ಚಿಕ್ಕಮಗಳೂರು

'ಸಂಪತ್ತಿನ ಒಂದು ಭಾಗ ಶಿಕ್ಷಣಕ್ಕೆ ಬಳಸಿ'

Published On :

ಕ.ಪ್ರ.ವಾರ್ತೆ, ಚಿಕ್ಕಮಗಳೂರು, ನ. 22
ಗಳಿಸಿದ ಸಂಪತ್ತಿನ ಒಂದು ಭಾಗವನ್ನು ಶಿಕ್ಷಣ ಪ್ರಸಾರಕ್ಕಾಗಿ ವಿನಿಯೋಗಿಸಬೇಕೆಂದು ಹಿರಿಯ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಎಂ. ಮಹಾದೇವಯ್ಯ ಕರೆ ನೀಡಿದ್ದಾರೆ.
ಬಂಟರ ಯಾನೆ ನಾಡವರ ಸಂಘ ನಗರ ಹೊರವಲಯದಲ್ಲಿರುವ ಬಂಟರ ಸಮುದಾಯ ಭವನದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ವಿದ್ಯಾರ್ಥಿವೇತನ ವಿತರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಜನೆಗೆ ನೆರವು ನೀಡುವುದು ಶ್ರೇಷ್ಠ ಕಾರ್ಯ. ಸಂಪಾದನೆಯ ಒಂದು ಭಾಗವನ್ನು ಶಿಕ್ಷಣಕ್ಕೆ ನೀಡುವ ಪರಿಪಾಠ ಉತ್ತಮ. ಬಂಟರ ಸಮುದಾಯ ಅಂತಾರಾಷ್ಟ್ರೀಯ ಮಟ್ಟದಲ್ಲೂ ವ್ಯಾಪಾರ ವ್ಯವಹಾರಗಳಲ್ಲಿ ಹೆಸರು ಮಾಡಿದೆ, ಆದರೆ, ಕಾನೂನು ಅಧ್ಯಯನದಲ್ಲೂ ಆಸಕ್ತಿ ತೋರಬೇಕಿದೆ ಎಂದರು.
ಶಿಕ್ಷಣಕ್ಕೆ ನೆರವಾಗಿ: ಬಂಟರ ಸಂಘದ ಅಧ್ಯಕ್ಷ ಬಿ. ಕರುಣಾಕರ ಹೆಗ್ಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿ ವೇತನವನ್ನು ಶೈಕ್ಷಣಿಕ ಕಾರ್ಯಕ್ಕೆ ವಿನಿಯೋಗಿಸಿ. ಸ್ವಾವಲಂಬಿಗಳಾದ ಮೇಲೆ ಸಾಧ್ಯವಾದಷ್ಟು ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು ನೀಡುವ ಸಂಕಲ್ಪ ಮಾಡಿ. ವಿದ್ಯೆಯ ಜೊತೆಗೆ ವಿನಯ, ಒಳ್ಳೆಯ ನಡತೆ ಇರಲಿ. ಎಲ್ಲರೊಡನೆ ಬೆರೆತುಬಾಳಿ. ಆಮಿಷಕ್ಕೆ ಒಳಗಾಗದೆ ಕೆಟ್ಟ ಹವ್ಯಾಸಗಳಿಂದ ದೂರವಾಗಿ ಬದುಕಿ. ತಂದೆ-ತಾಯಿ, ಗುರು-ಹಿರಿಯರನ್ನು ಸದಾ ಗೌರವಿಸಿ ಎಂದು ಕಿವಿಮಾತು ಹೇಳಿದರು.
ಯುವ ಪ್ರತಿಭೆಗಳಾದ ಯುಪಿಎಸ್ಸಿಗೆ ಆಯ್ಕೆಯಾಗಿರುವ ಸಚಿನ್ ಕೆ.ಟಿ. ಶೆಟ್ಟಿ, ನೃತ್ಯ ಕಲಾವಿದೆ ರಕ್ಷಿತಾ ವೀಣಾಶೆಟ್ಟಿ, ವಿಶ್ವ ಕರಾಟೆ ಪಟು ದೇವಿಪ್ರಕಾಶ್ ಭಂಡಾರಿ ಅವರನ್ನು ಬಂಟರ ಸಂಘದಿಂದ ಸನ್ಮಾನಿಸಲಾಯಿತು.
ಉಪಾಧ್ಯಕ್ಷ ಶ್ರೀಕಾಂತಶೆಟ್ಟಿ, ಸಹ ಕಾರ್ಯದರ್ಶಿ ಜೀವನ್ ಶೆಟ್ಟಿ, ಮಾಜಿ ಅಧ್ಯಕ್ಷ ಆನಂದಕುಮಾರ ಶೆಟ್ಟಿ ಮಾತನಾಡಿದರು. ಅಧ್ಯಕ್ಷ ಕರುಣಾಕರ ಹೆಗ್ಡೆ ಸ್ವಾಗತಿಸಿದರು, ಖಜಾಂಚಿ ಸುರೇಂದ್ರ ಶೆಟ್ಟಿ ವಂದಿಸಿದರು. ನಿರ್ದೇಶಕ ಬಿ.ಎಂ. ವಿಶ್ವನಾಥ ರೈ ಕಾರ್ಯಕ್ರಮ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.