ಚಿಕ್ಕಮಗಳೂರು

ಮೇ 1ರಂದು ರಾಜ್ಯಮಟ್ಟದ ಕಥಾ ಕಮ್ಮಟ

Published On :

ಶಿವಮೊಗ್ಗ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಹೊನ್ನೆಮರಡುವಿನ ಸಾಹಸ ಸಮನ್ವಯ ಕೇಂದ್ರ ಸಂಯುಕ್ತವಾಗಿ ಮೇ 1ರಿಂದ ಮೂರುದಿನ ರಾಜ್ಯ ಮಟ್ಟದ ಕಥಾ ಕಮ್ಮಟ ನಡೆಸಲು ತೀರ್ಮಾನಿಸಿವೆ.
ಕನ್ನಡ ಸಾಹಿತ್ಯ ಪರಿಷತ್ತು ಶತಮಾನೋತ್ಸವದ ಅಂಗವಾಗಿ ಆಯೋಜಿಸಿರುವ ಈ ಕಾರ್ಯಕ್ರಮವು ಸಾಗರ ತಾಲೂಕು ತಾಳಗುಪ್ಪ ಸಮೀಪದ, ಶರಾವತಿ ನದಿಯ ಲಿಂಗನಮಕ್ಕಿ ಆಣೆಕಟ್ಟೆಯ ಹಿನ್ನೀರಿನಲ್ಲಿರುವ ಹೊನ್ನೆಮರಡು ಸುಂದರ ಪ್ರಕೃತಿ ಧಾಮದಲ್ಲಿ ಮೂರು ದಿನಗಳ ರಾಜ್ಯಮಟ್ಟದ ಕಥಾ ಕಮ್ಮಟ ನಡೆಯುವುದು.
ಕಥೆ ಬರೆಯಲು ಆಸಕ್ತಿಯಿದ್ದು, ಮೂರು ದಿನ ಕಮ್ಮಟದಲ್ಲಿ ಇರಬಯಸುವ ಆಸಕ್ತರು ಹೆಸರು ನೋಂದಾಯಿಸಿಕೊಳ್ಳಲು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಿ. ಮಂಜುನಾಥ ಕೋರಿದ್ದಾರೆ.
ಕಥಾ ಕಮ್ಮಟಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಕುಂ. ವೀರಭದ್ರಪ್ಪ, ಹಿರಿಯ ಸಾಹಿತಿ ಡಾ. ನಾ. ಡಿಸೋಜ, ಕಥೆಗಾರರಾದ ಡಾ. ಲೋಕೇಶ ಅಗಸನಕಟ್ಟೆ, ವಸುದೇಂದ್ರ, ಎಸ್. ದಿವಾಕರ, ಡಾ. ಟಿ.ಪಿ. ಅಶೋಕ ಸೇರಿದಂತೆ ಡಾ. ಎಚ್.ಟಿ. ಕೃಷ್ಣಮೂರ್ತಿ, ಡಾ. ಕುಂಸಿ ಉಮೇಶ್, ಡಾ. ಮಾರ್ಷಲ್ ಶರಾಂ, ಡಾ. ಜಯಶೀಲ, ಡಾ. ಸಬೀತ ಬನ್ನಾಡಿ, ಡಾ. ಶೈಲಜಾ ಹೊಸಳ್ಳೇರ್, ತಲವಾಟ ಶರ್ಮ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ.
ಸಾಗರದ ತಾಳುಗುಪ್ಪಕ್ಕೆ ಬಂದರೆ ಅಲ್ಲಿಂದ ಹೊನ್ನೆಮರಡುವಿಗೆ ವಾಹನದಲ್ಲಿ ಕರೆದುಕೊಂಡು ಹೋಗಲು ವ್ಯವಸ್ಥೆ ಮಾಡಲಾಗುವುದು. ಶಿಬಿರಾರ್ಥಿಗಳಿಗೆ ಊಟ, ತಿಂಡಿ, ವಸತಿ ವ್ಯವಸ್ಥೆ ಮಾಡಲಾಗುವುದು. ಬೋಟಿಂಗ್ ವ್ಯವಸ್ಥೆ, ಪರ್ವತಾರೋಹಣ ಸೇರಿದಂತೆ ಹಲವು ಸೌಲಭ್ಯಗಳಿವೆ. ತಜ್ಞರು ಮಾರ್ಗದರ್ಶನ ಮಾಡಲಿದ್ದಾರೆ. ಸಾಹಿತ್ಯ ಅಕಾಡೆಮಿಯ ಸಹಕಾರ ಕೋರಲಾಗಿದೆ ಎಂದು ಡಿ. ಮಂಜುನಾಥ ವಿವರಿಸಿದ್ದಾರೆ.
ರಾಜ್ಯದ ಬೇರೆ ಬೇರೆ ಜಿಲ್ಲೆಯ ಆಸಕ್ತರು, ವಿದ್ಯಾರ್ಥಿಗಳು ಕಮ್ಮಟಕ್ಕೆ ಬರಲು ನೋಂದಾಯಿಸಿಕೊಂಡಿದ್ದಾರೆ. ಆಸಕ್ತರು ತಕ್ಷಣ ಸಂಪರ್ಕಿಸಲು ಕೋರಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.