ಚಿಕ್ಕಮಗಳೂರು

ಮತದಾನದಲ್ಲಿ ಜಾತಿಭೇದಕ್ಕೆ ಆಸ್ಪದ ಬೇಡ: ಶಿವಕುಮಾರ್

Published On :

ಕ.ಪ್ರ.ವಾರ್ತೆ, ತರೀಕೆರೆ, ಏ.2
ಪ್ರಜಾಪ್ರಭುತ್ವ ಸದೃಢವಾಗಲು ಚುನಾವಣೆಯಲ್ಲಿ ಎಲ್ಲರೂ ಭಾಗವಹಿಸಬೇಕೆಂದು ತಹಸೀಲ್ದಾರ್ ಶಿವಕುಮಾರ್ ತಿಳಿಸಿದ್ದಾರೆ.
ಇಲ್ಲಿನ ಚಿಕ್ಕಮಗಳೂರು ಜಿಲ್ಲಾ ಸ್ವೀಪ್ ಸಮಿತಿ, ತರೀಕೆರೆ ತಾಲೂಕು ಸ್ವೀಪ್ ಸಮಿತಿ, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ವತಿಯಿಂದ ಸಂಸ್ಥೆ ಆವರಣದಲ್ಲಿ ಎಲ್ಲಾ ಮತದಾರರು ಕಡ್ಡಾಯವಾಗಿ ಮತದಾನ ಮಾಡುವ ಕುರಿತು ಏರ್ಪಡಿಸಿದ್ದ ಜಾಗೃತ ಆಂದೋಲನ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿದ್ಯಾವಂತರು ಕಡ್ಡಾಯವಾಗಿ ಮತ ನೀಡಬೇಕು. ಆಮಿಶಕ್ಕೆ ಒಳಗಾಗದೆ, ಜಾತಿಭೇದಕ್ಕೆ ಆಸ್ಪದ ನೀಡದೇ ಮತ ಹಾಕಬೇಕು. ಯುವ ಮತದಾರರು ಹಕ್ಕು ಚಲಾಯಿಸಲು ಬರಬೇಕು. ಹೆಚ್ಚು ಮಹಿಳೆಯರು ತಮ್ಮ ಹೆಸರುಗಳನ್ನು ನೋಂದಾಯಿಸಬೇಕು ಎಂದು ತಿಳಿಸಿದರು.
ಜಾಗೃತಿ ಮೂಡಿಸಿ:  ಸ್ವಿಪ್ ತಾಲೂಕು ಸಮಿತಿಯ ಗುರುಮೂರ್ತಿ ಮಾತನಾಡಿ, 18 ವರ್ಷ ವಯಸ್ಸು ತುಂಬಿದ್ದರೆ ಮತಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಜನರು ನಿರಾಸಕ್ತರಾಗಬಾರದು. ಎಲ್ಲರೂ ಮತದಾನದಲ್ಲಿ ಭಾಗವಹಿಸಬೇಕು. ಮತದಾರರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ತಾ.ಪಂ. ಕಾರ್ಯನಿರ್ವಹಣಾಧಿಕಾರಿ ದೇವರಾಜಪ್ಪ ಮಾತನಾಡಿ ಪ್ರತಿ ಮತದಾರರನ್ನು ಜಾಗೃತಿಗೊಳಿಸಬೇಕು. ಸದೃಢವಾದ ದೇಶ ಕಟ್ಟಬೇಕು. ಮತದಾನ ಅಮೂಲ್ಯವಾದುದು. ಎಲ್ಲರೂ ದೇಶದ ಸದೃಢ ಪ್ರಜೆಗಳಾಗಬೇಕು ಎಂದು ತಿಳಿಸಿದರು.
ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಚಂದ್ರಶೇಖರ್, ಸಿಡಿಪಿಒ ಶ್ರೀಧರ್, ಬಿಇಒ ಹರಿಪ್ರಸಾದ್ ಮತ್ತಿತರರು ಮಾತನಾಡಿದರು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಮಚಂದ್ರಪ್ಪ, ಕೈಗಾರಿಕಾ ಸಂಸ್ಥೆ ಪ್ರಾಚಾರ್ಯ ಮಹಮ್ಮದ್ ರೆಹಮತ್ ಉಲ್ಲಾ, ತರಬೇತಿ ಆಧಿಕಾರಿ ರವಿ, ಹುತ್ತೇಶ್, ಶೇಖರ ನಾಯ್ಕ್ ವಿದ್ಯಾರ್ಥಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.