ಚಿಕ್ಕಮಗಳೂರು

ಪರಮೇಶ್ವರ್‌ಗೆ ಬುದ್ಧಿಭ್ರಮಣೆ: ರಾಜೇಂದ್ರ

Published On :

ಕೊಪ್ಪ: ಚಿಕ್ಕಮಗಳೂರು ಉಡುಪಿ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಧನಂಜಯ ಕುಮಾರ್ ಏ. 4 ಮತ್ತು 5 ರಂದು ಶೃಂಗೇರಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತಯಾಚನೆ ಮಾಡಲಿದ್ದಾರೆಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹೆಚ್.ರಾಜೇಂದ್ರ ತಿಳಿಸಿದರು.
 ಇಲ್ಲಿನ ಪಕ್ಷದ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಅಧ್ಯಕ್ಷರಿಗೆ ಬುದ್ಧಿ ಭ್ರಮಣೆಯಾಗಿದೆ ಯಾವುದೇ ಸೃಜನಶೀಲ ವ್ಯಕ್ತಿ ಶತ್ರುವಿನ ಸಾವನ್ನು ಬಯಸುವುದಿಲ್ಲ. ಅದರೆ ಪರಮೇಶ್ವರ್ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಸಾವು ನೀರಿಕ್ಷಿಸುವ ಹೇಳಿಕೆ ನೀಡಿರುವುದು ಜಾವಬ್ದಾರಿ ವ್ಯಕ್ತಿಗೆ ಶೋಭೆತರುವುವಂತಹದ್ದಲ್ಲ. ವಯಸ್ಸು, ಹಿರಿತನ, ಜವಾಬ್ದಾರಿ ಮರೆತು ಹೇಳಿಕೆ ನೀಡಿರುವ ಪರಮೇಶ್ವರ್ ರಾಜಿನಾಮೆಯನ್ನ ಕಾಂಗ್ರೆಸ್ ಪಡೆದುಕೊಳ್ಳ ಬೇಕು ಹಾಗೂ ಅವರ ಮೇಲೆ ಕ್ರೀಮಿನಲ್ ಪ್ರಕರಣ ದಾಖಲಿಸ ಬೇಕೆಂದರು.
 ಜೆಡಿಎಸ್ ಕ್ಷೇತ್ರಾಧ್ಯಕ್ಷರಾದ ಕಾರ್ಯನಿರ್ವಹಿಸುತ್ತಿರುವ ಹೂವಪ್ಪಗೌಡ ವಿಶ್ರಾಂತಿ ಬಯಸಿರುವ ಹಿನ್ನೆಲೆಯಲ್ಲಿ ಮುಂದಿನ ವ್ಯವಸ್ಥೆ ಆಗುವವರಗೆ ಕ್ಷೇತ್ರ ಕಾರ್ಯಧ್ಯಕ್ಷರಾಗಿರುವ ದಿವಾಕರ್ ಭಟ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆಂದರು.
 ಶೃಂಗೇರಿ ಶಾರದಾಂಬೆಗೆ ಪೂಜೆ ಸಲ್ಲಿಸುವ ಮೂಲಕ ಏ.4 ರಂದು ಚುನಾವಣಾ ಪ್ರಚಾರ ಆರಂಭಿಸುವ ಧನಂಜಯ ಕುಮಾರ್ ಅಂದು ಶೃಂಗೇರಿ ರಥ ಬೀದಿಯಲ್ಲಿ ಮತಯಾಚನೆ ನಡೆಸಿ ಸಂತೆ ಮೈದಾನದಲ್ಲಿ ಬಹಿರಂಗ ಸಭೆಯಲ್ಲಿ ಮಾತನಾಡಲಿದ್ದಾರೆ.
 ಏ.5 ರಂದು ನ.ರಾ.ಪುರ ಹಂತ್ವಾನಿ,ಮುತ್ತಿನಕೊಪ್ಪ,ಶೆಟ್ಟಿಕೊಪ್ಪಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ ಮಾಜಿ ಸಚಿವ ಬಿ.ಬಿ.ನಿಂಗಯ್ಯ,ಹೆಚ್.ಟಿ.ರಾಜೇಂದ್ರ ಮತ್ತು ಪಕ್ಷದ ಜಿಲ್ಲಾಹಾಗೂ ತಾಲೂಕು ಮುಖಂಡರು ಪಾಲ್ಗೋಳ್ಳಲಿದ್ದಾರೆಂದರು.  ಜೆಡಿಎಸ್ ಮುಖಂಡರಾದ ಕಣಿವೆ ವಿನಯ್.ದಿವಾಕರ್ ಭಟ್ ಬದ್ರಿಯಾ ಮಹ್ಮದ್.ಕೆ.ಕೆ ಸಾಯಿನಾಥ್,ಆಶಾ ಪೇರಿಸ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.