ಚಿಕ್ಕಮಗಳೂರು

ನೌಕರರು ಸಾಲ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಲಿ

Published On :

ಕ.ಪ್ರ.ವಾರ್ತೆ    ಚಿಕ್ಕಮಗಳೂರು    ಏ. 6
ಅರಣ್ಯ ಇಲಾಖೆ ಸಿಬ್ಬಂದಿಗೆ ಕ್ಷೇಮಾಭಿವೃದ್ಧಿ ಸಂಘ ಸಹಕಾರಿ ಎಂದು ಸಂಘದ ಅಧ್ಯಕ್ಷ ಎಚ್.ಕೆ. ಜಯಕುಮಾರ್ ಹೇಳಿದ್ದಾರೆ.
ನಗರ ಹೊರವಲಯದ ಅರಣ್ಯ ಇಲಾಖೆ ನೌಕರರ ಕ್ಷೇಮಾಭಿವೃದ್ಧಿ ಸಹಕಾರಿ ಸಂಘಕ್ಕೆ ನೂತನ ಅಧ್ಯಕ್ಷ- ಉಪಾಧ್ಯಕ್ಷರ ಅಧಿಕಾರ ಹಸ್ತಾಂತರ ಸಮಾರಂಭದಲ್ಲಿ ಮಾತನಾಡಿದರು.
1981ರಲ್ಲಿ 25 ಷೇರು ಬಂಡವಾಳದೊಂದಿಗೆ ಆರಂಭವಾದ ಸಹಕಾರಿ ಸಂಘದಲ್ಲಿ ಇಂದು 420 ಸದಸ್ಯರನ್ನು ಹೊಂದಿ 5 ಲಕ್ಷಕ್ಕೂ ಹೆಚ್ಚು ಷೇರು ಬಂಡವಾಳ ಹೊಂದಲಾಗಿದೆ ಎಂದರು.
ಇಲಾಖೆ ನೌಕರರ ಸಮಸ್ಯೆಗಳಿಗೆ ತಕ್ಷಣ ಪರಿಹಾರ ದೊಕಿಸಿಕೊಡುವ ನಿಟ್ಟಿನಲ್ಲಿ ಕಡಿಮೆ ಬಡ್ಡಿ ದರದಲ್ಲಿ ಹತ್ತು ಸಾವಿರದಿಂದ ಸಾಲ ನೀಡಲು ಆರಂಭಿಸಿ ನಂತರ 50 ಸಾವಿರದವರೆಗೆ ವಿಸ್ತರಿಸಲಾಗಿದೆ. ನೂರಕ್ಕೂ ಹೆಚ್ಚು ಸದಸ್ಯರು ಇದನ್ನು ಸದುಪಯೋಗಪಡಿಸಿಕೊಂಡಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.
ನೌಕರರ ಕುಟುಂಬದ ಸದಸ್ಯರಿಗೆ ಶಿಕ್ಷಣ, ಆರೋಗ್ಯ ಸೇರಿದಂತೆ ಅವಶ್ಯಕತೆಗನುಗುಣವಾಗಿ ಸಹಕರಿಸುತ್ತಾ ಬಂದಿದ್ದು, ಆಡಳಿತ ಮಂಡಳಿಯ ಸಲಹೆ ಸಹಕಾರದಿಂದ ಮುಂದಿನ ದಿನಗಳಲ್ಲಿ 1 ಲಕ್ಷ ಸಾಲ ನೀಡುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದ ಅವರು, ನೂತನ ಅಧ್ಯಕ್ಷ ಸ್ಥಾನದ ಆಯ್ಕೆಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಉಪಾಧ್ಯಕ್ಷ ಗಣೇಶ್ ಮಾತನಾಡಿ, ಎಸಿಎಫ್‌ನಿಂದ ಕಚೇರಿ ಸಿಬ್ಬಂದಿ ಸೇರಿದಂತೆ ವಾಚರ್‌ವರೆಗೂ ಜಿಲ್ಲೆಯ ಅರಣ್ಯ ಇಲಾಖೆಯಲ್ಲಿ ಕಾಯಂ ಕೆಲಸ ಮಾಡುವವರು ಸದಸ್ಯತ್ವ ಹೊಂದಿದ್ದಾರೆ. ಕಳೆದ ವರ್ಷದಲ್ಲಿ 50ಕ್ಕೂ ಹೆಚ್ಚು ಸದಸ್ಯರಿಗೆ ಸಾಲ ನೀಡಲಾಗಿದೆ. ಸಂಘದ ಕಟ್ಟಡದಲ್ಲಿ ಮಳಿಗೆಗಳನ್ನು ನಿರ್ಮಿಸಿ ಅದರಿಂದ ಬರುವ ಆದಾಯವನ್ನು ಸಂಘದಲ್ಲಿ ತೊಡಗಿಸಿ ಅಭಿವೃದ್ಧಿಪಡಿಸಲು ಎಲ್ಲ ಸದಸ್ಯರ ಶ್ರಮ ಒಳಗೊಂಡಿದೆ ಎಂದರು.
ನಿರ್ದೇಶಕರಾದ ಮಂಜಯ್ಯ, ಬೋಬೇಗೌಡ, ಸೋಮಶೇಖರಯ್ಯ, ಪ್ರದೀಪ್ ಗೌಡ, ಸತ್ಯನಾರಾಯಣರಾಜು, ಮಲ್ಲಿಕಾರ್ಜುನ್, ಉಮೇಶ್, ನಿಂಗೇಗೌಡ, ಶೈಲಾ, ಅಮ್ಮಯ್ಯ, ಲಕ್ಷ್ಮಣ್ ಗೌಡ ಕಾರ್ಯದರ್ಶಿ ಸುನೀಲ್ ಕುಮಾರ್ ಹಾಜರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.