ಚಿಕ್ಕಮಗಳೂರು

ಬರಪೀಡಿತ ಪಟ್ಟಿಗೆ ಕಡೂರು ತಾ. ಸೇರ್ಪಡೆ: ದತ್ತ

Published On :

ಕಡೂರು: ಇಂದಿನ ಪೀಳಿಗೆಗೆ ದಾರ್ಶನಿಕರಾದ ಕನಕರ ಸಂದೇಶವು ಮಾರ್ಗದರ್ಶಕವಾದಲ್ಲಿ ಉತ್ತಮ ಬದುಕು ಕಾಣಲು ಸಾದ್ಯ ಎಂದು ಶಾಸಕ ವೈ.ಎಸ್.ವಿ.ದತ್ತ ಹೇಳಿದರು.
ಕಡೂರು ಪಟ್ಟಣದ ಸಂಗೊಳ್ಳಿ ರಾಯಣ್ಣ ವೇದಿಕೆಯಲ್ಲಿ ತಾಲೂಕು ಕುರುಬ ಸಮಾಜ ಮತ್ತು ತಾಲೂಕು ಕುರುಬ ನೌಕರರ ಸಂಘದಿಂದ ಏರ್ಪಡಿಸಿದ್ದ ಕನಕ ಜಯಂತಿ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂತ ಶ್ರೇಷ್ಠರಾದ ಕನಕದಾಸರು ಸಮಾಜದ ಅಂಕು ಡೊಂಕುಗಳು, ಸಮಾಜದ ಅನಿಷ್ಟ ಪದ್ದತಿಗಳ ವಿರುದ್ಧ ಹೋರಾಡಿದರು ಎಂದರು.
ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಮೂರನೇ ದೊಡ್ಡ ಸಮುದಾಯವಾದ ಕುರುಬ ಜನಾಂಗದ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಬೇಕು ಎಂದು ಅಪೇಕ್ಷೆಪಟ್ಟವರಲ್ಲಿ ನಾನೂ ಒಬ್ಬ. ಕಡೂರು ಪಟ್ಟಣದಲ್ಲಿ ಕನಕ ಭವನ ನಿರ್ಮಾಣಕ್ಕೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಹೇಳಿದರು.
ಬರಪೀಡಿತ ತಾಲೂಕು:  ಚಿಕ್ಕಮಗಳೂರಿನ ಸಭೆಯಲ್ಲಿ ಸತತವಾಗಿ ಕಡೂರು ತಾಲೂಕು ಬರಗಾಲಕ್ಕೆ ತುತ್ತಾಗುತ್ತಲೇ ಬರುತ್ತಿದ್ದು ಈ ಭಾರಿ ಅಧಿಕಾರಿಗಳ ಮಾಹಿತಿ ವ್ಯತ್ಯಾಸದಿಂದಾಗಿ ಕಡೂರು ತಾಲೂಕು ಬರಗಾಲದ ಪಟ್ಟಿಯಿಂದ ಬಿಟ್ಟು ಹೋಗಿರುವುದನ್ನು ಜಿಲ್ಲಾ ಸಭೆಯಲ್ಲಿ ಗಮನಕ್ಕೆ ತರಲಾಗಿದೆ.  ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಆದೇಶ ಬಂದಿದ್ದು ಕಡೂರು ತಾಲೂಕನ್ನು ಬರಗಾಲ ಪೀಡಿತ ಪ್ರದೇಶದ ಪಟ್ಟಿಗೆ ಸೇರ್ಪಡೆಗೊಳಿಸುವಂತೆ ಸರ್ಕಾರವು ಸೂಚಿಸಿದೆ. ಇನ್ನೆರಡು ದಿನದಲ್ಲಿ ಈ ಆದೇಶ ಹೊರ ಬೀಳಲಿದೆ ಎಂದು ಅವರು ಹೇಳಿದರು.
 ಮಾಜಿ ಶಾಸಕ ಡಾ ವೈ.ಸಿ.ವಿಶ್ವನಾಥ್ ಮಾತನಾಡಿ, ಕನಕದಾಸರು ಆದರ್ಶ ಪುರುಷರಾಗಿದ್ದು ಸಮಾಜದ ದಾರ್ಶನಿಕರು ಯಾವುದೇ ಒಂದು ಜಾತಿಗೆ ಸೀಮೀತರಾಗಬಾರದು. ಸರ್ವ ಜನಾಂಗದವರು ಸೇರಿ ಎಲ್ಲ ದಾರ್ಶನಿಕರ ಜಯಂತಿಗಳನ್ನು ಆಚರಿಸಿದರೆ ಮಾತ್ರ ಸಮಾನತೆ ಕಾಣಲು ಸಾಧ್ಯ ಎಂದರು.  ಮಾಜಿ ಜಿ.ಪ.ಅಧ್ಯಕ್ಷ ಕೆ.ಎಂ.ಕೆಂಪರಾಜು ಮಾತನಾಡಿ, ಮಹಾಪುರುಷರು ನಾಡಿಗೆ ನೀಡಿರುವ ಕೊಡುಗೆ ಸ್ಮರಿಸಿ ಆಚರಿಸುವುದರಿಂದ ಯಾವುದೇ ಸಮಾಜ ಶ್ರೇಷ್ಠತೆ ಕಾಣಲು ಸಾಧ್ಯ ಎಂದರು.
ಧಾರವಾಡ ಜಿಲ್ಲೆಯ ಗುಡಿಗೇರಿಯ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಪಂಚಾಕ್ಷರಯ್ಯ ಉಪನ್ಯಾಸ ನೀಡಿದರು.  ಸಮಾರಂಭಕ್ಕೂ ಮುನ್ನ ಬೆಳಿಗ್ಗೆ ಕನಕ ವೃತ್ತದಿಂದ ಕನಕದಾಸರು ಸೇರಿದಂತೆ ಅನೇಕ ದಾರ್ಶನಿಕರ ಸ್ತಬ್ಧ ಚಿತ್ರಗಳ ಮೆರವಣಿಗೆಯು ಪ್ರಮುಖ ಬೀದಿಗಳಲ್ಲಿ ಸಾಗುವ ಮೂಲಕ ಜಯಂತಿಯಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.