ಚಿಕ್ಕಮಗಳೂರು

ನಿಂಗಯ್ಯ ಗೆದ್ದಿದ್ದು ಮತದಾರರಿಂದ, ಬಿಜೆಪಿಯಿಂದಲ್ಲ

Published On :

ಕ.ಪ್ರ.ವಾರ್ತೆ , ಮೂಡಿಗೆರೆ , ಏ.4
ಶಾಸಕ ಬಿ.ಬಿ. ನಿಂಗಯ್ಯ ಗೆಲುವು ಸಾಧಿಸಿರುವುದು ಬಿಜೆಪಿಯ ಆಂತರಿಕ ಘಟನೆಯಿಂದಲ್ಲ. ಬಿಜೆಪಿಯವರು ಮಾಡಿರುವ ಭ್ರಷ್ಟಾಚಾರ ಹಗರಣದಿಂದ ಬೇಸತ್ತ ಮತದಾರರು ಜೆಡಿಎಸ್‌ಗೆ ಮತಹಾಕಿ ಬಿ.ಬಿ. ನಿಂಗಯ್ಯ ಅವರನ್ನು ಗೆಲ್ಲಿಸಿದ್ದಾರೆ ಎಂದು ಜೆಡಿಎಸ್ ಎಸ್‌ಸಿ., ಎಸ್‌ಟಿ ವಿಭಾಗದ ಕ್ಷೇತ್ರ ಸಮಿತಿ ಅಧ್ಯಕ್ಷ ಸಚ್ಚಿನ್ ಹನುಮನಹಳ್ಳಿ ಹೇಳಿದ್ದಾರೆ.
ಬಿ.ಬಿ. ನಿಂಗಯ್ಯ ಅವರು ಗೆಲುವು ಸಾಧಿಸಿರುವುದು ಬಿಜೆಪಿಯ ಆಂತರಿಕ ಘಟನೆಯಿಂದ ಹೊರತು ಜೆಡಿಎಸ್ ಮತಗಳಿಂದ ಅಲ್ಲ ಎಂದು ಪತ್ರಿಕೆಗಳಲ್ಲಿ ಸುದ್ದಿ ಪ್ರಕಟವಾಗಿದೆ ಎಂಬ ಹಿನ್ನೆಲೆ ಪ್ರತಿಕ್ರಿಯೆ ನೀಡಿದ್ದಾರೆ.
ಜೆಡಿಎಸ್ ಅಧಿಕಾರದಲ್ಲಿದ್ದಾಗ ರೈತರ ಸಾಲ ಮತ್ತು ಬಡ್ಡಿ ಮನ್ನಾ, ಬಜೆಟ್‌ನಲ್ಲಿ ರೈತರಿಗೆ ಜನಸಾಮಾನ್ಯರಿಗೆ ಅನುಕೂಲ ಆಗುವಂತೆ ಮಾಡುವುದರೊಂದಿಗೆ, ಇನಾಂ ಭೂಮಿ ಉಳಿಸಿ ಹೋರಾಟದಲ್ಲಿ ಜೆಡಿಎಸ್ ಮಹತ್ವದ ಪಾತ್ರ ಹೊಂದಿದೆ ಎಂದಿದ್ದಾರೆ.
ಅಭಿವೃದ್ಧಿ ಶೂನ್ಯ:  ಆದರೆ, ಬಿಜೆಪಿಯವರು ಮಾಡಿರುವ ಭ್ರಷ್ಟಾಚಾರ, ಹಗರಣ ವಿವರಗಳು ಮುಖ್ಯಮಂತ್ರಿ ಅವಧಿಯಲ್ಲಿ ಬಿ.ಎಸ್. ಯಡಿಯೂರಪ್ಪ ಭ್ರಷ್ಟಾಚಾರ ಹಗರಣದಲ್ಲಿ ಜೈಲಿಗೆ ಹೋಗಿದ್ದರು. ಸಚಿವ ರೇಣುಕಾಚಾರ್ಯ ನರ್ಸ್‌ಜಯಲಕ್ಷ್ಮೀ ಹಗರಣ, ಸ್ನೇಹಿತನ ಮನೆಗೆ ಹೋಗಿ ಸ್ನೇಹಿತನ ಹೆಂಡತಿಯನ್ನು ಅತ್ಯಾಚಾರ ಮಾಡಲು ಹೋದ ಸಚಿವ ಹರತಾಳು ಹಾಲಪ್ಪ, ಪವಿತ್ರವಾದ ಸದನದಲ್ಲಿ ಸಚಿವ ಲಕ್ಷ್ಮಣ ಸವದಿ ಮತ್ತು ಪಾಟೀಲ್ ಬ್ಲೂ ಫಿಲಂ ವೀಕ್ಷಣೆ ಹಗರಣ, ಬಳ್ಳಾರಿಯ ಜನಾರ್ದನ ರೆಡ್ಡಿ ಮತ್ತು ಸಹೋದರರ ಗಣಿ ಲೂಟಿ ಹಗರಣ ಜೈಲು ಪಾಲು, 5 ವರ್ಷ ಅವಧಿಗೆ ಕುರ್ಚಿ ಉಳಿಸಿಕೊಳ್ಳಲು ಮೂವರು ಮುಖ್ಯಮಂತ್ರಿಗಳು. ಆದರೂ ರಾಜ್ಯದ ಅಭಿವೃದ್ಧಿ ಶೂನ್ಯ ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.