ಚಿಕ್ಕಮಗಳೂರು

ದೇಶದ ಸಂಸ್ಕೃತಿಗೆ ರಾಜ್ಯದ ಕೊಡುಗೆ ಅಪಾರ: ಕೇಶವ

Published On :

ಶೃಂಗೇರಿ: ಶಿಲಾಯುಗದಿಂದಲೂ ಕರ್ನಾಟಕಕ್ಕೆ ತನ್ನದೇ ಆದ ಸುದೀರ್ಘ ಇತಿಹಾಸವಿದೆ. ಕಲೆ, ಸಾಹಿತ್ಯ, ಸಂಸ್ಕೃತಿ ಪರಂಪರೆಗೆ ಕರ್ನಾಟಕದ ಕೊಡುಗೆ ಅಪಾರ ಎಂದು ಹಾಸ್ಯ ಕಲಾವಿದ ಕೇಶವ ಗುತ್ತಳಿಕೆ ತಿಳಿಸಿದರು.
ಅವರು ನೆಮ್ಮಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾವರಣದಲ್ಲಿ ಮೀನ ತಂಡ ಹಾಗೂ ಶಾಲಾಭಿವೃದ್ದಿ ಸಮೀತಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ 58 ನೇ ಕನ್ನಡ ರಾಜ್ಯೋತ್ಸವ ಹಾಗೂ ನಗೆ ನಗಾರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕನ್ನಡ ಭಾಷೆ, ಸಂಸ್ಕೃತಿ ಕನ್ನಡಿಗರಿಂದಲೇ ಕಡೆಗಣಿಸ್ಪಡುತ್ತಿದೆ ಎಂದರೆ ತಪ್ಪಾಗಲಾರದು. ಸರ್ಕಾರಿ ಶಾಲೆ, ಖಾಸಗಿ ಶಾಲೆಗಳೆಂಬ ಭೇದಭಾವ ಬೇಡ ಸರ್ಕಾರಿ ಶಾಲೆಗಳಳ್ಲಿ ಕಲಿತವರು ಅದೆಷ್ಟೋ ಮಂದಿ ದೇಶ ವಿದೇಶಗಳಲ್ಲಿ ಉನ್ನತ ಸ್ಥಾನಮಾನಗಳನ್ನು ಅಲಂಕರಿಸಿದ್ದಾರೆ. ಶಿವರಾಮ ಕಾರಂತರ, ಬೇಂದ್ರೆ, ಕುವೆಂಪು, ಗೋಕಾಕ್, ಅಡಿಗರಂತಹ ಸಾಹಿತಿಗಳು ಆಂಗ್ಲಭಾಷೆಯಲ್ಲಿ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡರೆ ವಿಶ್ವವಿಖ್ಯಾತ ಸಾಹಿತಿಗಳಾಗಿ ನೊಬೆಲ್ ಪ್ರಶಸ್ತಿಗೆ ಅರ್ಹರಾಗುತ್ತಿದ್ದರು. ಆದರೆ, ಅವರು ಕನ್ನಡ ಸಾಹಿತ್ಯವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತಮ್ಮ ಸೇವೆಯನ್ನು ಮುಡುಪಾಗಿಟ್ಟರು. ಅಂತಹ ಮಹನಿಯರು ಕಟ್ಟಿಬೆಳೆಸಿದ ಕನ್ನಡ ನಾಡು, ನುಡಿ ಸಂಸ್ಕೃತಿಯನ್ನು ಉಳಿಸಲು ನಾವು ಪಣತೊಡಬೇಕು ಎಂದರು.
ತಾಲೂಕು ಕಾರ್ಯಮಿರತ ಪತ್ರಕರ್ತರ ಸಂಘದ ಅಧ್ಯಕ್ಷ ನೆಮ್ಮಾರ್ ಅಬೂಬಕರ್, ಶಾಲಾಭಿವೃದ್ಧಿ ಸಮಿತಿ ಸದಸ್ಯ ಎನ್.ಎಂ. ಖಲೀಲ್ ನೆಮ್ಮಾರ್, ಗ್ರಾಪಂ ಎನ್.ಜೆ. ರವಿ ಮತ್ತಿತರರು ಉಪಸ್ಥಿತರಿದ್ದರು.
ರಾಜ್ಯೋತ್ಸವದ ಅಂಗವಾಗಿ ಅ.ನ.ಶೃ ಹಾಸ್ಯಕಲಾಬಳಗದ ವತಿಯಿಂದ  ನಗೆ- ನಗಾರಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.