ಕೈ ಕೊಡುತ್ತಿರುವ ಸಿಗ್ನಲ್ ದೀಪ
ಚಿಕ್ಕಮಗಳೂರು ನಗರದಲ್ಲಿ ಇತ್ತೀಚೆಗೆ ವಾಹನಗಳ ಸಂಖ್ಯೆ ಹೆಚ್ಚಾಗುತ್ತಲೇ ಹೋಗುತ್ತಿದೆ. ಆದರೆ, ಟ್ರಾಫಿಕ್ ವ್ಯವಸ್ಥೆ ಮಾತ್ರ ಸರಿ ಹೋಗುತ್ತಿಲ್ಲ.
ಈ ವಿಚಾರದಲ್ಲಿ ಟ್ರಾಫಿಕ್ ಪೊಲೀಸರನ್ನು ದೂಷಣೆ ಮಾಡುವುದರಲ್ಲಿ ಅರ್ಥವಿಲ್ಲ. ಹಲವು ಮಂದಿ ಟ್ರಾಫಿಕ್ ರೂಲ್ ಬ್ರೇಕ್ ಮಾಡಿ ಹೋಗುವುದನ್ನು ಕಾಣುತ್ತಿದ್ದೇವೆ.
ಚಿಕ್ಕಮಗಳೂರು ನಗರದಲ್ಲಿ ಕಳೆದ 6 ತಿಂಗಳ ಹಿಂದಿನ ಮಾತು. ಇಲ್ಲಿನ ಪ್ರಮುಖ ವೃತ್ತಗಳಲ್ಲಿ ಒಂದಾದ ಎನ್ಎಂಸಿ ಹಾಗೂ ಹನುಮಂತಪ್ಪ ವೃತ್ತಗಳಲ್ಲಿ ಸಿಗ್ನಲ್ ಲೈಟ್ಗಳು ಇರಲಿಲ್ಲ.
ಕೆಟ್ಟಿರುವ ಸಿಗ್ನಲ್ಗಳು: ರಾಜ್ಯದ ಟ್ರಾಫಿಕ್ ಮತ್ತು ರೋಡ್ ಸೇಪ್ಟಿ ಈ ಎರಡು ವೃತ್ತಗಳಿಗೆ ಸೋಲಾರ್ ಮತ್ತು ವಿದ್ಯುತ್ ಸಂಪರ್ಕದ ಸಿಗ್ನಲ್ ಲೈಟ್ಗಳನ್ನು ಅಳವಡಿಸಿದೆ. ಆದರೆ, ಇವುಗಳು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ಹಲವು ಬಾರಿ ಕೆಟ್ಟು ನಿಲ್ಲುತ್ತಿವೆ.
ಚಿಕ್ಕಮಗಳೂರಿನಲ್ಲಿ ಅದರಲ್ಲೂ ಮಳೆಗಾಲದಲ್ಲಿ ಸೋಲಾರ್ ಸಹಾಯದಿಂದ ಈ ಲೈಟ್ಗಳು ಕೆಲಸ ಮಾಡುವುದು ತೀರ ವಿರಳ.
ಇದೇ ವೇಳೆಯಲ್ಲಿ ವಿದ್ಯುತ್ ಕೈಕೊಟ್ಟರೆ ವಾಹನಗಳ ಚಾಲಕರಿಗೆ ಮಾತ್ರವಲ್ಲ ಟ್ರಾಫಿಕ್ ಪೊಲೀಸರಿಗೂ ಕಿರಿಕಿರಿಯಾಗಲಿದೆ.
ಪೊಲೀಸರಿಂದ ರಿಪೇರಿ: ಇಲ್ಲಿನ ಸಿಗ್ನಲ್ ಲೈಟ್ಗಳು ಆಗಾಗ ಕೈ ಕೊಡುತ್ತಿವೆ. ಇವುಗಳ ನಿರ್ವಹಣೆಯ ಜವಬ್ದಾರಿಯನ್ನು ಹೊತ್ತಿರುವ ಕಂಪನಿ ಮೈಸೂರಿನಲ್ಲಿದ್ದು, ಲೈಟ್ಗಳು ದುರಸ್ತಿಗೆ ಬಂದರೆ, ಸಂಬಂಧಪಟ್ಟವರು ಚಿಕ್ಕಮಗಳೂರಿಗೆ ಬಂದು ದುರಸ್ತಿ ಪಡಿಸುವವರೆಗೆ ಕಾಯಬೇಕು.
