ಚಿಕ್ಕಮಗಳೂರು

'ಭಯೋತ್ಪಾದನೆ ನಿಗ್ರಹಕ್ಕೆ ಪಣತೊಡಬೇಕು'

Published On :

ಚಿಕ್ಕಮಗಳೂರು:  ರಾಷ್ಟ್ರೀಯತೆ ಅಂತರಂಗದಿಂದ ಸ್ಫುರಿಸಬೇಕು. ಭಾವೈಕ್ಯತೆ ಹೃದಯದ ಅಂತರಾಳದಿಂದ ಹೊಮ್ಮಬೇಕು. ಆಗ ದೇಶ ಶಾಂತಿಯ ತೋಟವಾಗುತ್ತದೆ ಎಂದು ನಿವೃತ್ತ ಉಪನ್ಯಾಸಕ ಬಿ. ತಿಪ್ಪೇರುದ್ರಪ್ಪ ಹೇಳಿದ್ದಾರೆ.
 ನಗರದ ಆಜಾದ್ ಪಾರ್ಕ್ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ, ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಆಯೋಜಿಸಿರುವ ರಾಷ್ಟ್ರೀಯ ಭಾವೈಕ್ಯತಾ ಸಪ್ತಾಹ- 2013 ಅನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತ ವಿವಿಧ ಭಾಷೆ, ಧರ್ಮ, ಜಾತಿ, ವರ್ಣ, ಲಿಂಗ, ಬಣ್ಣ, ಮತಗಳಿರುವ ದೇಶ. ವೈವಿಧ್ಯಮಯವಾದ ಸಂಸ್ಕೃತಿ ಇಲ್ಲಿದೆ. ವಿವಿಧತೆಯಲ್ಲಿ ಏಕತೆ ರೂಢಿಸಿಕೊಳ್ಳುವಲ್ಲಿ ನಮ್ಮ ಭಾವ ಮುಖ್ಯವಾಗುತ್ತದೆ ಎಂದರು.
ಭಯೋತ್ಪಾದನೆ ನಿಗ್ರಹಿಸಿ: ರಾಷ್ಟ್ರಕವಿ ಕುವೆಂಪು ನನ್ನದು ನಾಡು, ನನ್ನದು ದೇಶ ಎನ್ನದವನ ಎದೆ ಸುಡುಗಾಡು ಎಂದಿರುವುದನ್ನು ಉಲ್ಲೇಖಿಸಿದ ತಿಪ್ಪೇರುದ್ರಪ್ಪ,  ಗಡಿಯಲ್ಲಿ ಯೋಧರು ಪ್ರಾಣದ ಹಂಗುತೊರೆದು ದೇಶ ಕಾಯುತ್ತಿದ್ದಾರೆ. ಭಯೋತ್ಪಾದನೆ ಒಂದೆಡೆ ಇದ್ದರೆ, ದೇಶದೊಳಗಿರುವ ಭಯೋತ್ಪಾದನೆ ನಿಗ್ರಹಕ್ಕೆ ನಾವೆಲ್ಲರೂ ಪಣತೊಡಬೇಕು. ರಾಷ್ಟ್ರ ನಾಯಕರನ್ನು ಕೊಲೆ ಮಾಡುವ ಹೀನಕೃತ್ಯಗಳು, ಜನಸಾಮಾನ್ಯನ ಜೀವಹಾನಿ, ಆಸ್ತಿಪಾಸ್ತಿ ಹಾನಿ ಇವೆಲ್ಲಾ ದೇಶವನ್ನು ಅಭದ್ರಗೊಳಿಸುವ ಕೃತ್ಯಗಳಾಗಿದ್ದು, ಇದರ ವಿರುದ್ಧ ಪ್ರಜೆಗಳು ಸದಾ ಜಾಗೃತರಾಗಿರಬೇಕೆಂದರು.
ಸಮಾಜದೊಳಗಡೆ ತಾರತಮ್ಯದ ಬೀಜ ಬಿತ್ತಬಾರದು. ಶಿಕ್ಷಣ ಎಲ್ಲರಿಗೂ ತಲುಪಿದಾಗ ಒಂದಷ್ಟು ಸಮಸ್ಯೆಗಳು ಸಹಜವಾಗಿಯೇ ಪರಿಹಾರವಾಗುತ್ತದೆ. ಜಗತ್ತನ್ನೆ ಬದಲಿಸುವ ಶಕ್ತಿ ಶಿಕ್ಷಣಕ್ಕಿದೆ.
ಆಜಾದ್ ಪಾರ್ಕ್ ಕನ್ನಡ ಶಾಲೆ ರಾಷ್ಟ್ರಕ್ಕೆ ಸಂಬಂಧಪಟ್ಟ ಒಂದಿಲ್ಲೊಂದು ಕಾರ್ಯಕ್ರಮಗಳನ್ನು ವರ್ಷ ಪೂರ್ತಿ ಸಂಘಟಿಸುವ ಮೂಲಕ ಮಾದರಿಯಾಗಿದೆ ಎಂದರು.
ಉತ್ತಮರ ಸಹವಾಸ ಮಾಡಿ: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎನ್.ಎಸ್. ಜಗದೀಶ್ವರಾಚಾರ್ ಮಾತನಾಡಿ, ಮಕ್ಕಳು ಒಳ್ಳೆಯ ಸಹವಾಸದಲ್ಲಿ ಬೆಳೆಯಬೇಕೆಂದರು.  ಶಿಕ್ಷಕಿಯರಾದ ಸುನಂದಾ ಮತ್ತು ವಸಂತ ಲಕ್ಷ್ಮಮ್ಮ, ಲೋಕನಾಥ ಅರಸ ವೇದಿಕೆಯಲ್ಲಿದ್ದರು. ಮುಖ್ಯ ಶಿಕ್ಷಕ ಎಸ್.ಈ. ಲೋಕೇಶ್ವರಾಚಾರ್ ಸ್ವಾಗತಿಸಿ, ವಂದಿಸಿದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.