ಗ್ರಂಥಾಲಯ ಮಹತ್ವ ಕುರಿತು ಅರಿವು ಮೂಡಿಸಿ: ಅಶೋಕ್
ಬೀರೂರು: ಅಧ್ಯಯನದಿಂದ ಮಾತ್ರ ವ್ಯಕ್ತಿ ಸಮಾಜದಲ್ಲಿ ಹೆಚ್ಚಿನ ಗೌರವ ಸಂಪಾದಿಸಲು ಸಾಧ್ಯ. ಇದನ್ನರಿತು ಗ್ರಂಥಾಲಯಗಳ ಸ್ಥಾಪನೆಯ ಮಹತ್ವ ಜನರಿಗೆ ಅರಿವು ಮಾಡಿಕೊಡಬೇಕು ಎಂದು ಜಿಲ್ಲಾ ಗ್ರಂಥಾಲಯಾಧಿಕಾರಿ ಅಶೋಕ್ ತಿಳಿಸಿದರು.
ಬೀರೂರಿನ ಶಾಖಾ ಗ್ರಾಂಥಾಲಯದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಉದ್ಘಾಟಿಸಿ ಮಾತನಾಡಿದರು. ದೃಶ್ಯ ಮಾಧ್ಯಮಗಳ ಆಗಮನದಿಂದ ಓದುವ ಹವ್ಯಾಸ ಕಡಿಮೆಯಾಗುತ್ತಿದ್ದರೂ ಉತ್ತಮ ಸಾಹಿತ್ಯ ಕೃತಿಗಳಿಗೆ ಅಸಂಖ್ಯಾತ ಓದುಗರು ಜೀವ ತುಂಬುತ್ತಿದ್ದಾರೆ. ಸಾಕ್ಷಿ ಎಂಬಂತೆ ವರ್ಷದಿಂದ ವರ್ಷಕ್ಕೆ ದಿನಪತ್ರಿಕೆ ಹಾಗೂ ಪುಸ್ತಕಗಳ ಪ್ರಕಟಣೆ ಸಂಖ್ಯೆ ಹೆಚ್ಚಾಗುತ್ತಲೇ ಇದೆ. 66 ಸಾವಿರಕ್ಕೂ ಹೆಚ್ಚಿನ ನಿಯತಕಾಲಿಕೆ ಹಾಗು ಪುಸ್ತಕಗಳು ಬಿಡುಗಡೆಯಾಗುತ್ತಿವೆ. ಸಾಹಿತ್ಯದ ಓದು ಮನಸ್ಸಿನಾಳಕ್ಕೆ ಪ್ರವೇಶಿಸುತ್ತದೆ. ಗ್ರಂಥಾಲಯ ಬೆಳವಣಿಗೆಗೆ ಸಹಕಾರ ಅಗತ್ಯ ಎಂದರು.
ಅಭಿಮಾನ ಮೂಡಿಸಿ: ಲಲಿತಮ್ಮ ಶ್ರೀಕಂಠಪ್ಪ ಮಾತನಾಡಿ, ಮಕ್ಕಳಿಗೆ ಮಾತೃ ಭಾಷೆ ಬಗೆಗೆ ಅಭಿಮಾನ ಮೂಡಿಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯದ ತಿರುಳಿನ ಬಗ್ಗೆ ತಿಳಿಸುವ ಪ್ರಯತ್ನ ಹೆಚ್ಚಾಗಿ ಆಗಬೇಕಿದೆ. ಸಣ್ಣ ಕಥೆ ಪುಸ್ತಕಗಳ ಮೂಲಕ ಸಾಹಿತ್ಯದ ಸಾರವನ್ನು ಮಕ್ಕಳಿಗೆ ತಲುಪಿಸುವಂತಾಗಬೇಕು ಎಂದರು.
ನಿವೃತ್ತ ಉಪನ್ಯಾಸಕ ಕರಿಬಸಪ್ಪ ಮಾತನಾಡಿ, ಓದು ಒಂದು ಮುಖವಾದರೆ ಜೀವನ ಇನ್ನೊಂದು ಮುಖ ಜೀವನವನ್ನು ಯಶಸ್ವಿಯಾಗಿ ನಿಭಾಯಿಸಲು ಮಕ್ಕಳು ವಿನಯಶೀಲತೆ ಬೆಳೆಸಿಕೊಂಡು ಎಲ್ಲ ರಂಗಗಳಲ್ಲಿ ಸಾಧನೆ ಮಾಡಬೇಕು. ಗ್ರಂಥಾಲಯ ಅಳಿಸಲಾರದ ದೀಪ ದೊಡ್ಡ ಶಕ್ತಿ. ಅದನ್ನು ಸದ್ಬಳಕೆ ಮಾಡಿಕೊಳ್ಳಿ ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಪ್ರಕಾಶ ಬಾವಿಮನೆ, ಸದಸ್ಯ ಎಸ್.ಎಸ್. ದೇವರಾಜ್, ಸೋಮೇಶೇಖರ್, ಚೆಲುವರಾಜ್, ಬೀರೂರು ಗ್ರಂಥಾಲಯ ನಿರ್ವಾಹಕಿ ಭಾನುಮತಿ ಮಾತನಾಡಿದರು. ಕರಣ್ ಪ್ರಾರ್ಥಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

