯಾಸ

Published On :

ಬಾಳೆಹೊನ್ನೂರು: ಶಿವರಾಮ ಕಾರಂತರು ರಚಿಸಿದ ಹಲವು ಕೃತಿಗಳಲ್ಲಿ ಕಂಡು ಬರುವ ಪಾತ್ರಗಳು, ಘಟನೆಗಳು ನಮ್ಮ ನಮ್ಮ ನಡುವೆಯೇ ನಡೆದಂತೆ ಕಂಡು ಬರುತ್ತದೆ ಎಂದು ಕೊಪ್ಪ ತಾಲೂಕು ಕಸಾಪ ಮಾಜಿ ಅಧ್ಯಕ್ಷ ಎಚ್.ಎಂ. ಸುಬ್ಬಣ್ಣ ಹೇಳಿದ್ದಾರೆ.
ಸಮೀಪದ ಹೇರೂರು ಗ್ರಾ.ಪಂ. ವ್ಯಾಪ್ತಿಯ ವೀರಗಲ್ಲುಮಕ್ಕಿ ಶಾಲಾ ಆವರಣದಲ್ಲಿ ಮೇಗುಂದಾ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ. ಶಿವರಾಮಕಾರಂತರ ಕೃತಿಗಳಲ್ಲಿ ಗಾಢ ಸಂವೇದನೆಗಳು ಎಂಬ ವಿಷಯದ ಕುರಿತಾಗಿ ಅವರು ಮಾತನಾಡಿದರು.
ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಎಲ್ಲಾ ಕ್ಷೇತ್ರಗಳ ಕುರಿತು ಆಳವಾಗಿ ಅಧ್ಯಯನ ನಡೆಸಿ ಸಾಹಿತ್ಯ ರಚಿಸುತ್ತಿದ್ದರು. ಕಾರಂತರು ಹಿಂದೆ ಹೊಸಕೊಪ್ಪದ ತಮ್ಮ ಮನೆಗೆ ಆಗಾಗ ಭೇಟಿ ನೀಡುತ್ತಿದ್ದಾಗ ನಡೆದ ಕೆಲ ಘಟನೆಗಳನ್ನು ಅವರು ಮೆಲುಕು ಹಾಕಿದರು.
ಜಿಲ್ಲಾ ಕಸಾಪ ಗೌರವ ಕೋಶಾಧ್ಯಕ್ಷ ನೆ.ಲ. ಸುಬ್ರಹ್ಮಣ್ಯ ಮಾತನಾಡಿ, ಸಾಹಿತ್ಯ ಪರಿಷತ್ತು ಶತಮಾನೋತ್ಸವದ ಸಂಭ್ರಮದಲ್ಲಿದೆ. ರಾಜ್ಯದಲ್ಲಿ ಮಕ್ಕಳ ಕೃತಿ ರಚನೆ, ಮಹಿಳಾ ಕೃತಿ ರಚನೆ ಸೇರಿದಂತೆ ವಿವಿಧ ಉದ್ದೇಶಗಳಿಗಾಗಿ 1400 ದತ್ತಿಗಳನ್ನಯ ಸ್ಥಾಪಿಸಲಾಗಿದೆ.
ಜಿಲ್ಲೆಯಲ್ಲಿ 125 ಸಾಹಿತ್ಯ ದತ್ತಿನಿಧಿ ಇದೆ. ಡಾ. ರಾಜ್‌ಕುಮಾರ್ ಅವರ ಕುಟುಂಬ ಚಲನಚಿತ್ರ ವಿಭಾಗದಲ್ಲಿ ಸಾಹಿತ್ಯ ಪ್ರಶಸ್ತಿ ನೀಡಲು 5 ಲಕ್ಷ ನೀಡಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಜಯಪುರದ ನುಡಿಚಿತ್ರ ಸಂಗ್ರಾಹಕ ಶಂ.ನ. ಶೇಷಗಿರಿ ನುಡಿಚಿತ್ರಗಳನ್ನು ಪ್ರದರ್ಶಿಸಿದರು. ದತ್ತಿದಾನಿ ಎಚ್.ಎಸ್. ಬಾಲಚಂದ್ರ, ತಾಲ್ಲೂಕು ಕಸಾಪ ಅಧ್ಯಕ್ಷ ಗುಡ್ಡೇತೋಟ ನಟರಾಜ್, ಎಚ್.ವಿ. ಶಿವಾನಂದರಾವ್, ಹೇರೂರು ಪಿಎಸಿಎಸ್ ಅಧ್ಯಕ್ಷ ಸಿ.ವಿ. ರಾಜೇಶ, ಗ್ರಾ.ಪಂ. ಉಪಾಧ್ಯಕ್ಷೆ ಸುನಂದಾ ಸುಬ್ಬಣ್ಣ, ಅಭ್ಯುದಯ ಸ್ವ ಸಹಾಯ ಸಂಘದ ಅಧ್ಯಕ್ಷ ಎಚ್.ಎಂ. ರತ್ನರಾಜ್, ಶಾಲಾ ಮುಖ್ಯೋಪಾಧ್ಯಾಯ ಎಂ.ಡಿ. ಕುಮಾರ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಹು.ವಾ. ಶ್ರೀವತ್ಸ, ಎಸ್‌ಡಿಎಂಸಿ ಅಧ್ಯಕ್ಷ ಎಚ್.ಎನ್. ಸತೀಶ್ ಜೈನ್, ವಿವೇಕಾನಂದ, ಕಿಬ್ಳಿ ರಂಗಪ್ಪಗೌಡ, ರಾಜೇಶರಾವ್, ಎಚ್.ಎಸ್. ಶಶಿಧರ್, ಎ.ಜಿ. ಅನಂತಭಟ್, ತಿಪ್ಪೇಶ್, ಕಾತ್ಯಾಯಿನಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.