ಚಿಕ್ಕಮಗಳೂರು

ಸಿಪಿಐ, ಸಿಪಿಐಎಂ ಆಳುವ ಪಕ್ಷದ ದೋಸ್ತಿ: ಆರೋಪ

Published On :

ಸಿಪಿಐ, ಸಿಪಿಐ(ಎಂ) ಆಳುವ ಪಕ್ಷದ ದೋಸ್ತಿಗಳು ಎಂದು ಸಿಪಿಐ (ಎಂ.ಎಲ್.)ನ ಪಾಲಿಟ್ ಬ್ಯೂರೋನ ಆರ್.ಮಾನಸಯ್ಯ ಆರೋಪಿಸಿದ್ದಾರೆ.
ಇವು ಹೆಸರಿಗೆ ಮಾತ್ರ ಎಡಪಕ್ಷಗಳು. ಅವರ ತತ್ವ, ಸಿದ್ಧಾಂತ ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಸರಿಸಮಾನವಾಗಿವೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಬುಧವಾರ ತಿಳಿಸಿದರು.
16ನೇ ಲೋಕಸಭಾ ಚುನಾವಣೆಯಲ್ಲಿ ಅಜೆಂಡಾದ ಬಗ್ಗೆ ಚರ್ಚೆಯಾಗುತ್ತಿಲ್ಲ. ನರೇಂದ್ರ ಮೋದಿ ಅಭಿವೃದ್ಧಿ, ರಾಹುಲ್ ಗಾಂಧಿ ಭಾರತ ನಿರ್ಮಾಣದ ಬಗ್ಗೆ ಮಾತನಾಡುತ್ತಿದ್ದಾರೆ. ಶಿಷ್ಟಾಚಾರ ರಹಿತವಾಗಿ ಚುನಾವಣಾ ಪ್ರಚಾರ ನಡೆಯುತ್ತಿದೆ. ದೇಶದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯುತ್ತಿಲ್ಲ ಎಂದರು.
ಭಾರತ ಆಹಾರ ಸ್ವಾವಲಂಬನೆ, ವಿದ್ಯುತ್ ಸೇರಿದಂತೆ ನಾಗರೀಕ ಸೌಲಭ್ಯ, ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ, ಉದ್ಯೋಗ ಸೃಷ್ಟಿಯ ಪ್ರಮಾಣ ಇಳಿಮುಖವಾಗಿದೆ. ಬಿಜೆಪಿ, ಕಾಂಗ್ರೆಸ್ ಹಾಗೂ ಜನತಾ ಪರಿವಾರದ ಸರ್ಕಾರಗಳು ಈವರೆಗೆ ಯಾವುದೇ ಸವಲತ್ತುಗಳನ್ನು ಜನತೆಗೆ ನೀಡಿಲ್ಲ ಎಂದು ಹೇಳಿದರು.
ದೇಶದ ಅಭಿವೃದ್ಧಿ ಎಂದರೆ ಶ್ರೀಮಂತ, ಕಾರ್ಪೋರೇಟ್ ಕಂಪನಿಗಳ ನಿರ್ಮಾಣ ಎಂದು ಬಿಜೆಪಿ, ಕಾಂಗ್ರೆಸ್ ಭಾವಿಸಿವೆ. ಬಡವರಿಗೆ ಭೂಮಿ ಹಂಚುವ ಕಾರ್ಯಕ್ರಮವನ್ನು 3 ವರ್ಷಗಳಿಂದ ದೇಶದಲ್ಲಿ ರದ್ದಾಗಿದೆ. ಕಾಂಗ್ರೆಸ್ ಪಕ್ಷ ದೇವರಾಜ್ ಅರಸ್ ಹೆಸರು ಹೇಳುತ್ತಿಲ್ಲ. ದೊಡ್ಡ ಒತ್ತುವರಿದಾರರನ್ನು ತೆರವುಗೊಳಿಸಲು ಎಲ್ಲಾ ರಾಜಕೀಯ ಪಕ್ಷಗಳು ಹಿಂದೇಟು ಹಾಕುತ್ತಿವೆ. ದೇಶದಲ್ಲಿ ಎಲ್ಲಾ ಸ್ಥರದಲ್ಲೂ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೆ ತರಬೇಕಾದ ಅವಶ್ಯಕತೆ ಇದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.