ಚಿಕ್ಕಮಗಳೂರು

ಗುಂಡಿನ ಸದ್ದು ಕೇಳಿದಾಗ ಓಡಿ ಬಂದೆವು...

Published On :

ಕ.ಪ್ರ.ವಾರ್ತೆ ್ಣ ಮಂಗಳೂರು ್ಣ ಏ. 19
ಶನಿವಾರ ಬೆಳಗ್ಗಿನ ಜಾವ 3.30 ವೇಳೆಗೆ ಶೃಂಗೇರಿ ಚೆಕ್‌ಪೋಸ್ಟ್‌ನಲ್ಲಿ ಪಿಕಪ್ ವಾಹನ ನಿಲ್ಲಿಸಿ ದಾಖಲೆ ನೀಡಲು ತನಿಖಾ ಠಾಣೆ ಒಳಗೆ ಹೋಗಿದ್ದೆವು. ಅಷ್ಟರಲ್ಲಿ ಗುಂಡಿನ ಸದ್ದು ಕೇಳಿಸಿತು, ನಾವು ಹೆದರಿ ಅಲ್ಲಿಂದ ಓಡಿ ÔæàÞ¥æÈÚâ’.
- ಇದು ದನ ಸಾಗಾಟ ಪಿಕಪ್ ವಾಹನದಲ್ಲಿದ್ದ ರಫೀಕ್ ಹೇಳಿಕೆ.
ಶಾಸಕ ಮೊಯ್ದಿನ್ ಬಾವ ನೆರವಿನಿಂದ ಮಂಗಳೂರಲ್ಲಿ ಆಯ್ದ ಸುದ್ದಿಗಾರರ ಜತೆ ರಫೀಕ್ ಮಾತನಾಡಿದರು.
ಜೋಕಟ್ಟೆಯ ಚಾಲಕ ಪ್ರಮೋದ್, ಶೇಕಬ್ಬ, ಸರ್ಫ್ರಾಜ್, ಕಬೀರ್ ಮತ್ತು ನಾನು ತೀರ್ಥಳ್ಳಿಯಿಂದ ಪಿಕಪ್ ವಾಹನದಲ್ಲಿ ದನಗಳನ್ನು ಹೇರಿಕೊಂಡು ಮಂಗಳೂರಿಗೆ ಬರುತ್ತಿದ್ದೆವು. ಮಾರ್ಗ ಮಧ್ಯೆ 3.30ರ ವೇಳೆಗೆ ಶೃಂಗೇರಿ ತನಿಖಾ ಠಾಣೆಯಲ್ಲಿ ವಾಹನ ನಿಲ್ಲಿಸಿದರು. ಚಿಟ್ಟೆ ಹಸಿರು ಬಣ್ಣ ಮಿಲಿಟರಿ ಡ್ರೆಸ್ ಹಾಕಿದ 6 ಮಂದಿ ಇದ್ದರು. ಅವರು ಎಎನ್‌ಎಫ್ ಪೊಲೀಸರು ಇರಬೇಕು.
ನಾನು ಮತ್ತು ಪ್ರಮೋದ್ ವಾಹನದ ದಾಖಲೆ, ಪರವಾನಗಿಯನ್ನು ತೋರಿಸಲು ವಾಹನದಿಂದ ಇಳಿದು, ತನಿಖಾ ಠಾಣೆ ಒಳ ಹೋದೆವು. ವಾಹನದ ಹಿಂಭಾಗದಲ್ಲಿ ಕಬೀರ್ ಮತ್ತು ಶೇಕಬ್ಬ ಕುಳಿತಿದ್ದರು. ಸ್ವಲ್ಪ ಹೊತ್ತಿನಲ್ಲಿ ಗುಂಡಿನ ಸದ್ದು ಕೇಳಿಸಿತು.
ಹೆದರಿ ನಾವು ಅಲ್ಲಿಂದ ಓಡಿದೆವು. ಬೆಳಕು ಆಗುವವರಿಗೆ ನಡೆದು, ಓಡಿ ಬಂದೆವು. ಬೆಳಗ್ಗೆ ಬಸ್ ಹತ್ತಿ ನೇರವಾಗಿ ಶಾಸಕ ಮೊಯ್ದಿನ್ ಬಾವ ಬಳಿ ಹೋಗಿ ಘಟನೆ ವಿವರಿಸಿದೆವು. ಉಳಿದವರು ಎಲ್ಲಿದ್ದಾರೆ ಗೊತ್ತಿಲ್ಲ, ಕಬೀರ್ ಗುಂಡೇಟು ತಗುಲಿ ಸತ್ತಿರುವುದು ಮಂಗಳೂರಿಗೆ ಬಂದ ಬಳಿಕವೇ Væà}Û¡¿ß}Úß’ ಎನ್ನುತ್ತಾರೆ ರಫೀಕ್.
ಪತ್ರಕರ್ತರ ಹಲವು ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ನೀಡಲು ರಫೀಕ್‌ಗೆ ಸಾಧ್ಯವಾಗಿಲ್ಲ.
ಬಂದ್: ಹತ್ಯೆ ವಿರೋಧಿಸಿ ಕೃಷ್ಣಾಪುರ ನಿವಾಸಿಗಳು ಬಂದ್ ಕರೆ ನೀಡಿದ್ದು,  ಪ್ರತಿಭಟನೆ ನಡೆಸಿದ್ದಾರೆ. ಶಾಸಕ ಮೊಯ್ದಿನ್ ಬಾವ ಪ್ರತಿಭಟನೆಕಾರರ ಬಳಿ ತೆರಳಿ ಮುಖ್ಯಮಂತ್ರಿ ಮತ್ತು ಗೃಹಸಚಿವರಿಗೆ ಖುದ್ದು ಮಾತನಾಡಿ, ತನಿಖೆ ನಡೆಸುವಂತೆ ಒತ್ತಾಯಿಸುವುದಾಗಿ ಭರವಸೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.