ಬಂಗಾರಪ್ಪ ಸಾಲಗಾರರಾಗಲು ಕಾರಣ ಮಧು: ಕುಮಾರ
ಶಿವಮೊಗ್ಗ: ಕ್ಷೇತ್ರದ ಕೊನೆ ಹಂತದ ಪ್ರಚಾರದಲ್ಲಿ ಕಾಂಗ್ರೆಸ್ ಮುಖಂಡ ಕುಮಾರ್ ಬಂಗಾರಪ್ಪನವರು ಒಂದು ಸುತ್ತಿನ ಕರಪತ್ರ ಸಮರ ಸಾರಿದ್ದಾರೆ. ತಮ್ಮ ಸಹೋದರಿ ವಿರುದ್ಧ ಹರಿತ ಶಬ್ದಗಳಲ್ಲಿ ಟೀಕಿಸಿ ಮನೆ ಮನೆಗೆ ಕರಪತ್ರ ಮುಟ್ಟಿಸಲು ಸಫಲರಾಗಿದ್ದಾರೆ.
ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಕೋರುವುದನ್ನು ಮರೆತಿಲ್ಲ. ಡಾ. ರಾಜ್ ಅವರ ನಿಲುವಿಗೆ ವಿರುದ್ಧವಾಗಿ ಅವರ ಕುಟುಂಬದವರನ್ನು ರಾಜಕೀಯಕ್ಕೆ ಕರೆತಂದು ಅಭಿಮಾನಿ ದೇವರು ವ್ಯಸನಗೊಳ್ಳುವಂತೆ ಮಾಡಲಾಗಿದೆ ಎಂದು ಕುಮಾರ್ ಬಂಗಾರಪ್ಪ ಕರಪತ್ರದಲ್ಲಿ ಹೇಳಿದ್ದಾರೆ. ತಮ್ಮ ಅಸ್ತಿತ್ವದ ಕೊರತೆಯನ್ನು ನಿವಾರಿಸಿಕೊಳ್ಳಲು ಕಂಡಕಂಡ ನಟ ನಟಿಯರನ್ನು ಬೀದಿಗಿಳಿಸಿ ಜಾತ್ರೆ ನಡೆಸುತ್ತಿದ್ದಾರೆ. ಆದರೂ ರಾಜ್ ಕುಟುಂಬದ ಇತರೆ ಸದಸ್ಯರು ಇವರ ಜೊತೆಗೂಡದೇ ಇರುವುದು ಆ ಮಹಾಚೇತನದ ಆತ್ಮಕ್ಕೆ ಸಲ್ಲಿಸಿದ ಗೌರವ ಎನ್ನಬೇಕೆಂದು ಪ್ರತಿಪಾದಿಸಿದ್ದಾರೆ. ಬಂಗಾರಪ್ಪನವರನ್ನು ಸಾಲಗಾರನನ್ನಾಗಿಸಿ ಸೋಲಿನ ಸರಮಾಲೆಯನ್ನು ಅವರ ಕೊರಳಿಗೆ ಕಟ್ಟಿದ ಮತ್ತು ಸೊರಗಿಸಿ ಸಾವಿನ ಸನಿಹಕ್ಕೆ ತಂದಿದ್ದು ಮಧು ಎಂದು ಟೀಕಿಸಿದ್ದಾರೆ.
ಹೆಗ್ಡೆ ಪರ ಮತಯಾಚನೆ...
ತರೀಕೆರೆ: ಸಮೀಪದ ಅಜ್ಜಂಪುರ ಹೋಬಳಿಯಲ್ಲಿ ತಾಲೂಕು ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ವತಿಯಿಂದ ಉ- ಚಿ ಲೋಕಸಭಾ ಕ್ಷೇತ್ರ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಪರ ಮತಯಾಚಿಸಲಾಯಿತು. ಘಟಕದ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಸಮೀ ಉಲ್ಲಾ ಷರೀಫ್, ಕಾರ್ಯದರ್ಶಿ ವಜೀರ್ ಪಾಷ, ಇದಿನಬ್ಬ, ರಫೀಕ್ ಅಹಮದ್ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

