ಕ್ರೈಸ್ತ ಧರ್ಮಾಧ್ಯಕ್ಷರ ಆಶೀರ್ವಾದ ಪಡೆದ ಹೆಗ್ಡೆ
ಚಿಕ್ಕಮಗಳೂರು: ಬಡ ಜನರಿಗೆ ಮತ್ತು ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಸ್ಪಂದಿಸುವ ಜನಪ್ರತಿನಿಧಿಗಳಿಗೆ ಮತದಾರ ಕೈಬಿಡುವುದಿಲ್ಲ ಎಂದು ಕ್ರೈಸ್ತ ದೇವಾಲಯಗಳ ಧರ್ಮಾಧ್ಯಕ್ಷ ಡಾ. ಅಂತೋಣಿಸ್ವಾಮಿ ಹೇಳಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆ ಅವರು ಶುಕ್ರವಾರ ಇಲ್ಲಿನ ಜ್ಯೋತಿನಗರದ ಬಿಷಪ್ ಹೌಸ್ನಲ್ಲಿ ಭೇಟಿಯಾದ ಸಂದರ್ಭದಲ್ಲಿ ಆಶೀರ್ವದಿಸಿ ಮಾತನಾಡಿ, ಪ್ರಾಮಾಣಿಕತೆ ಮೆರೆದು ಜನರಿಗೆ ಹತ್ತಿರ ವಿರುವ ಯಾವುದೇ ಜನಪ್ರತಿನಿಧಿಗೆ ಮತದಾರ ಸ್ಪಂದಿಸುತ್ತಾನೆ ಎಂದು ತಿಳಿಸಿದರು.
ಕೆ. ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಯಾವುದೇ ಜನಪರ ಕಾರ್ಯ ಮಾಡುವಾಗ ಎಲ್ಲ ಧರ್ಮದ ಗುರು- ಹಿರಿಯರನ್ನು ಕಂಡು ಆಶೀರ್ವಾದ ಪಡೆಯುವುದು ನನ್ನ ವಾಡಿಕೆ, ಅಂತೇಯೆ ಇಂದು ಬಿಷಪ್ ಅವರನ್ನು ಕಂಡಿದ್ದೇನೆ. ಮನಪೂರ್ವಕವಾಗಿ ಆಶೀರ್ವದಿಸಿದ್ದಾರೆ ಎಂದರು.
ಸಂಸದನಾಗಿ ನನಗೆ ಸಿಕ್ಕ ಕಡಿಮೆ ಅವಧಿಯಲ್ಲಿ ಯಾವ ವರ್ಗವನ್ನು ಕಡೆಗಣಿಸದೆ ಎಲ್ಲರನ್ನು ಸಮಾನವಾಗಿ ಕಂಡು ವೈಯುಕ್ತಿಕವಾಗಿ ಸ್ಪಂದಿಸಿರುವುದು ಮತ್ತು ನಾನು ಮಾಡಿದ ಅಭಿವೃದ್ಧಿ ಕಾರ್ಯಗಳು ಶ್ರೀರಕ್ಷೆಯಾಗಲಿದ್ದು ಜನ ಮತ್ತೊಮ್ಮೆ ನನ್ನ ಪುನಾರಾಯ್ಕೆ ಬಯಸಿದ್ದಾರೆ ಎಂಬ ನಂಬಿಕೆ ಇದೆ ಎಂದರು.
ವಿಧಾನಪರಿಷತ್ ಸದಸ್ಯೆ ಗಾಯಿತ್ರಿ ಶಾಂತೇಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಡಿ.ಎಲ್. ವಿಜಯಕುಮಾರ್, ಬಿ.ಎಂ. ಸಂದೀಪ್, ಎ.ಎನ್. ಮಹೇಶ್, ನಗರಸಭೆ ಸದಸ್ಯರಾದ ಹೆಚ್.ಎಸ್. ಪುಟ್ಟಸ್ವಾಮಿ, ರೂಬಿನ್ ಮೋಸಸ್, ಜೇಮ್ಸ್, ಯದುಕುಮಾರ್, ತರೆಸ್ಸಾ ಲೋಬೋ, ಸಂಪತ್ ರಾಜ್, ಜಾರ್ಜ್ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

