ಚಿಕ್ಕಮಗಳೂರು

'ಚಿತ್ರಕಲೆಗೆ ಇತಿಮಿತಿಗಳಿಲ್ಲ'

Published On :

ಕ.ಪ್ರ.ವಾರ್ತೆ ಚಿಕ್ಕಮಗಳೂರು ನ.29
ಕನ್ನಡ ಹುಟ್ಟುವುದಕ್ಕೆ ಮೊದಲೇ ಚಿತ್ರಕಲೆ ಬಳಕೆಯಲ್ಲಿತ್ತು. ರೇಖೆಗಳ ಮತ್ತು ಸನ್ನೆಗಳ ಮೂಲಕ ಭಾವಕೋಶ ಪ್ರವಹಿಸುತಿತ್ತು.  ಅಕ್ಷರ ರೂಪ ಕೊಟ್ಟಿದ್ದು ಚಿತ್ರಕಲೆ ಎಂದು ಶಾಂತಿನಿಕೇತನ ಶಾಲೆಯ ಪ್ರಾಚಾರ್ಯ ವಿಶ್ವಕರ್ಮಾಚಾರ್ ಹೇಳಿದರು.
ಜಿಲ್ಲಾ ಕಸಾಪ ಹಾಗೂ ನೆಹರು ಯುವ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಗುರುವಾರ ನಗರದ ಸ್ಕೌಟ್ಸ್ ಮತ್ತು ಗೈಡ್ಸ್ ಭವನದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಸಾಹಿತ್ಯ ಮತ್ತು ಚಿತ್ರಕಲೆ ಎಂಬ ವಿಷಯ ಕುರಿತು ಮಾತನಾಡಿದರು.
ಪ್ರೋತ್ಸಾಹವಿಲ್ಲ: ಚಿತ್ರಕಲೆಗೆ ಇತಿಮಿತಿಗಳಿಲ್ಲ. ಚಿತ್ರಕಲೆ ಚತುಷ್ಪದ ಆಯಾಮವಿದೆ. ಸಾಹಿತ್ಯ ನಿಶ್ಚಲ ವಸ್ತುಗಳನ್ನು ಬಿಡಿ ಬಿಡಿಯಾಗಿ ವಿವರಿಸಿದರೆ ಚಿತ್ರಕಲೆ ಇಡಿಯಾಗಿ ಬಿಂಬಿಸುತ್ತದೆ. ಚಿತಕ್ರಲೆ ಆಸ್ವಾದಿಸಲು ಕಣ್ಣುಗಳು ಸಾಕು. ಸಾಹಿತ್ಯಕ್ಕೆ ಕವಿ ಹೃದಯ ಮತ್ತು ಭಾವನೆಗಳೆರಡು ಬೇಕು. ನಿಘಂಟಿನ ಆವಶ್ಯಕತೆ ಚಿತ್ರಕಲೆಯಲ್ಲಿ ಭಾವ- ಬಿರುಸುಗಳನ್ನೂ ಸ್ಥಳಾಂತರಿಸಲೂ ಸಾಧ್ಯವಿಲ್ಲ. ರಷ್ಯಾ ಕ್ರಾಂತಿಯಲ್ಲಿ ಚಿತ್ರಕಲೆಯಾದೆ ಪ್ರಧಾನ ಪಾತ್ರವಾಗಿತ್ತು. ದುರಂತವೆಂದರೆ ಚಿತ್ರಕಲೆಗೆ ಪ್ರೋತ್ಸಾಹವಿಲ್ಲದಿರುವುದು ಎಂದರು.
ಕಲೆಗೆ ಮಾನ್ಯತೆ ಸಿಕ್ಕಿಲ್ಲ: ಉಪನ್ಯಾಸರಾದ ಅಕ್ಕಿಕಾಳು ವೆಂಕಟೇಶ್ ಮಾತನಾಡಿ, ಕಲೆ ಮತ್ತು ಸಾಹಿತ್ಯ ಬೇರೆ ಅಲ್ಲ. ಕಲೆಗೆ ಮಾನ್ಯತೆ ಸಿಕ್ಕಿಲ್ಲ, ಶಿಲೆಯಲ್ಲಿ ಕಲೆ ಬಿಡಿಸಿದವರಿಗಿಂತ ಕೆತ್ತಿಸಿದವರ ಹೆಸರು ಪ್ರಧಾನವಾಗುತ್ತಿದೆ. ಸಾಹಿತಿಗಳಿಗೆ ಸಿಕ್ಕ ಸ್ಥಾನಮಾನ ಕಲೆಗಾರರಿಗೆ ಸಿಗುತ್ತಿಲ್ಲ. ಪ್ರಶಸ್ತಿಗಳಿಂದ ಕಲಾವಿದರನ್ನಾಗಲಿ, ಸಾಹಿತಿಗಳನ್ನಾಗಲಿ ಅಳೆಯಲು ಸಾಧ್ಯವಿಲ್ಲ ಎಂದು ತಿಳಿಸಿದರು. ನೈಟಿಂಗಲ್ ಕಾಲೇಜಿನ ಪ್ರಾಧ್ಯಾಪಕ ಡಾ. ವರುಣೆ ಕಾರ್ಯಕ್ರಮ ಉದ್ಘಾಟಿಸಿದರು. ನರಸಿಂಹರಾಜಪುರ ತಾಲೂಕು ಕಸಾಪ ಅಧ್ಯಕ್ಷ ಎಸ್.ಜಿ. ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಜಿಲ್ಲಾ ಅಧ್ಯಕ್ಷ ನಾ.ಸು. ಶಿವಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನೆಹರು ಯುವ ಕೇಂದ್ರದ ಮಂಜುನಾಥ್ ರಾವ್ ಸ್ವಾಗತಿಸಿದರು. ಗುರುವೇಶ್ ವಂದಿಸಿದರು. ದೇವಿಮೋಹನ್ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.