ಆರ್ಥಿಕ ಸ್ವಾವಲಂಬನೆ ಹೆಣ್ಣಿನ ಸಬಲೀಕರಣವಲ್ಲ
ಚಿಕ್ಕಮಗಳೂರು: ಶೃಂಗಾರದ ವರ್ಣನೆಗಿಂತ ಹೆಚ್ಚಾಗಿ ಮನುಷ್ಯತ್ವದ ನೆಲೆಯಲ್ಲಿ ಹೆಣ್ಣನ್ನು ಕಾಣಬೇಕು ಎಂದು ಚಲನಚಿತ್ರ ನಟಿ ವಿನಯಾ ಪ್ರಸಾದ್ ಹೇಳಿದ್ದಾರೆ.
ನಗರದ ಕುವೆಂಪು ಕಲಾಮಂದಿರದಲ್ಲಿ ಮೆಘಾ ವಿಜ್ಹನ್ ಮೀಡಿಯಾ ಸರ್ವೀಸಸ್ ಭಾನುವಾರ ಸಂಜೆ ಆಯೋಜಿಸಿದ್ದ “ÈÚßÕ×Û ಸಬಲೀಕರಣದ ಸಖಿಯರ ಸಖತ್ ಮಾತು OÛ¾Úß%OÚÃÈÚß’¥ÚÆÇ ಮಾತನಾಡಿದ ಅವರು, ಹೆಣ್ಣನ್ನು ಅನುಕಂಪದ ಅಲೆಗಿಂತ ಹೆಚ್ಚಾಗಿ ಪೂರ್ಣತೆಯ ದೃಷ್ಟಿಯಿಂದ ನೋಡಬೇಕು ಎಂದರು.
ಪ್ರತಿಭೆಗೆ ಬೆಲೆಗಷ್ಟೇ ಸೀಮಿತವಾಗದಿರಲಿ: ಮಹಿಳೆಯರ ಸಬಲೀಕರಣ ಎಂದರೆ ಬರೀ ಆರ್ಥಿಕ ಸ್ವಾವಲಂಬನೆ, ಉದ್ಯೋಗಕ್ಕೆ ಸೇರುವುದು, ಅಷ್ಟೇ ಅಲ್ಲ. ಅವಳ ಪ್ರತಿಭೆಗೆ ಬೆಲೆಗಷ್ಟೇ ಸೀಮಿತವೂ ಅಲ್ಲ.
ಸರಿಯಾದ ರೀತಿಯಲ್ಲಿ ವೈವಾಹಿಕ ಜೀವನಕ್ಕೆ ಹೋಗುವುದು ಆ ಮೂಲಕ ಪರಿಪೂರ್ಣತೆ ಸಾಧಿಸುವುದು ಮುಖ್ಯ. ವೈವಾಹಿಕತೆ ಹೆಣ್ಣಿಗೆ ಅನಿವಾರ್ಯ ಅಲ್ಲದಿದ್ದರೂ ಅಗತ್ಯ. ಮಹಿಳಾ ಸಬಲೀಕರಣದ ಪ್ರಧಾನ ಅಂಶ ತಾಯ್ತನದಲ್ಲಿದೆ ಎಂದು ಹೇಳಿದರು.
ಜನಪ್ರಿಯ ಕಾರ್ಯಕ್ರಮ: ಮಹಿಳೆಯರಿರುವ ತನಕ ಮಹಿಳಾ ಸಬಲೀಕರಣ ಅಗತ್ಯ ಎಂದು ಪ್ರತಿಪಾದಿಸಿದ ವಿನಯಾ ಪ್ರಸಾದ್, ಸಖಿಯರ ಸಖತ್ ಮಾತು ಜನಪ್ರಿಯ ಕಾರ್ಯಕ್ರಮ 50ನೇ ಕಂತನ್ನು ಇಲ್ಲಿ ಚಿತ್ರೀಕರಿಸುತ್ತಿರುವುದು ಅರ್ಥ ಪೂರ್ಣವಾಗಿದೆ ಎಂದ ಅವರು, ದಿನೇ ದಿನೇ ಜವಾಬ್ದಾರಿಯೂ ಹೆಚ್ಚಾಗುತ್ತಿದ್ದು, ಮಹಿಳೆಯರು ಸಾಮಾಜಿಕ, ಕೌಟುಂಬಿಕ, ಶೈಕ್ಷಣಿಕ ಸೇರಿದಂತೆ ವಿವಿಧ ಆಯಾಮಗಳ ಸಮಸ್ಯೆಗಳನ್ನು ಇಲ್ಲಿ ಚರ್ಚಿಸುವ ಮೂಲಕ ಸಮಾಜ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಸಹಕಾರಿಯಾಗಿದೆ. ಮಹಿಳಾ ಸಬಲೀಕರಣಕ್ಕೆ ಈ ಕಾರ್ಯಕ್ರಮ ದೊಡ್ಡ ಹೆಜ್ಜೆ ಸುವರ್ಣ ಹೆಜ್ಜೆ ಎಂದು ತಿಳಿಸಿದರು.
