ಚಿಕ್ಕಮಗಳೂರು

ಬಾಲ್ಯದಲ್ಲೇ ಮಾರ್ಗದರ್ಶನ ನೀಡಿದರೆ ಹೆಚ್ಚಿನ ಸಾಧನೆ

Published On :

ಕ.ಪ್ರ.ವಾರ್ತ್ಣೆ ಚಿಕ್ಕಮಗಳೂರು ನ.19
ಮಕ್ಕಳಲ್ಲಿ ಗ್ರಹಿಕೆ ಸಾಮರ್ಥ್ಯ ಅಧಿಕ. ಬಾಲ್ಯದಲ್ಲೆ ಅವರ ಸಾಮರ್ಥ್ಯ ಗುರುತಿಸಿ ಸೂಕ್ತ ಮಾರ್ಗದರ್ಶನ ನೀಡಿದರೆ ಹೆಚ್ಚಿನ ಸಾಧನೆ ನಿರೀಕ್ಷಿಸಬಹುದೆಂದು ನಿವೃತ್ತ ಸಹಾಯಕ ಖಜಾನೆ ಅಧಿಕಾರಿ ಎಸ್.ಕೆ. ಈಶ್ವರಯ್ಯ ಹೇಳಿದ್ದಾರೆ.
ನಗರದ ಆಜಾದ್ ಪಾರ್ಕ್ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಆಯೋಜಿಸಿದ್ದ ಮಕ್ಕಳ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಪ್ರಥಮ ಪ್ರಧಾನಿ ಪಂಡಿತ ಜವಾಹರಲಾಲ್ ನೆಹರು ಅವರಲ್ಲಿದ್ದ ಮಕ್ಕಳ ಪ್ರೀತಿಯ ಧ್ಯೋತಕವೇ ಈ ಕಾರ್ಯಕ್ರಮ. ಇದೇ ರೀತಿಯ ಮಕ್ಕಳ ಮೇಲೆ ಪ್ರೀತಿ ಮತ್ತು ಭರವಸೆ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂರಲ್ಲಿ ಕಾಣುತ್ತದೆ ಎಂದರು.
ಭಾರತದ ಭವಿಷ್ಯ ಉಜ್ವಲ: ಮಕ್ಕಳಲ್ಲಿ ಗ್ರಹಣಶಕ್ತಿ ಅಧಿಕವಾಗಿರುವುದರಿಂದ ಭಾಷೆಗಳೇ ಇರಲಿ, ವಿಷಯಗಳೇ ಇರಲಿ ಕಲಿಕೆ ವಯಸ್ಕರಿಗಿಂತ ಪರಿಣಾಮಕಾರಿ ಹಾಗೂ ಸುಲಭ. 3-4 ವರ್ಷದ ಮಕ್ಕಳು ಇಂದು ಟಿ.ವಿ., ಮೊಬೈಲ್, ಕಂಪ್ಯೂಟರ್ ಬಳಸುತ್ತಾರೆಂದು ಉದಾಹರಿಸಿದ ಈಶ್ವರಯ್ಯ, ಒಳ್ಳೆಯ ಶಿಕ್ಷಕರ ಅಗತ್ಯ ಸಮಾಜಕ್ಕಿಂದು ಹೆಚ್ಚಾಗಿದೆ. ಒಳ್ಳೆಯ ಮಕ್ಕಳು ತಯಾರಾದರೆ ಭಾರತದ ಭವಿಷ್ಯ ಉಜ್ವಲವಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎನ್.ಎಸ್. ಜಗದೀಶ್ವರಾಚಾರ್ ಬಹುಮಾನ ವಿತರಿಸಿ ಮಾತನಾಡಿ, ಮಕ್ಕಳಲ್ಲಿ ದೊಡ್ಡಗುರಿ ಇರಬೇಕು. ಅದನ್ನು ಸಾಧಿಸುವ ಛಲ, ಪ್ರಯತ್ನ, ಪರಿಶ್ರಮ ಅಗತ್ಯ ಎಂದರು.  
ಸಿ.ಆರ್.ಪಿ. ಶಿವಣ್ಣ ನಾಯಕ ಗುರುಹಿರಿಯನ್ನು ಗೌರವಿಸುವ ಮನೋಭಾವ ಬೆಳೆಸಿಕೊಂಡರೆ ಭವಿಷ್ಯದ ಜೀವನ ಸಾರ್ಥಕವಾಗುತ್ತದೆ ಎಂದು ತಿಳಿಸಿದರು. ಮುಖ್ಯ ಶಿಕ್ಷಕ ಎಸ್.ಈ. ಲೋಕೇಶ್ವರಾಚಾರ್, ತಾಲೂಕು ಶಿಕ್ಷಕರ ಸಂಘದ ಕಾರ್ಯದರ್ಶಿ ಎಸ್.ಎಂ. ಮಹೇಶ್ವರಪ್ಪ, ಶಿಕ್ಷಕರಾದ ವಸಂತಲಕ್ಷ್ಮೀ, ತಮಿಳು ಶಾಲೆಯ ಮುಖ್ಯಾಪಾಧ್ಯಾಯಿನಿ ವಾನುಮತಿ, ದೀಪಿಕಾ, ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಲಿಖಿತಾ ಸ್ವಾಗತಿಸಿದರು, ಪುಣ್ಯ ಕಾರ್ಯಕ್ರಮ ನಿರೂಪಿಸಿದರು. ಅಖಿಲಾರಾಣಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.