ಚಿಕ್ಕಮಗಳೂರು

'ಜೀವಾಣು ಹೆಚ್ಚಿದಂತೆ ಮಣ್ಣಿನ ಶಕ್ತಿ ವೃದ್ಧಿ'

Published On :

ಬಾಳೆಹೊನ್ನೂರು: ಮಣ್ಣಿನಲ್ಲಿ ಜೀವಾಣು ಚಟುವಟಿಕೆ ಹೆಚ್ಚಾದಂತೆ ಭೂಮಿಯ ಫಲವತ್ತತೆ ಹೆಚ್ಚುತ್ತದೆ ಎಂದು ನರಸಿಂಹರಾಜಪುರ ಕೃಷಿ ಇಲಾಖೆಯ ಸಹಾಯಕ ಕೃಷಿ ಅಧಿಕಾರಿ ಶಿವಮೂರ್ತಿ ಹೇಳಿದ್ದಾರೆ.
ಇಲ್ಲಿನ ಮಾರಿಗುಡಿಯ ಕೃಷಿಕ ಯಜ್ಞ ಪುರುಷಭಟ್ ಅವರ ಸಸ್ಯ ಕ್ಷೇತ್ರದಲ್ಲಿ ಕೃಷಿ ಇಲಾಖೆ ಹಾಗೂ ಜೇಸಿಐ ಬಾಳೆಹೊನ್ನೂರು ಕ್ಲಾಸಿಕ್ ಶನಿವಾರ ಹಮ್ಮಿಕೊಂಡಿದ್ದ ಎರೆಹುಳು ಗೊಬ್ಬರ ತಯಾರಿಕೆ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜೈವಿಕ ವಸ್ತು ಸೇವಿಸುವ ಸಮಯದಲ್ಲಿ ಮಣ್ಣಿನ ಪದರಗಳ ಮಿಶ್ರಣವಾಗುತ್ತದೆ. ಸಾವಯವ ವಸ್ತುಗಳನ್ನು ಜೀರ್ಣಿಸಿಕೊಂಡು ಹೊರಹಾಕುವ ತ್ಯಾಜ್ಯದಲ್ಲಿ ಅಧಿಕ ಪೋಷಕಾಂಶಗಳು ಪೈರಿಗೆ ದೊರಕುತ್ತದೆ. ಎರೆಹುಳುವಿನಲ್ಲಿ ತಯಾರದ ಮಣ್ಣಿನಲ್ಲಿ ಗೊಬ್ಬರ ಬಳಸದ ಮಣ್ಣಿಗಿಂತ ಇಮ್ಮಡಿಯಷ್ಟು ರಂಜಕ ಹಾಗೂ 10 ಪಟ್ಟು ಪೊಟ್ಯಾಷ್ ಬೆಳೆಗೆ ಸಿಗುತ್ತದೆ ಎಂದರು.
ಈ ಗೊಬ್ಬರ ಬಳಸುವುದರಿಂದ ಕೃಷಿ ಉತ್ಪಾದನೆಯ ಖರ್ಚು ಕಡಿಮೆಯಾಗಿ ಪರಿಸರದ ಆರೋಗ್ಯ ರಕ್ಷಿಸುವುದಲ್ಲದೆ ಪರಿಸರದ ಮಾಲಿನ್ಯ ತಡೆಗಟ್ಟಿ ಮಾನವಕುಲ ಹಾಗೂ ಪ್ರಾಣಿ ವರ್ಗಕ್ಕೆ ಆಗುವ ಅನಾಹುತ ತಪ್ಪಿಸುತ್ತದೆ. ಅಂರ್ತಜಲದ ಮಟ್ಟ ಹೆಚ್ಚಿಸುತ್ತದೆ ಎಂದು ಹೇಳಿದರು.
ಈ ಪದ್ಧತಿಯಲ್ಲಿ ಬೆಳೆದ ಧಾನ್ಯ, ತರಕಾರಿ ಹಾಗೂ ಹಣ್ಣುಗಳಿಗೆ ವಿಶೇಷವಾದ ಬೆಲೆ ದೊರೆಯುವುದು ಹಾಗೂ ಆಹಾರ ವಸ್ತುಗಳು ರುಚಿಯಾಗಿರುತ್ತದೆ ಎಂದು ತಿಳಿಸಿದರು.
ಜೇಸಿಐ ಅಧ್ಯಕ್ಷ ಮಂಜುನಾಥ್ ತುಪ್ಪೂರು ಮಾತನಾಡಿ, ರಾಸಾಯನಿಕ ಗೊಬ್ಬರ ಬಳಕೆಯಿಂದ ಭೂಮಿ ಫಲವತ್ತತೆ ಕಳೆದುಕೊಂಡು ಬರಡಾಗುವ ಈ ದಿನಗಳಲ್ಲಿ ಎರೆಹುಳು ಗೊಬ್ಬರ ತಯಾರಿಸಲು ಕೃಷಿ ಇಲಾಖೆ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ. ರೈತರಿಗೆ ಕೃಷಿ ಪಾಠಶಾಲೆಯ ಮುಖಾಂತರ ಹೆಚ್ಚು ಹೆಚ್ಚು ಶಿಬಿರ ನಡೆಸಿ ಮಾಹಿತಿ ನೀಡಬೇಕೆಂದು ತಿಳಿಸಿದರು.
ಕೃಷಿಕ ಯಜ್ಞಪುರುಷಭಟ್, ಜೇಸಿ ಪೂರ್ವಾಧ್ಯಕ್ಷ ಚೈತನ್ಯ ವೆಂಕಿ, ಸುರೇಂದ್ರ ಮಾಸ್ಟರ್, ಎಚ್. ಗೋಪಾಲ್, ನಿಯೋಜಿತ ಅಧ್ಯಕ್ಷ ಜಗದೀಶ್, ಸದಸ್ಯರಾದ ಕೆ. ಪ್ರಶಾಂತ್‌ಕುಮಾರ್, ಮನುಕುಮಾರ್ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.