ಚಿಕ್ಕಮಗಳೂರು

ಸದೃಢ ಆರೋಗ್ಯ ದೇಶದ ಸದೃಢತೆಗೂ ಅಗತ್ಯ

Published On :

ಚಿಕ್ಕಮಗಳೂರು: ಸದೃಢವಾದ ದೇಹ ಮತ್ತು ಆರೋಗ್ಯ ದೇಶದ ಸದೃಢತೆಗೂ ಅಗತ್ಯ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ಹೇಳಿದ್ದಾರೆ.
ನಗರದ ಆಜಾದ್ ಪಾರ್ಕ್ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಭಾವೈಕ್ಯತಾ ಸಪ್ತಾಹದ ಮುಕ್ತಾಯ ಸಮಾರಂಭದಲ್ಲಿ ಮಂಗಳವಾರದಂದು ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಾನವಲೊಕದ ಪುಷ್ಪಗಳು ಮಕ್ಕಳು. ಮಕ್ಕಳು ವಿಕಾಸಗೊಳ್ಳಲು ಸೂಕ್ತ ವಾತಾವರಣ ಕಲ್ಪಿಸುವುದು ಸಮಾಜದ ಹೊಣೆಗಾರಿಕೆ ಎಂದು ಪ್ರತಿಪಾದಿಸಿದ ಮಾಜಿ ಪ್ರಧಾನಿ ದಿ. ಇಂದಿರಾಗಾಂಧಿ ಅವರ ಜನ್ಮದಿನದಂದು ಆರಂಭಗೊಂಡಿರುವ ಭಾವೈಕ್ಯತಾ ಸಪ್ತಾಹ ಇಂದಿನ ಅಗತ್ಯ ಎಂದರು.
ಶಿಕ್ಷಣ ಅತ್ಯಗತ್ಯ: ಮನೆಬಾಗಿಲಲ್ಲೆ ಶಾಲೆ ಸರ್ಕಾರ ತೆರೆದು ಎಲ್ಲ ಪೂರಕ ವ್ಯವಸ್ಥೆಗಳನ್ನು ಕಲ್ಪಿಸಿದೆ. ಮಕ್ಕಳು ಇದನ್ನು ಬಳಸಿಕೊಂಡು ಆರೋಗ್ಯ ಪೂರ್ಣವಾಗಿ ತಾವೂ ಬೆಳೆದು ದೇಶದ ಮುನ್ನಡೆಯಲ್ಲಿ ಪಾಲ್ಗೊಳ್ಳಬೇಕೆಂದು ಕರೆ ನೀಡಿದ ಗೋಪಾಲಕೃಷ್ಣ, 14 ವರ್ಷದೊಳಗಿನ ಎಲ್ಲ ಮಕ್ಕಳೂ ಶಾಲಾ ಶಿಕ್ಷಣ ಪಡೆಯುವುದು ಕಡ್ಡಾಯ. ಬಾಲ ಕಾರ್ಮಿಕರನ್ನು ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಕಂಡರೆ ಅವರ ಮನವೊಲಿಸಿ ಅಕ್ಷರಜ್ಞಾನ ನೀಡುವ ಮನೋಭಾವ ಬೆಳೆಸಿಕೊಂಡು ಆ ಮೂಲಕ ಉನ್ನತಿಗೆ ನೆರವಾಗಬಹುದೆಂದರು.
ಕೈಜೋಡಿಸಿ: ಸರ್ಕಾರ ಕಿಶೋರಿ ಯೋಜನೆಯನ್ನು 11 ರಿಂದ 18 ವಯೋವಾನದ ಹೆಣ್ಣುಮಕ್ಕಳಿಗೆ ರೂಪಿಸಿದ್ದು, ಒತ್ತಡದಲ್ಲಿ ಕಾರ್ಯನಿರ್ವಹಿಸುವ ಹಿನ್ನಲೆಯಲ್ಲಿ ಪೌಷ್ಠಿಕತೆ ನೀಡಲಾಗುತ್ತಿದೆ ಎಂದ ಗೋಪಾಲಕೃಷ್ಣ, ಭಾವೈಕ್ಯತೆ ಬೆಸೆಯಲು ಎಲ್ಲರೂ ಕೈಜೋಡಿಸಬೇಕೆಂದರು.
ನಗರಸಭಾ ಸದಸ್ಯ ಹಿರೇಮಗಳೂರು ಪುಟ್ಟಸ್ವಾಮಿ ಸಮಾರೋಪ ಭಾಷಣ ಮಾಡಿ ಕ್ರಿಯಾಶೀಲತೆ ಸಾಕಾರಾತ್ಮಕ ಚಿಂತನೆ, ವಿನಯವಂತಿಕೆ ರೂಢಿಸಿಕೊಂಡು ಸಮಾಜದ ಒಳಿತಿಗೆ ಕಾಣಿಕೆ ನೀಡಬೇಕು. ಉನ್ನತ ಗುರಿ ಇಟ್ಟುಕೊಂಡು ಆ ನಿಟ್ಟಿನಲ್ಲಿ ಪ್ರಾಮಾಣಿಕವಾದ ನಿರಂತರ ಪ್ರಯತ್ನ ಅಗತ್ಯ. ಪ್ರತಿಭಾವಂತರಿಗೆ ಎಲ್ಲೆಡೆ ಮಾನ್ಯತೆ ಇದೆ. ಓದು, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ ಸೇರಿದಂತೆ ಯಾವುದೇ ವಿಧದ ಪ್ರತಿಭೆ ಇದ್ದರೂ ಪ್ರೋತ್ಸಾಹಿಸುವ, ಕರೆದು ಕೆಲಸ ಕೊಡುವ ವ್ಯವಸ್ಥೆ ಸಮಾಜದಲ್ಲಿಂದು ಕಾಣುತ್ತಿದ್ದೇವೆ. ಶ್ರಮಪಟ್ಟು ಇರುವ ಪ್ರತಿಭೆಯನ್ನು ಸೂಕ್ತವಾಗಿ ಬಳಸಿಕೊಂಡು ದೇಶದ ಘನತೆ, ಗೌರವ ಎತ್ತಿಹಿಡಿಯಲು ಪಣ ತೊಡಬೇಕೆಂದರು.
ಭಾರತ ಸೇವಾದಳದ ವಿಭಾಗೀಯ ಸಂಘಟಕ ರವಿಶಂಕರ್ ಮಾತನಾಡಿ, ರಾಷ್ಟ್ರ ನಾಯಕರನ್ನು ಅವರ ಜೀವನ ಮೌಲ್ಯಗಳೊಂದಿಗೆ ಪರಿಚಯಿಸಿಕೊಂಡು ಆ ನಿಟ್ಟಿನಲ್ಲಿ ಮುನ್ನಡೆಯಲು ಶ್ರಮಿಸಬೇಕೆಂದರು.
ತಾಲೂಕು ಶಿಕ್ಷಕರ ಸಂಘದ ಉಪಾಧ್ಯಕ್ಷ ಕಾಳಯ್ಯ, ಪತ್ರಕರ್ತ ಪ್ರಭುಲಿಂಗಶಾಸ್ತ್ರಿ, ಸಿ.ಆರ್.ಪಿ. ಶಿವಣ್ಣನಾಯ್ಕ ಮಾತನಾಡಿದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.