ಸಂಭ್ರಮದ ಉರುಸ್
ಚಿಕ್ಕಮಗಳೂರು: ನಗರದ ರಾಮನಹಳ್ಳಿಯ ಹಝರತ್ ತಂಬಲ್ ಪೋಶ್ ಶಾಖಾದ್ರಿ ದರ್ಗಾದಲ್ಲಿ ಮಹಮದಿಯಾ ಅಂಜುಮಾನ್ ನವೇ ಜವಾಬ್ ಸಮಿತಿಯಿಂದ ಭಾನುವಾರ ನೂರಾರು ಭಕ್ತರ ಸಮ್ಮುಖದಲ್ಲಿ ಉರುಸ್ ಆಚರಿಸಲಾಯಿತು. ನಗರದ ಹನುಮಂತಪ್ಪ ವೃತ್ತದಿಂದ ಭಕ್ತರು ಗಂಧದೊಂದಿಗೆ ಆಲೇನಹಳ್ಳಿಯವರೆಗೂ ಮೆರವಣಿಗೆ ನಡೆಸಿ ಹಝರತ್ ತಂಬಲ್ ಪೋಶ್ ಶಾಖಾದ್ರಿ ದರ್ಗಾಕ್ಕೆ ಹಿಂತಿರುಗಿದರು. ನಂತರ ಭಕ್ತರು ಮೆರವಣಿಗೆಯಲ್ಲಿ ತಂದ ಗಂಧ ಮತ್ತು ಹೂವನ್ನು ದರ್ಗಾದಲ್ಲಿ ಲೇಪಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ರಾಮನಹಳ್ಳಿ, ಆಲೇನಹಳ್ಳಿ ಸೇರಿದಂತೆ ನಗರದ ವಿವಿಧ ಭಾಗಗಳಿಂದ ನೂರಾರು ಭಕ್ತರು ಭಾಗವಹಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಫ್ರಿಜ್ಡ್‌ನಲ್ಲಿ ಶಾರ್ಟ್‌ಸರ್ಕೂಟ್: ಅಂಗಡಿ ವಸ್ತು ಭಸ್ಮ
ಮೂಡಿಗೆರೆ: ತಾಲೂಕಿನ ಗೋಣಿಬೀಡು ಹೋಬಳಿಯ ಆನೆದಿಬ್ಬದ ಅಂಗಡಿಯಲ್ಲಿ ವಿದ್ಯುತ್ ಶಾರ್ಟ್‌ಸರ್ಕ್ಯೂಟ್‌ನಿಂದಾಗಿ ಅಂಗಡಿ ಸುಟ್ಟುಹೋಗಿದ್ದು, ಲಕ್ಷಾಂತರ ರು. ನಷ್ಟ ಸಂಭವಿಸಿದೆ. ಆನೇದಿಬ್ಬದ ಬಿ.ಎಂ. ಲೋಕೇಶ್ ಎಂಬವರ ದಿನಸಿ ಅಂಗಡಿಯಲ್ಲಿದ್ದ ಫ್ರಿಜ್ಡ್‌ನಲ್ಲಿ ಶಾರ್ಟ್‌ಸರ್ಕೂಟ್ ಕಾಣಿಸಿಕೊಂಡಿದ್ದೇ ಅವಘಡಕ್ಕೆ ಕಾರಣ ಎನ್ನಲಾಗಿದೆ. ಭಾನುವಾರ ರಾತ್ರಿಯಲ್ಲಿ ಬೆಂಕಿ ಹೊತ್ತುಕೊಂದಿದ್ದು, ದಿನಸಿ ಪದಾರ್ಥಗಳು, ಬೆಲೆ ಬಾಳುವ ವಸ್ತುಗಳು ಸಂಪೂರ್ಣ ಬೆಂಕಿಗೆ ಆಹುತಿಯಾಗಿವೆ ಎಂದು ಅಂಗಡಿ ಮಾಲೀಕ ಗೋಣಿಬೀಡು ಪೊಲೀಸರಿಗೆ ದೂರು ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