ಇದು, ಅನಿವಾರ್ಯವೂ ಸಹ ಆಗಿದೆ. ಅವರು ಬರುವವರೆಗೆ ಸಿಗ್ನಲ್ ಲೈಟ್ ಇದ್ದರೂ ಇಲ್ಲದಂತಾಗುತ್ತದೆ. ಆಗ ವೃತ್ತದಲ್ಲಿ ಕರ್ತವ್ಯ ನಿರ್ವಹಿಸುವ ಟ್ರಾಫಿಕ್ ಪೊಲೀಸರೇ ಅವುಗಳನ್ನು ರಿಪೇರಿ ಮಾಡಲು ಕೈ ಹಾಕಬೇಕಾಗಿದೆ.
ಸೋಮವಾರದಂದು ನಗರದ ಹನುಮಂತಪ್ಪ ವೃತ್ತದಲ್ಲಿರುವ ಸಿಗ್ನಲ್ ಲೈಟ್ಗಳು ಕೈಕೊಟ್ಟಿದ್ದರಿಂದ ಟ್ರಾಫಿಕ್ ಪೊಲೀಸರೇ ಅವುಗಳನ್ನು ದುರಸ್ತಿ ಪಡಿಸುವುದು ಕಂಡು ಬಂದಿತು.
ಮಾರ್ಕಿಂಗ್ ಇಲ್ಲ: ಸಿಗ್ನಲ್ ಲೈಟ್ ಅಳವಡಿಸಿ ಸುಮಾರು 6 ತಿಂಗಳು ಕಳೆದಿದೆ. ಆದರೂ ಸಿಗ್ನಲ್ ಲೈಟ್ ವ್ಯವಸ್ಥೆ ಸರಿಯಾಗಿಲ್ಲ. ಸಿಗ್ನಲ್ ಲೈಟ್ಗಳಿರುವ ವೃತ್ತಗಳಲ್ಲಿ ಮಾರ್ಕಿಂಗ್ ಮಾಡಬೇಕು. ಆದರೆ, ಈ ಕೆಲಸ ಈವರೆಗೆ ಆಗಿಲ್ಲ. ಅದುದರಿಂದ ವಾಹನಗಳು ವೃತ್ತಗಳಲ್ಲಿ ಬೇಕಾಬಿಟ್ಟಿ ನಿಲ್ಲುತ್ತಿವೆ.
ಈ ಹಿಂದೆ ರಸ್ತೆಯ ಮಧ್ಯ ಭಾಗದಲ್ಲಿ ಹಾಕಿದ್ದ ಮಾರ್ಕಿಂಗ್ ಹಾಳಾಗಿ ಹೋಗಿದೆ. ವೃತ್ತದಲ್ಲಿ ಪಾದಚಾರಿಗಳ ಸಂಚಾರಕ್ಕೆ ವಾಹನಗಳ ನಿಲುಗಡೆಗೆ ನಿಖರವಾದ ಮಾರ್ಕಿಂಗ್ ಇಲ್ಲದಂತಾಗಿದೆ. ಈ ಕೆಲಸದ ಜವಬ್ದಾರಿಯನ್ನು ಹೊತ್ತಿರುವ ಲೋಕೋಪಯೋಗಿ ಇಲಾಖೆ ತಮಗೆ ಸಂಬಂಧ ಇಲ್ಲದಂತೆ ನಡೆದುಕೊಳ್ಳುತ್ತಿದೆ. ನಗರದ ವೃತ್ತಗಳಲ್ಲಿ ಟ್ರಾಫಿಕ್ ವ್ಯವಸ್ಥೆ ಹಾದಗೆಡಲು ಇದು ಸಹ ಒಂದು ಕಾರಣವಾಗಿದೆ. ಒಂದೆಡೆ ಆಗಾಗ ಕೈಕೊಡುವ ಸಿಗ್ನಲ್ ಲೈಟ್ಗಳು, ಮತ್ತೊಂದೆಡೆ ವೃತ್ತಗಳಲ್ಲಿ ಮಾರ್ಕಿಂಗ್ ಇಲ್ಲದೆ ಟ್ರಾಫಿಕ್ ಪೊಲೀಸರಿಗೆ ಕೆಲಸ ನಿಭಾಯಿಸುವುದು ಕಷ್ಟವಾಗಿದೆ. ಅದುದರಿಂದ ಲೈಟ್ಗಳ ದುರಸ್ತಿ ಕಾರ್ಯವನ್ನು ಸ್ಥಳೀಯರಿಗೆ ವಹಿಸುವ ಹಾಗೂ ಮಾರ್ಕಿಂಗ್ ಮಾಡುವ ಕೆಲಸ ಜರೂರಾಗಿ ಆಗಬೇಕಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

