ಕೃಷ್ಣಪ್ಪ ನಿಲುವು ಅನುಕರಣೀಯ
ಕ.ಪ್ರ.ವಾರ್ತೆ ಕಡೂರು ಏ.24 ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ನಡೆಸುವ ಗಟ್ಟಿ ಧ್ವನಿಯಾಗಿದ್ದ ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದ ಕೃಷ್ಣಪ್ಪನವರ ನಿಧನದಿಂದ ಹಿಂದುಳಿದ ವರ್ಗಗಳಿಗೆ ದಿಕ್ಕು ತೋಚದಂತಾಗಿದೆ ಎಂದು ಜೆಡಿಎಸ್ ನಗರ ಘಟಕದ ಕಾರ್ಯಾಧ್ಯಕ್ಷ ಭಂಡಾರಿ ಶ್ರೀನಿವಾಸ್ ಹೇಳಿದರು.
ಅವರು ಕಡೂರು ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಕೃಷ್ಣಪ್ಪನವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೃಷ್ಣಪ್ಪನವರು ಹಿಂದುಳಿದ ಯಾದವ ಸಮುದಾಯದಲ್ಲಿ ಹುಟ್ಟಿ ತಮ್ಮ ಹೋರಾಟ ಮನೋಭಾವದಿಂದಾಗಿ ರಾಜಕೀಯ ಕ್ಷೇತ್ರದಲ್ಲಿ ಯಶಸ್ಸು ಕಂಡ ಅಪರೂಪದ ವ್ಯಕ್ತಿಯಾಗಿದ್ದರು. ಹಿಂದುಳಿದ ವರ್ಗದ ನಾಯಕರಾಗಿ ಬಿಂಬಿತರಾಗಿ ಕರ್ನಾಟಕ ಸರ್ಕಾರದ ಸಚಿವ ಸಂಪುಟದಲಿ ಹಲವು ಖಾತೆಯನ್ನು ಸಮರ್ಥವಾಗಿ ನಿರ್ವಹಿಸಿದ ಕೀರ್ತಿ ಕೃಷ್ಣಪ್ಪನವರಿಗೆ ಸೇರುತ್ತದೆ ಎಂದವರು ಹೇಳಿದರು.
ಕೃಷ್ಣಪ್ಪ ಅವರ ನಿಲುವುಗಳು, ಆದರ್ಶಗಳು ಪ್ರತಿಯೊಬ್ಬರಿಗೂ ಅನುಕರಣೀಯವಾಗಿದ್ದು, ಅವರ ಅಕಾಲಿಕ ನಿಧನದಿಂದ ದುಃಖ ಭರಿತರಾಗಿರುವ ಅವರ ಕುಟುಂಬಕ್ಕೆ ಶಾಂತಿ ಸಾಮಾಧಾನ ಲಭಿಸಿ ಅವರ ಆತ್ಮಕ್ಕೆ ಶಾಂತಿ ಲಭಿಸಲಿ ಎಂದು ಕೋರಿದರು.
ರಾಜಕೀಯದಲ್ಲಿ ಯಶಸ್ಸು: ತಾಲೂಕು ಜೆಡಿಎಸ್ ಅಧ್ಯಕ್ಷ ಕೆ.ಎಂ. ಮಹೇಶ್ವರಪ್ಪ ಮಾತನಾಡಿ, ಶೋಷಿತ ಸಮುದಾಯಗಳ ಪರವಾಗಿ ತಮ್ಮ ರಾಜಕೀಯವನ್ನು ಮೀಸಲಾಗಿಟ್ಟು ಜನರ ಸೇವೆಯಲ್ಲಿ ತೊಡಗಿದ್ದ
ಕೃಷ್ಣಪ್ಪನವರು ಹಿಂದುಳಿದ ಯಾದವ ಸಮಾಜದ ಸಂಘಟನೆ ಮಾಡುವ ಮೂಲಕ ರಾಜ್ಯದ ರಾಜಕೀಯದಲ್ಲಿ ಯಶಸ್ಸು ಕಂಡಿದ್ದರು. ಅವರ ನಿಧನದಿಂದ ಜೆಡಿಎಸ್ಪ್ಕ್ಷ ಸೇರಿದಂತೆ ಇಡೀ ರಾಜ್ಯಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ ಎಂದರು. ನಗರ ಘಟಕದ ಅಧ್ಯಕ್ಷ ಕೆ. ವಿ. ವಾಸು ಮಾತನಾಡಿ, ಕೃಷ್ಣಪ್ಪನವರ ಹೋರಾಟದ ಮನೋಭಾವ ಹಂತ ಹಂತವಾಗಿ ಮೇಲೇರುತ್ತಾ ಬಂದಿದ್ದ ಅವರು ಮೂರು ಬಾರಿ ಶಾಸಕರಾಗಿ, ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಹಿಂದುಳಿದ ವರ್ಗಕ್ಕೆ ಸಾಮಾಜಿಕ ನ್ಯಾಯ ಕೊಡಿಸುವಲ್ಲಿ ಶ್ರಮಿಸಿದ ನಾಯಕರಲ್ಲಿ ಕೃಷ್ಣಪ್ಪ ಕೂಡ ಮುಖ್ಯ. ಅವರ ಅಕಾಲಿಕ ನಿಧನದಿಂದ ಶೋಷಿತ ವರ್ಗ ಉತ್ತಮ ನಾಯಕನ್ನು ಕಳೆದುಕೊಂಡಿದೆ ಎಂದರು. ಜೆಡಿಎಸ್ ಹಿಂದುಳಿದ ವರ್ಗದ ತಾಲೂಕು ಅಧ್ಯಕ್ಷ ಎನ್. ಇಮಾಮ್, ಕಾಂತರಾಜು, ಶಂಕರ್, ವಿನಯ ದಂಡಾವತಿ, ರಮೇಶ್, ಶಂಕರ್ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

