ಹಿಂದುಳಿದವರ ಅಭ್ಯುದಯಕ್ಕೆ ಹೋರಾಡಿದ ಅಂಬೇಡ್ಕರ್
ಕ.ಪ್ರ.ವಾರ್ತೆ, ಕಡೂರು, ಏ.14
ಹಿಂದುಳಿದ ಹಾಗೂ ಶೋಷಿತ ಸಮುದಾಯಗಳಿಗೆ ರಾಜಕೀಯ ಸ್ಥಾನಮಾನ ಸಿಗಲು ದೇಶದ ಸಂವಿಧಾನಶಿಲ್ಪಿ ಅಂಬೇಡ್ಕರ್ ಅವರ ಹೋರಾಟವೇ ಕಾರಣ ಎಂದು ಜೆಡಿಎಸ್ ನಗರ ಘಟಕದ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಹೇಳಿದರು.
ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ 123ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಮಹಾ ಮಾನವತಾವಾದಿ ಅಂಬೇಡ್ಕರ್ ದೇಶದ ಜನರ ಶೋಚನೀಯ ಸ್ಥಿತಿ ನೋಡಿ ಶೋಷಿತರ ಮತ್ತು ದಿನದಲಿತರಿಗೆ ಸಮಾನತೆ ಕೊಡಿಸಲು ಹೋರಾಟ ಮಾಡಿ ಯಶಸ್ವಿವರು ಎಂದರು.
ಜಾತ್ಯತೀತ ನಿಲುವು: ಇಂದು ನಾವು ರಾಜಕೀಯ ಮೀಸಲಾತಿ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಸಮಾನ ಅವಕಾಶ ಪಡೆದಿದ್ದೇವೆ. ಇದನ್ನು ಹಿಂದುಳಿದ ವರ್ಗ ಮತ್ತು ದಲಿತ ಸಮುದಾಯಗಳು ಮರೆಯಬಾರದು. ಸಂವಿಧಾನ ರಚನೆಯಲ್ಲಿ ಶೋಷಿತ ಸಮುದಾಯಗಳ ಪರವಾಗಿ ರಾಜ್ಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗ ರೂಪಿಸಿದ ಕೀರ್ತಿ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ. ಜೆಡಿಎಸ್ ಪಕ್ಷ ಸಹ ಅಂಬೇಡ್ಕರ್ ಅವರ ಜಾತ್ಯತೀತ ನಿಲುವುಗಳಿಗೆ ಬದ್ಧವಾಗಿ ರಮೇಶ್ ಜಿಗಜಿಣಗಿ, ಬಿ.ಬಿ.ನಿಂಗಯ್ಯ ಅವರಂತಹ ದಲಿತ ಮುಖಂಡರನ್ನು ಸಮಾಜದ ಮುಖ್ಯವಾಹಿನಿಯಲ್ಲಿ ಪಕ್ಷ ಗುರುತಿಸಿ ಸ್ಥಾನಮಾನ ನೀಡಿದೆ ಎಂದರು.
ಋಣಿಯಾಗಿರಬೇಕು: ಪ್ರಧಾನ ಕಾರ್ಯದರ್ಶಿ ಬಿ.ಟಿ.ಗಂಗಾಧರನಾಯ್ಕ ಮಾತನಾಡಿ, ದೇಶದಲ್ಲಿ ಪ್ರಜಾತಂತ್ರದ ವ್ಯವಸ್ಥೆ ಉದ್ಭವಕ್ಕೆ ಅಂಬೇಡ್ಕ ಅವರ ಹೋರಾಟ ಕಾರಣವಾಗಿದೆ. ನಮ್ಮ ಶೋಷಿತ ಸಮುದಾಯಗಳು ಅಂಬೇಡ್ಕರ್ ಅವರ ಹೋರಾಟದಿಂದ ರಾಜಕೀಯವಾಗಿ ಗುರುತಿಸಲು ಕಾರಣವಾಗಿದೆ. ಆ ನಿಟ್ಟಿನಲ್ಲಿ ಜೆಡಿಎಸ್ ಪಕ್ಷ ಹಿಂದುಳಿದ, ಶೋಷಿತರಿಗೆ ಆಶಾಕಿರಣವಾಗಿ ಗೋಚರಿಸಿ ಸಮಾಜದಲ್ಲಿ ಸಮಾನ ಅವಕಾಶ ಕಲ್ಪಿಸಿ ರಾಜಕೀಯ ಸ್ಥಾನಮಾನ ಸಿಗಲು ನಾವೆಲ್ಲರೂ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಋಣಿಯಾಗಿರಬೇಕು ಎಂದರು.
ಜೆಡಿಎಸ್ನ ಹಿಂದುಳಿದ ವರ್ಗ ವಿಭಾಗದ ಜಿಲ್ಲಾಧ್ಯಕ್ಷ ಸೀಗೇಹಡ್ಲು ಹರೀಶ್ ಮಾತನಾಡಿ, ಮುಖಂಡರಾದ ರಾಂಪುರ ಮಹೇಶ್, ರಾಮಯ್ಯ, ಸ್ಕಂದ ರಮೇಶ್, ನಾಗರಾಜ್, ಶಂಕರ್, ನಾಗರಾಜ್, ಶಾಂತಪ್ಪ, ಅಣ್ಣಯ್ಯ,ಪುನೀತ್ ಮತ್ತಿತರರು ಉಪಸ್ಥಿತರಿದ್ದರು.
ಅಂಬೇಡ್ಕರ್ ಜಯಂತಿ ಆಚರಣೆ
ತರೀಕೆರೆ: ರಾಷ್ಟ್ರದ ಪುಣ್ಯ ಪುರುಷರ ಸಮಾಜ ಪರಿವರ್ತಕರ ಜಯಂತಿ ಸಂಭ್ರಮದ ಆಚರಣೆಗಳಿಗೆ ನಿರ್ಭಂದಿಸುವ ಚುನಾವಣಾ ಆಯೋಗದ ಕ್ರಮ ಸಲ್ಲದು, ಇದರಿಂದ ಜಯಂತಿ ಆಚರಣೆ ಮೇಲಿನ ಭಕ್ತಿಭಾವ ಜನರಲ್ಲಿ ಮರೆಯಾಗುತ್ತವೆ ಎಂದು ತಾಲೂಕು ಜೆಡಿಎಸ್ ಅಧ್ಯಕ್ಷ ಎಂ. ನರೇಂದ್ರ ಹೇಳಿದರು. ಅವರು, ತಾಲೂಕು ಜೆಡಿಎಸ್ ಕಚೇರಿಯಲ್ಲಿ ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್ 123ನೇ ಜಯಂತ್ಯುತ್ಸವ ಅಚರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಜೆಡಿಎಸ್ ಮುಖಂಡ ರಫೀಕ್ ಆಹ್ಮದ್, ಜೆಡಿಎಸ್ ಕಾರ್ಯಾಧ್ಯಕ್ಷ ಬಿ.ಪಿ. ವಿಕಾಸ್, ಖಾಸಿಂ,ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

