ಚಿಕ್ಕಮಗಳೂರು

ಅಡಕೆ ಬೆಳೆಗಾರರಿಗೆ ಕೇಂದ್ರ ಸರ್ಕಾರ ವಂಚನೆ: ಮೀಗಾ

Published On :

ಕ.ಪ್ರ.ವಾರ್ತೆ ಚಿಕ್ಕಮಗಳೂರು ನ. 20
ಅಡಕೆ ತಿನ್ನುವುದರಿಂದ ಕ್ಯಾನ್ಸರ್ ಬರುತ್ತದೆ ಎಂದು ಕೇಂದ್ರದ ಅರೋಗ್ಯ ಇಲಾಖೆ ಸುಪ್ರೀಂಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸುವ ಮೂಲಕ ಅಡಕೆ ಬೆಳೆಗಾರರಿಗೆ ವಂಚಿಸಿದೆ ಎಂದು ಕೆಪಿಸಿಸಿ ಕಿಸಾನ್ ಘಟಕದ ರಾಜ್ಯ ಉಪಾಧ್ಯಕ್ಷ ಸಚಿನ್ ಮೀಗಾ ಆರೋಪಿಸಿದ್ದಾರೆ.
ತಂಬಾಕು ಕಂಪನಿಗಳ ಲಾಬಿಗೆ ಮಣಿದು ಆರೋಗ್ಯ ಇಲಾಖೆ ಈ ರೀತಿಯ ಪ್ರಮಾಣ ಪತ್ರವನ್ನು ಸಲ್ಲಿಸಿದೆ ಎಂದು ಸುದ್ದಿಗೋಷ್ಠಿಯಲ್ಲಿ ಬುಧವಾರ ಹೇಳಿದರು.
ಈ ಹಿಂದೆ ಸುಪ್ರೀಂಕೋರ್ಟ್‌ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಪಾನ್ ಗುಟ್ಕಾ ಸೇವಿಸುವುದರಿಂದ ಕಾನ್ಸರ್ ಬರುತ್ತದೆ. ಆದ್ದರಿಂದ ಗುಟ್ಕಾ ಹಾಗೂ ಅಡಕೆ ಪದಾರ್ಥವನ್ನು ನಿಷೇಧಿಸಬೇಕೆಂದು ಪ್ರಮಾಣ ಪತ್ರ ಸಲ್ಲಿಸಿದ್ದರು. ಇದರ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಸರ್ಕಾರಗಳು ಗುಟ್ಕಾ ನಿಷೇಧ ಮಾಡಿದ್ದವು ಎಂದು ತಿಳಿಸಿದರು.
ಕಳೆದ ಅ.29ರಂದು ಕೇಂದ್ರ ಆರೋಗ್ಯ ಇಲಾಖೆ ಅಧಿಕಾರಿಗಳು ಸುಪ್ರೀಂ ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿ ಬರೀ ಅಡಕೆ ತಿನ್ನುವುದರಿಂದ ಕಾನ್ಸರ್ ಬರುತ್ತದೆ ಎಂದು ಉಲ್ಲೇಖಿಸಿ ಪ್ರಮಾಣ ಪತ್ರ ಸಲ್ಲಿಸಿದ್ದಾರೆ.
ಈ ಹಿಂದೆ ಹೊಗೆ ಸೊಪ್ಪು ಮಿಶ್ರಿತ ಅಡಕೆ ತಿಂದರೆ ಕಾನ್ಸರ್ ಬರುತ್ತೆ ಎಂದು ಹೇಳಿದ ಅಧಿಕಾರಿಗಳು ಈಗ ಬರೀ ಅಡಕೆ ತಿಂದರೂ ಹಾನಿಕರ ಎಂದು ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಇದು ಮೇಲ್ನೋಟಕ್ಕೆ ತಂಬಾಕಿನ ಕಂಪನಿಯ ಹಿಡಿತ ಹಾಗೂ ಅಧಿಕಾರಿಗಳಿಗೆ ಭ್ರಷ್ಟಾಚಾರದ ಮುಖಾಂತರ ಇಂತಹ ಅವೈಜ್ಞಾನಿಕ ನಿಲುವುಗಳನ್ನು ಅಡಕೆ ಸೇವನೆ ಬಗ್ಗೆ ಪ್ರಮಾಣ ಪತ್ರ ಸಲ್ಲಿಸಿರುವುದು ಕಂಡುಬರುತ್ತದೆ ಎಂದರು.
ಕೋರ್ಟ್ ಇದಕ್ಕೆ ಮನ್ನಣೆ ನೀಡಿದರೆ ಅಡಕೆ ಹಾನಿಕರ ಎಂದು ಕೋರ್ಟ್ ಪರಿಗಣಿಸಿದರೆ ಅಡಕೆ ಬೆಳೆ, ಗಾಂಜಾ ಬೆಳೆ ತರಹದ ನಿಷೇಧಕ್ಕೆ ಒಳಗಾಗುತ್ತದೆ. ಅದುದರಿಂದ ಕೂಡಲೆ ಅಡಕೆ ಬೆಳೆಗಾರರು, ರೈತ ಮುಖಂಡರು ಮ್ಯಾಮ್ಕೋಸ್, ತಾಮ್ಕೋಸ್, ಕ್ಯಾಂಪ್ಕೋ ವಿವಿಧ ಪಕ್ಷದ ಮುಖಂಡರು ಪಕ್ಷ ಬೇಧ ಮರೆತು ಅಡಕೆ ಬೆಳೆಗಾರರ ಹಿತದೃಷ್ಟಿಯಿಂದ ಅಡಕೆ ಸಂಶೋಧನ ಕೇಂದ್ರಗಳ ಮುಖಾಂತರ ಅಡಕೆ ಹಾನಿಕರ ಅಲ್ಲವೆಂಬ ವೈಜ್ಞಾನಿಕ ಪ್ರಮಾಣ ಪತ್ರ ಸಲ್ಲಿಸಬೇಕು. ಆರೋಗ್ಯ ಇಲಾಖೆ ಅಧಿಕಾರಿಗಳ ತಪ್ಪು ಪ್ರಮಾಣ ಪತ್ರ ವಿರುದ್ಧ ಮೇಲೆ ಮನವಿ ಸಲ್ಲಿಸಲು ಮುಂದಾಗಬೇಕು ಎಂದರು.
ಇಲ್ಲವಾದಲ್ಲಿ ಅಡಕೆ ಬೆಳೆಗಾರರು ಮುಂದಿನ ದಿನಗಳಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಈಗಾಗಲೇ ಈ ಭಾಗದ ಅಡಕೆ ಬೆಳೆಗಾರರು ಸಾಲ ತೀರಿಸಲಾಗದೆ ಕಂಗಾಲಾಗಿದ್ದಾರೆ. ಹಲವಾರು ರೈತರು ಆತ್ಮಹತ್ಯೆಗೆ ಶರಣರಾಗಿದ್ದಾರೆ. ಅಡಕೆ ಹಾನಿಕರವಲ್ಲ ತಂಬಾಕು ಹಾನಿಕರ ಎಂದು ಕೋರ್ಟ್‌ಗೆ ಮನವರಿಕೆ ಮಾಡಿ ತಂಬಾಕು ನಿಷೇಧಿಸುವಂತೆ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಬೇಕು. ಇಲ್ಲವಾದಲ್ಲಿ ತಂಬಾಕು ತಯಾರಿಕರ ಕಪಿಮುಷ್ಟಿಯಿಂದ ಅಡಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.