ಸಂಸದ ಜಯಪ್ರಕಾಶ ಹೆಗ್ಡೆ ಮಾತನಾಡಿ, ಹೆಣ್ಣು ಮಕ್ಕಳ ತಾಳ್ಮೆ, ಸಹನೆಯಿಂದ ಕುಟುಂಬದ ಸುಸ್ಥಿರತೆ ಉಳಿಯಲು ಸಾಧ್ಯವಾಗಿದೆ ಎಂದರು.
ಶಾಸಕ ಸಿ.ಟಿ. ರವಿ ಮಾತನಾಡಿ, ಸಮಾಜಕ್ಕೆ ಶಿಕ್ಷಣ ಕೊಡುವಲ್ಲಿ ಸಖಿಯರ ಮಾತು ನೆರವಾಗಬೇಕು. ಮನೆಯೊಂದು ಮೂರು ಬಾಗಿಲು ಆಗಬಾರದು ಎಂದರು.
ಆಶಾಕಿರಣದ ಅಧ್ಯಕ್ಷ ಡಾ. ಜೆ.ಪಿ. ಕೃಷ್ಣೇಗೌಡ ಮಾತನಾಡಿ, ಮಹಿಳಾ ಸಬಲೀಕರಣಕ್ಕೆ ಸಹಕರಿಸುವಂತೆ ರೈತರ ಏಳಿಗೆ ಕುರಿತಂತೆಯೂ ಕಾರ್ಯಕ್ರಮ ನಡೆಸಲೆಂದು ಹಾರೈಸಿದರು.
ಕಲ್ಕಟ್ಟೆ ಪುಸ್ತಕಮನೆಯ ನಾಗರಾಜರಾವ್ ಕಾರ್ಯಕ್ರಮ ನಿರೂಪಿಸಿದರು. ಮೆಘಾ ವಿಜ್ಹನ್ ಪಾಲುದಾರರಾದ ಪುಷ್ಪಲತಾ ಮತ್ತು ರಮೇಶ್ ನಿರ್ದೇಶಿಸಿದರು. ಜಿ.ಪಂ. ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ, ಎಐಟಿ ಪ್ರಾಂಶುಪಾಲ ಡಾ. ಸುಬ್ರಾಯ, ಎಂಇಎಸ್ ಅಧ್ಯಕ್ಷ ಅನಂತರಾಮಯ್ಯ, ಆನಂದಕುಮಾರಶೆಟ್ಟಿ, ಗಿರಿಧರ ಯತೀಶ್, ಯೋಗೀಶಕುಮಾರ್ ಇದ್ದರು.
ವಿಕಲಚೇತನ ಪ್ರತಿಭೆ ಶೀಲಾ ಅವರಿಗೆ ಇದೇ ಸಂದರ್ಭದಲ್ಲಿ 8 ಸಾವಿರ ನೆರವು ನೀಡಲಾಯಿತು. ರೇಖಾ ನಾಗರಾಜರಾವ್, ಮಂಜುಳಾ, ಹೇಮಲತಾ, ಮಹೇಶ್ವರಿ, ನಾಗರತ್ನ, ವಿದ್ಯಾರ್ಥಿನೀಯರಾದ ತನ್ಮಯಿ, ಅನೂಷಾ, ನಮನಾ, ವೈಷ್ಣವಿ ಸೇರಿದಂತೆ 16 ಹೆಣ್ಣು ಮಕ್ಕಳು ಅಭಿಪ್ರಾಯ ಮಂಡಿಸಿದರು. ಸುವರ್ಣ ಸಂಚಿಕೆಯ ಹಿನ್ನೆಲೆಯಲ್ಲಿ ವಿನಯಾಪ್ರಸಾದ್ ನಗರದ ರೇಖಾ ಪ್ರೇಮ್‌ಕುಮಾರ್, ಸುಮಿತ್ರಾ ಶಾಸ್ತ್ರಿ, ಆಶಾ ಯೋಗೀಶ್, ಶಶಿಕಲಾ ಶೆಟ್ಟಿ, ಪುಷ್ಪಲತಾ ಸಂವಾದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

