ಅಭಿವೃದ್ಧಿಯೇ ಕಾಂಗ್ರೆಸ್ ಗೆಲವಿಗೆ ಶ್ರೀರಕ್ಷೆ
ಕ.ಪ್ರ.ವಾರ್ತೆ ಕಡೂರು ಏ. 6
ಕೇವಲ 11 ತಿಂಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಜನಸಾಮಾನ್ಯರಿಗಾಗಿ ರೂಪಿಸಿದ ನೂರಾರು ಕಾರ್ಯಕ್ರಮಗಳೇ ಕಾಂಗ್ರೆಸ್ನ ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎ. ಮಂಜು ಗೆಲವು ಸಾಧಿಸಲು ಕಾರಣವಾಗಲಿದೆ ಎಂದು ಕಡೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಚ್. ಚಂದ್ರಪ್ಪ ಹೇಳಿದರು.
ಕಡೂರು ವಿಧಾನಸಭಾ ಕ್ಷೇತ್ರದ ಸರಸ್ವತಿಪುರ, ಚಿಕ್ಕಂಗಳ, ಯಳ್ಳಂಬಳಸೆ, ಚೌಳಹಿರಿಯೂರು ಗ್ರಾಮಗಳಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಭಿವೃದ್ಧಿ ಶೂನ್ಯ: ಹಾಸನ ಲೋಕಸಭಾ ಕ್ಷೇತ್ರದ ಸಂಸದರಾಗಿ 3 ಬಾರಿ ಆಯ್ಕೆಯಾಗಿರುವ ಮಾಜಿ ಪ್ರಧಾನಿ ದೇವೇಗೌಡರು ಕಡೂರು ಕ್ಷೇತ್ರ ಸೇರಿದಂತೆ ಹಾಸನ ಕ್ಷೇತ್ರಕ್ಕೆ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ ಹಾಗೂ ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ದೇವೇಗೌಡರ ಸಾಧನೆ ಶೂನ್ಯ. ಇದರಿಂದ ಬೇಸತ್ತಿರುವ ಮತದಾರರು ಕಾಂಗ್ರೆಸ್ ಬೆಂಬಲಿಸಲಿದ್ದಾರೆ ಎಂದವರು ಹೇಳಿದರು.
ಹಾಸನ ಕ್ಷೇತ್ರದಲ್ಲಿ ಕಾಂಗ್ರೆಸ್ಗೆ ಜೆಡಿಎಸ್ ಪ್ರತಿಸ್ಪರ್ಧಿಯೇ ಹೊರತು ಬಿಜೆಪಿಯಲ್ಲ. ಕಾರಣ ಬಿಜೆಪಿ ಅಭ್ಯರ್ಥಿ ವಲಸೆ ಬಂದವರಾಗಿದ್ದು, ಸೋತು ತಮ್ಮ ತವರಿಗೆ ಮರಳಲಿದ್ದಾರೆ. ಅಂತವರಿಗೆ ಮತ ಹಾಕಿ ಯಾವುದೇ ಪ್ರಯೋಜನವಿಲ್ಲ ಎಂದರು.
ರಾಜಕೀಯ ನಿವೃತ್ತಿ: ಇನ್ನು ದೇವೇಗೌಡರಿಗೆ ಹಾಸನ ಲೋಕಸಭಾ ಕ್ಷೇತ್ರದ ಮತದಾರರು ರಾಜಕೀಯ ನಿವೃತ್ತಿ ನೀಡಲಿದ್ದು, ಕಾಂಗ್ರೆಸ್ನ ಸಮರ್ಥ ಅಭ್ಯರ್ಥಿ ಎ. ಮಂಜುರವರಿಗೆ ಮತ ನೀಡಿ ಗೆಲ್ಲಿಸಿದಲ್ಲಿ ಅವರು ಕಡೂರು ಕ್ಷೇತ್ರ ಹಾಗೂ ಇಡೀ ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ ಕೈಜೋಡಿಸಿ ದುಡಿಯಲಿದ್ದಾರೆ. ಆದ್ದರಿಂದ ಮತದಾರರ ಮನವೊಲಿಸಿ ಕಾರ್ಯಕರ್ತರು ಮಂಜುಗೆ ಮತ ಕೊಡಿಸಬೇಕು ಎಂದು ಕೋರಿದರು.
ಕಾಂಗ್ರೆಸ್ ಮುಖಂಡ, ಎಪಿಎಂಸಿ ನಿರ್ದೇಶಕ ಯರದಕೆರೆ ಎಂ. ರಾಜಣ್ಣ ಮಾತನಾಡಿ, ನೀರಾವರಿ ಎಂದಾಕ್ಷಣ ಹಾಸನ, ಮಂಡ್ಯ ಎಂಬ ಕಲ್ಪನೆಯನ್ನು ನಮ್ಮ ನಾಯಕ ಸಿದ್ದರಾಮಯ್ಯನ ಸುಳ್ಳು ಮಾಡಿ ರು. 12,000 ಕೋಟಿಯ ಭದ್ರಾ ಮೇಲ್ದಂಡೆ ಯೋಜನೆ ಮಂಜೂರಾತಿ ನೀಡಿದ್ದಾರೆ ಎಂದರು.
ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಮಹೇಶ್ ಒಡೆಯರ್, ಬೀರೂರು ಬ್ಲಾಕ್ ಅಧ್ಯಕ್ಷ ಕೆ.ಎಂ. ವಿನಾಯಕ್ ಮಾತನಾಡಿದರು.
ಸಭೆಯಲ್ಲಿ ಕಾಂಗ್ರೆಸ್ ಮುಖಂಡ ಕೆ.ಎಂ. ಕೆಂಪರಾಜು, ಕೆ.ಎಸ್. ಆನಂದ್, ಸಾವಿತ್ರಿ ಗಂಗಪ್ಪ, ಕೆ.ಜಿ. ಶ್ರೀನಿವಾಸ ಮೂರ್ತಿ, ವೈ.ಎಂ. ತಮ್ಮಯ್ಯ, ಬಾಸೂರು ಚಂದ್ರಮೌಳಿ, ಶೇಖರಪ್ಪ, ಜಗದೀಶ್, ಮಲ್ಲಿಕಾರ್ಜುನ್, ನೀಲಪ್ಪ, ಸಲೀಂ ಮೊದಲಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

