ಅಧ್ಯಾತ್ಮದಲ್ಲಿ ಭಾರತ ವಿಶ್ವಕ್ಕೇ ಮಾದರಿ: ರೈ
ಮೂಡಿಗೆರೆ: ಭಾರತ ಅತ್ಯಂತ ಶ್ರೀಮಂತ ದೇಶವಾಗಿದ್ದು, ಆಧ್ಯಾತ್ಮಿಕವಾಗಿ ವಿಶ್ವವೇ ಭಾರತವನ್ನು ಮಾದರಿಯಾಗಿಟ್ಟುಕೊಂಡು ಇಲ್ಲಿನ ಯೋಗ ಮತ್ತು ಆಧ್ಯಾತ್ಮಿಕತೆ ಅಭ್ಯಸಿಸಲು ವಿದೇಶಿಗರು ಆಗಮಿಸಿ ಕಲಿಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಮ್ಮ ಮಕ್ಕಳಲ್ಲಿ ದೇಶದ ಬಗ್ಗೆ ಅಭಿಮಾನ ಬೆಳಸಿಕೊಳ್ಳುವಂತೆ ಅವರಿಗೆ ಸಕಾರಾತ್ಮಕ ವಿಷಯಗಳನ್ನು ಉಣಬಡಿಸಬೇಕು ಎಂದು ವಿ.ಎಸ್. ಶಾಲೆಯ ಪ್ರಾಂಶುಪಾಲ ವಿಶ್ವನಾಥ ರೈ ತಿಳಿಸಿದರು.
ಪಟ್ಟಣದ ಜೆಸಿಐ ವತಿಯಿಂದ ಚಿಣ್ಣರ ಚಿಲಿಪಿಲಿ 8 ದಿನಗಳ ಬೇಸಿಗೆ ಶಿಬಿರವನ್ನು ಪಟ್ಟಣದ ಜೇಸಿ ಭವನದಲ್ಲಿ ಪ್ರಾರಂಭಿಸಲಾದ್ದು, ಶಿಬಿರದಲ್ಲಿ 6 ರಿಂದ 12 ವರ್ಷ ವಯಸ್ಸಿನ 65 ವಿದ್ಯಾರ್ಥಿಗಳು ಭಾಗವಹಿಸಿದ್ದು, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜೆಸಿಐ ಘಟಕದ ಅಧ್ಯಕ್ಷ ರತೀಶ್ ಬೆಟ್ಟಗೆರೆ ಅವರು ಮಾತನಾಡಿ, ಬೇಸಿಗೆ ಶಿಬಿರಗಳನ್ನು ಜೆಸಿಐ ಸಂಸ್ಥೆ ಹಲವು ವರ್ಷಗಳಿಂದ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ. ಇದರ ಉಪಯೋಗವನ್ನು ತಮ್ಮ ಪುಟಾಣಿ ಮಕ್ಕಳಿಗೆ ಪಾಲಕರು ಕಲ್ಪಿಸಿಕೊಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಸನ್ನ ಗೌಡಹಳ್ಳಿ, ವಿಂದ್ಯಾರತೀಶ್, ನಾಗೇಶ್ ಮಾಡ್ಕಲ್, ರಮೇಶ್ ಆಚಾರ್ಯ, ಪ್ರದೀಪ್ ದಂಡುಗ, ಕೆ.ಎಲ್.ಎಸ್. ತೇಜಸ್ವಿ, ವಿನೋದ್ಕುಮಾರ್, ಎಂ.ಡಿ. ವಿಜಯಕುಮಾರ್, ಅಣ್ಣಾನಾಯಕ್, ಸುಧಾ ಚಂದ್ರಶೇಖರ್, ಶಶಿಕರಣ್ ಮಾಕೋನಹಳ್ಳಿ, ನಯನ ಕಣಚೂರು, ಧನಿಕ್ ಕೋಡದಿಣ್ಣೆ, ಶ್ರೇಷ್ಠಿ, ಸುಚಿತ್ರ ಪ್ರಸನ್ನ, ಸುಜಾತ ನಾಗೇಶ್, ಭಾರತೀ ರವೀಂದ್ರ, ಬಸವರಾಜು, ಸಂಪತ್ ಮಗ್ರಹಳ್ಳಿ ಮುಂತಾದವರು ಭಾಗವಹಿಸಿದ್ದರು.
ರವಿಕುಮಾರ್ ನಿರೂಪಿಸಿ, ನಾಗೇಶ್ ಮಾಡ್ಕಲ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

