ಚಿಕ್ಕಮಗಳೂರು

ಕ್ರೀಯಾಶೀಲ ಅಭ್ಯರ್ಥಿಗೆ ಮತದಾರರು ಮಣೆ ಹಾಕಲಿ

Published On :

ಹಿರಿಯೂರು: ಯಾದವ ಸಮುದಾಯ ಲಾಗಾಯ್ತಿನಿಂದಲೂ ಕಾಂಗ್ರೆಸ್‌ಗೆ ಮತಹಾಕಿಕೊಂಡು ಬಂದು ಬೇಸತ್ತಿದ್ದು, ಆ ಪಕ್ಷದಿಂದ ಯಾವುದೇ ತೆರನಾದ ಸಮುದಾಯದ ಅಭಿವೃದ್ಧಿ ಸಾಧ್ಯವಾಗದೇ ಹೋದ್ದರಿಂದ ಈ ಬಾರಿ ಯಾದವರು ಬಿಜೆಪಿ ಪಕ್ಷವನ್ನು ನಿರ್ಣಾಯಕವಾಗಿ ಬೆಂಬಲಿಸಲಿದ್ದಾರೆಂದು ರಾಷ್ಟ್ರೀಯ ಮಹಿಳಾ ಮೋರ್ಚಾದ ಉಪಾಧ್ಯಕ್ಷೆ ಪೂರ್ಣಿಮಾ ಪ್ರಕಾಶ್ ಹೇಳಿದರು.
ತಾಲೂಕಿನ ಜೆಜಿಹಳ್ಳಿ ಹೋಬಳಿಯ ಜೂಲಯ್ಯನಹಟ್ಟಿಯಲ್ಲಿ ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ಜನಾರ್ದನಸ್ವಾಮಿ ಪರ ಚುನಾವಣಾ ಮತ ಪ್ರಚಾರ ನಡೆಸಿ ಮಾಧ್ಯಮಗಳೊಂದಿಗೆ ಮಾತನಾಡಿದರು.
ವಿವಿಧ ಯೋಜನೆ ಜಾರಿ: ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ್ಯೂ ಬಿಜೆಪಿ ಸಂಸದರಾದ ಜನಾರ್ದನಸ್ವಾಮಿಯವರು ಸಂಸತ್ತಿನಲ್ಲಿ ಹೋರಾಟ ನಡೆಸಿ ಜಿಲ್ಲೆಗೆ ಭದ್ರಾ ಮೇಲ್ದಂಡೆ ಯೋಜನೆ ಕಾರ್ಯಗತವಾಗಲು ಕಾರಣರಾಗಿದ್ದು, ಉತ್ಸಾಹಿ ನಾಯಕರಾದ ಜನಾರ್ದಸ್ವಾಮಿಯ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವ ಕಾಲ ಬಂದಿದೆಯೆಂದು ಹೇಳಿದರು.
ಜಿಲ್ಲೆಯಲ್ಲಿ ಮಹತ್ವದ ಐಐಎಸ್ಸಿ, ಡಿ.ಆರ್.ಡಿ.ಓ. ಬಾಬಾ ಆಟೋಮಿಕ್ ರಿಸರ್ಚ್ ಸೆಂಟರ್‌ನಂತಹ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಗಳು ಸ್ಥಾಪನೆಗೊಳ್ಳಲು ಕಾರಣರಾಗಿದ್ದು ಸಂಸದ ಜನಾರ್ದಸ್ವಾಮಿಯವರ ಶಾಶ್ವತ ಸಾಧನೆಯಾಗಿದೆ. ಆದ್ದರಿಂದ ಜನಪರವಾಗಿ ಕೆಲಸ ಮಾಡುವ ಕ್ರೀಯಾಶೀಲ ನಾಯಕರಿಗೆ ಮತದಾರರು ಮಣೆ ಹಾಕುವ ಮೂಲಕ ದುರ್ಗದ ಜನ ತಾವು ಪ್ರಜ್ಞಾವಂತರೆಂದು ಮತ್ತೊಮ್ಮೆ ಸಾಬೀತು ಮಾಡಬೇಕಿದೆಯೆಂದು ಹೇಳಿದರು.
ಯಾದವರಿಗೆ ಬಿಎಸ್‌ವೈ ಕೊಡುಗೆ: ಬಿಜೆಪಿ ಪಕ್ಷದ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಸಿದ್ದೇಶ್ ಯಾದವ್ ಮಾತನಾಡಿ ಬಿಎಸ್.ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರ್ಕಾರ ತನ್ನ ಅನೇಕ ಸಾಧನೆಗಳ ನಡುವೆ ಯಾದವ ಸಮುದಾಯಕ್ಕೆ ಬಂಪರ್ ಕೊಡುಗೆಯನ್ನು ನೀಡಿದೆಯೆಂದರು.
ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ಎಂ.ವಿ. ಹರ್ಷ, ಪ್ರಧಾನ ಕಾರ್ಯದರ್ಶಿ ಕೇಶವಮೂರ್ತಿ,ಎಂ.ಕೆ. ಗಜೇಂದ್ರಶರ್ಮ, ಓಣಿಹಟ್ಟಿ ಗೋಪಾಲ್, ಎಚ್.ಡಿ.ಹಟ್ಟಿ ಚಿಕ್ಕಣ್ಣ, ವೇಣುಗೋಪಾಲ್,ಮದ್ದನಕುಂಟೆ ತಿಪ್ಪೇಸ್ವಾಮಿ, ಫ್ರೊ,ಪರಮೇಶ್ವರಪ್ಪ, ನಾಗರಾಜ್, ಸಲೀಂ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.